Hashtagintro

‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಎಲಿಮಿನೇಷನ್ ಬಳಿಕ ಕಾವ್ಯಾ ಗೌಡ ಮಾತು

‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಎಲಿಮಿನೇಷನ್ ಬಳಿಕ ಕಾವ್ಯಾ ಗೌಡ ಮಾತು

ನಟಿ ಕಾವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ನನ್ನ ಜರ್ನಿ ತುಂಬಾ ಚೆನ್ನಾಗಿತ್ತು. ಅಲ್ಲಿ ನನಗೆ ತುಂಬ ನೆನಪುಗಳು ಇವೆ. ನಾನು ಇನ್ನಷ್ಟು ತಂತ್ರಗಾರಿಕೆ ಮಾಡಿಕೊಳ್ಳಬೇಕಿತ್ತು. ಅದರಲ್ಲಿ ನಾನು ಸ್ವಲ್ಪ ವೀಕ್ ಆದೆ ಎನಿಸುತ್ತದೆ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದೇನೆ. ಆರು ವಾರ ನಿರಂತರವಾಗಿ ಹಾಗೆಯೇ ಮಾಡಬೇಕಿತ್ತು. ಟಾಪ್ 5 ತನಕ ಇರಬೇಕು ಎಂಬುದು ನನ್ನ ಆಸೆ ಆಗಿತ್ತು. ನಮ್ಮ ಲೆಕ್ಕಾಚಾರ ಯಾವುದೂ ಕೂಡ ಬಿಗ್ ಬಾಸ್ ಮನೆಯಲ್ಲಿ ನಡೆಯಲ್ಲ. ಆ ಮನೆಯಲ್ಲಿ ನನ್ನ ಋಣ ಅಷ್ಟೇ ಇತ್ತು ಎನಿಸುತ್ತದೆ. ಜನರ ಪ್ರೀತಿಗಳಿಸಿದ್ದೇನೆ. ಅದರ ಬಗ್ಗೆ ನನಗೆ ಖುಷಿ ಇದೆ’ ಎಂದು ಕಾವ್ಯಾ ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language