
ಬೆಂಗಳೂರು, ಅಕ್ಟೋಬರ್ 19: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿದ್ದ ಕಸ್ಟಮ್ಸ್ ಅಧೀಕ್ಷಕರೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಲೋಕಪಾಲ್, ಸಿಬಿಐಗೆ ಸೋಮವಾರ ಆದೇಶ ಹೊರಡಿಸಿದೆ. ಈ ಹಿಂದೆ ಕೆಂಪೇಗೌಡ ಏರ್ಪೋರ್ಟ್ ಮತ್ತು ಏರ್ ಕಾರ್ಗೋ ಕಾಂಪ್ಲೆಕ್ಸ್ನಲ್ಲಿ ಕಸ್ಟಮ್ಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಆಂಥೋನಿ ರಾಜ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಲೋಕಪಾಲ್ ಸೂಚನೆ ನೀಡಿದೆ.
ಏನಿದು ಪ್ರಕರಣ?
ಆಂಥೋನಿ ರಾಜ್ ಕಸ್ಟಮ್ಸ್ ಅಧೀಕ್ಷಕರಾಗಿದ್ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಪಾಸ್ಪೋರ್ಟ್ಗಳನ್ನು ಬಲವಂತವಾಗಿ ಪಡೆದುಕೊಂಡು ಡ್ಯೂಟಿ ಫ್ರೀ ಮದ್ಯದ ಅಂಗಡಿಯಿಂದ ವಿವಿಧ ಬ್ರ್ಯಾಂಡ್ಗಳ ಮದ್ಯವನ್ನು ತಮ್ಮದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ಮೂಲಕ ಅಕ್ರಮವಾಗಿ ಖರೀದಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಜೊತೆಗೆ ಸರ್ಕಾರಕ್ಕೆ ತೆರಿಗೆ ವಂಚನೆಯುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ ದಸರಾ ಸಂಭ್ರಮ: ರಂಗು ರಂಗಿನ ರಂಗೋಲಿಗೆ ಪ್ರಯಾಣಿಕರು ಫಿದಾ
ಅಂತಾರಾಷ್ಟ್ರೀಯ ಪ್ರಯಾಣಿಕರ ಪಾಸ್ಪೋರ್ಟ್ಗಳನ್ನು ಬಳಸಿಕೊಂಡು ಮದ್ಯ ಖರೀದಿಸಿರುವುದಲ್ಲದೇ ಸಹಾಯ ಮಾಡಿದ ಪ್ರಯಾಣಿಕರಿಗೆ ಉಡುಗೊರೆಗಳನ್ನು ನೀಡಿರುವ ಆರೋಪವು ಕೇಳಿಬಂದಿದೆ. ಹೀಗಾಗಿ ಈ ಕೃತ್ಯವು 1988ರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷಾರ್ಹವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
.liveTvWebbx {
background: #fff;
margin-bottom: 10px;
}
.liveTvWebbx span {
display: flex;
align-items: center;
justify-content: center;
background: #dc0000;
padding: 5px 0;
}
.liveTvWebbx span a {
color: #fff;
font-size: 22px;
display: flex;
align-items: center;
justify-content: center;
font-weight: 600;
line-height: 28px;
text-decoration: none;
}
.liveTvWebbx span a:hover{color:#fff;}
.liveTvWebbx span a svg {
width: 2rem;
height: 2rem;
margin-right: 5px;
display: inline-block;
flex-shrink: 0;
vertical-align: middle;
fill: none;
stroke: #fff;
stroke-width: 2;
stroke-linecap: round;
stroke-linejoin: round;
transform-origin: center;
animation: livePulse 1.3s ease-in-out infinite;
}
@keyframes livePulse {
0% {
transform: scale(1);
opacity: 1;
}
50% {
transform: scale(1.08);
opacity: 1;
}
100% {
transform: scale(1);
opacity: 1;
}
}
.liveTvWebbx iframe,
.liveTvWebbx amp-iframe {
width: 100%; height: auto; aspect-ratio: 16 / 9; display: block; border: none;
}
LIVE TV
document.addEventListener(‘DOMContentLoaded’, function () {
let liveTV = document.querySelector(‘.live-tv-tracking’);
if (liveTV) {
liveTV.addEventListener(‘click’, function () {
if (typeof dataLayer !== ‘undefined’) {
dataLayer.push({
‘event’: ‘article_live_tv_click’,
‘widget_name’: ‘article_live_tv’,
‘click_location’: ‘article’
});
}
});
}
});
ಸರ್ಕಾರಿ ಬೊಕ್ಕಸಕ್ಕೆ ಲಕ್ಷಾಂತರ ರೂ ನಷ್ಟ
ಆಂಥೋನಿ ರಾಜ್ ಹಲವು ವಾರಗಳು ಅಥವಾ ತಿಂಗಳುಗಳ ಕಾಲ ಹೀಗೆ ಅಕ್ರಮವಾಗಿ ಮದ್ಯ ಖರೀದಿಸುತ್ತಿದ್ದರು ಎನ್ನಲಾಗಿದ್ದು, ತಮ್ಮ ವೈಯಕ್ತಿಕ ಲಾಭಕ್ಕಾಗಿ ತೆರಿಗೆ ವಂಚನೆ ಮಾಡಿದ್ದು, ಸರ್ಕಾರಿ ಬೊಕ್ಕಸಕ್ಕೆ ಲಕ್ಷಾಂತರ ರೂ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಪ್ರಾಥಮಿಕ ತನಿಖೆಗೆ ಸಿವಿಸಿಗೆ ಸೂಚನೆ
ಇನ್ನು 2026ರ ಫೆಬ್ರವರಿ 13ರಂದು ಲೋಕಪಾಲ್ ಪೀಠವು ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಪ್ರಾಥಮಿಕ ತನಿಖೆ ನಡೆಸಿ, ನಾಲ್ಕು ವಾರಗಳೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು. ಅದರಂತೆ, ಕೇಂದ್ರ ಜಾಗೃತ ಆಯೋಗವು 2026ರ ಜುಲೈ 28ರಂದು ಪ್ರಾಥಮಿಕ ತನಿಖಾ ವರದಿಯನ್ನು ಲೋಕಪಾಲ್ಗೆ ಸಲ್ಲಿಸಿತ್ತು. ಪ್ರಕರಣಯನ್ನು ತನಿಖೆ ಬಳಿಕ ಇದೀಗ ಕಸ್ಟಮ್ಸ್ ಅಧೀಕ್ಷಕ ಆಂಥೋನಿ ರಾಜ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
