Hashtagintro

ಎಆರ್ ರೆಹಮಾನ್ ನಿರ್ಮಿಸಲಿರುವ ಗಾಯಕಿಯ ಜೀವನ ಆಧರಿತ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ: ಯಾವುದು ಆ ಚಿತ್ರ?

ಎಆರ್ ರೆಹಮಾನ್ ನಿರ್ಮಿಸಲಿರುವ ಗಾಯಕಿಯ ಜೀವನ ಆಧರಿತ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ: ಯಾವುದು ಆ ಚಿತ್ರ?

ರುಕ್ಮಿಣಿ ವಸಂತ್ ಅವರಿಗೆ ಪರಭಾಷೆಗಳಲ್ಲಿ ಕೆಲವು ಅದ್ಭುತ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಪ್ರತಿಭೆಯನ್ನು ಸಾರಿ ಹೇಳಿರುವ ನಟಿಗೆ ಈಗ ಪ್ಯಾನ್ ಇಂಡಿಯಾದಿಂದ ಅವಕಾಶಗಳು ಒಂದರ ಹಿಂದೊಂದು ಬರುತ್ತಲೇ ಇವೆ. ಈಗಾಗಲೇ ತೆಲುಗು, ತಮಿಳು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ರುಕ್ಮಿಣಿ ಇದೀಗ ಮಲಯಾಳಂಗೆ ಪದಾರ್ಪಣೆ ಮಾಡಿದ್ದಾರೆ. ಇದರ ಜೊತೆಗೆ ಇದೀಗ ಮತ್ತೊಂದು ಒಳ್ಳೆಯ ಸಿನಿಮಾ ಅವಕಾಶವೊಂದು ರುಕ್ಮಿಣಿ ಅವರನ್ನು ಅರಸಿ ಬಂದಿದೆ. ಎಆರ್ ರೆಹಮಾನ್ ನಿರ್ಮಾಣ ಮಾಡಲಿರುವ ಖ್ಯಾತ ಗಾಯಕಿಯೊಬ್ಬರ ಜೀವನ ಆಧರಿಸಿದ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಟನೆ ಮಾಡಲಿದ್ದಾರೆ.

ಈಗಾಗಲೇ ಕರ್ನಾಟಕ ಸಂಗೀತ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ ಜೀವನ ಆಧರಿಸಿದ ಸಿನಿಮಾ ಸೆಟ್ಟೇರಿದೆ. ಆ ಸಿನಿಮಾನಲ್ಲಿ ಎಂಎಸ್ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟನೆ ಮಾಡಲಿದ್ದಾರೆ. ಇದೀಗ ಮತ್ತೊಬ್ಬ ಲಿಜೆಂಡರಿ ಗಾಯಕಿಯ ಜೀವನವನ್ನು ತೆರೆಗೆ ತರಲು ಸಿದ್ಧತೆ ಆರಂಭವಾಗಿದೆ. ಖ್ಯಾತ ಗಾಯಕಿ ಪಿ ಸುಶೀಲಾ ಅವರ ಜೀವನ ಕಥೆ ಕೂಡ ಸಿನಿಮಾವಾಗಿ ತೆರೆಕಾಣಲಿದೆ ಎನ್ನಲಾಗುತ್ತಿದೆ. ಈ ಬಯೋಪಿಕ್‌ನಲ್ಲಿ ನಟಿ ರೂಕ್ಮಿಣಿ ವಸಂತ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಈ ಬಗ್ಗೆ ಆರಂಭಿಕ ಹಂತದ ಮಾತುಕತೆ ಮುಗಿದಿವೆ ಎನ್ನಲಾಗುತ್ತಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ ಸುಶೀಲಾ ಅವರ ಬಯೋಪಿಕ್​​​ ಅನ್ನು ಆಸ್ಕರ್ ವಿಜೇತ ಎಆರ್ ರೆಹಮಾನ್ ನಿರ್ಮಾಣ ಮಾಡಲಿದ್ದಾರಂತೆ.

ದಕ್ಷಿಣ ಭಾರತದ ಚಲನಚಿತ್ರ ಸಂಗೀತ ಇತಿಹಾಸದಲ್ಲಿ ತನ್ನದೇ ಆದ ಮುದ್ರೆಯನ್ನು ಮೂಡಿಸಿದ ಗಾಯಕಿ ಪಿ. ಸುಶೀಲಾ ಅವರ ಜೀವನವನ್ನು ಕೂಡ ಸಿನಿಮಾವಾಗಿ ತೆರೆಗೆ ಬರಲಿದೆ. ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡು ಅಭಿಮಾನಿಗಳಿಂದ, ಆಪ್ತರಿಂದ ಸುಶೀಲಮ್ಮ ಎಂದೇ ಕರೆಸಿಕೊಳ್ಳುತ್ತಿದ್ದ ಪಿ ಸುಶೀಲ ಅವರ ಜೀವನವು ಅನೇಕ ತಿರುವುಗಳಿಂದ ಕೂಡಿದ್ದು, ಅವರ ಜೀವನ ಕತೆಯು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗಾಗಿ ಅವರ ಕತೆಯನ್ನು ಸಿನಿಮಾ ಮಾಡಲು ಯೋಜನೆ ರೂಪಿತವಾಗಿದೆ.

ಇದನ್ನೂ ಓದಿ:ತೆಲುಗು ಸ್ಟಾರ್ ನಟನ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ: ನಿರ್ದೇಶಕ ಯಾರು?

ಖುದ್ದು ಪಿ ಸುಶೀಲ ಅವರಿಗೆ ತಮ್ಮ ಜೀವನ ಕತೆ ಸಿನಿಮಾ ಆಗಬೇಕೆಂಬ ಆಸೆ ಇದ್ದು, ಆ ಆಸೆಯನ್ನು ಎಆರ್ ರೆಹಮಾನ್ ಅವರ ಬಳಿ ಹೇಳಿಕೊಂಡಿದ್ದರಂತೆ. ಪಿ ಸುಶೀಲಾ ಅವರು 1953 ರಿಂದಲೂ ಸಿನಿಮಾಗಳಲ್ಲಿ ಹಾಡು ಹಾಡುತ್ತಿದ್ದಾರೆ. ಈಗ ಅವರಿಗೆ 90 ವರ್ಷ ವಯಸ್ಸು. ಈಗ ಗಾಯನದಿಂದ ನಿವೃತ್ತಿ ಪಡೆದಿದ್ದಾರೆ. ಸಾವಿರಾರು ಹಾಡುಗಳನ್ನು ಹಾಡಿರು ಪಿ ಸುಶೀಲಾ ಅವರು ಕನ್ನಡದಲ್ಲಿ ‘ಸ್ಕೂಲ್ ಮಾಸ್ಟರ್’, ‘ಓಹಿಲೇಶ್ವರ’. ‘ಭೂಕೈಲಾಸ’ ಸಿನಿಮಾಗಳಿಂದ ಗಾಯನ ಆರಂಭಿಸಿ, 2000 ದಶಕದ ವರೆಗೆ ಸಿನಿಮಾಗಳಿಗೆ ಹಾಡಿದ್ದಾರೆ. ಕನ್ನಡದಲ್ಲಿ ಹಲವು ಹಿಟ್ ಹಾಡುಗಳಿಗೆ ಸುಶೀಲಾ ಅವರು ಧ್ವನಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language