Hashtagintro

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ; ಅತಿವೇಗದ ಸಬ್​ಸ್ಕ್ರಿಪ್ಷನ್ ಸೇರಿ ಪ್ರಮುಖ ದಾಖಲೆಗಳು; ಹೊಸ ಇತಿಹಾಸ

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ; ಅತಿವೇಗದ ಸಬ್​ಸ್ಕ್ರಿಪ್ಷನ್ ಸೇರಿ ಪ್ರಮುಖ ದಾಖಲೆಗಳು; ಹೊಸ ಇತಿಹಾಸ

ಮುಂಬೈ, ಅಕ್ಟೋಬರ್ 21: ರಿಲಯನ್ಸ್ ಇಂಡ್ಟ್ರೀಸ್​ಗೆ ಸೇರಿದ ಜಿಯೋ ಪ್ಲಾಟ್​ಫಾರ್ಮ್ಸ್ ಸಂಸ್ಥೆ ತನ್ನ ಐಪಿಒದ ಮುಕ್ತಾಯಕ್ಕೂ ಮುನ್ನವೇ ಭಾರೀ ಸ್ಪಂದನೆ ಪಡೆದಿದೆ. 30,213 ಕೋಟಿ ರೂ ಮೊತ್ತದ ಐಪಿಒಗೆ ನಿರೀಕ್ಷೆಮೀರಿದಷ್ಟು ಬಿಡ್ಡಿಂಗ್​ಗಳು ಸಲ್ಲಿಕೆಯಾಗಿವೆ. ರೀಟೇಲ್ ಹೂಡಿಕೆದಾರರು ಐಪಿಒದ ಮೊದಲ ದಿನವೇ ಶೇ. 50ಕ್ಕಿಂತ ಹೆಚ್ಚು ಷೇರುಗಳಿಗೆ ಬಿಡ್ ಮಾಡಿದ್ದಾರೆ. ಆಂಕರ್ ಇನ್ವೆಸ್ಟರ್​ಗಳು, ಸಾಂಸ್ಥಿಕ ಹೂಡಿಕೆದಾರರು, ಎನ್​ಐಐಗಳ ಪಾಲಿನ ಷೇರುಗಳಿಗೆ ಹಲವು ಪಟ್ಟು ಹೆಚ್ಚು ಬಿಡ್ಡಿಂಗ್ ಆಗಿವೆ.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒದಲ್ಲಿ ಒಟ್ಟು 27 ಕೋಟಿ ಷೇರುಗಳನ್ನು ವಿತರಿಸಲಾಗುತ್ತಿದೆ. ಇದರ ಗರಿಷ್ಠ ಮೊತ್ತ 30,213 ಕೋಟಿ ರೂ. ಈ ಪೈಕಿ ಆಂಕರ್ ಇನ್ವೆಸ್ಟರ್ ಕೆಟಗರಿಗೆ ಗರಿಷ್ಠ 8,110 ಕೋಟಿ ರೂ ಮೊತ್ತದ ಷೇರುಗಳನ್ನು ಮೀಸಲಿರಿಸಲಾಗಿದೆ. ಇದಕ್ಕೆ 30 ಪಟ್ಟು ಹೆಚ್ಚು ಮೊತ್ತದ ಬಿಡ್ಡಿಂಗ್ ಸಲ್ಲಿಕೆಯಾಗಿತ್ತು.

ಕ್ಯೂಐಬಿ ಅಥವಾ ಇತರೆ ಸಾಂಸ್ಥಿಕ ಹೂಡಿಕೆದಾರರ ಕೆಟಗರಿಯಲ್ಲಿ ಏಳು ಪಟ್ಟು ಹೆಚ್ಚು ಬಿಡ್ಡಿಂಗ್ ಸಲ್ಲಿಕೆಯಾಗಿದೆ. ಎನ್​ಆರ್​ಐ, ಹೆಚ್​ಎನ್1 (ಶ್ರೀಮಂತರು) ಮಂದಿ ಇರುವ ಎನ್​ಐಐ ಕೆಟಗರಿಯಲ್ಲೂ ಮೀಸಲಾದ ಮೊತ್ತಕ್ಕಿಂತ ಹೆಚ್ಚು ಬಿಡ್ಡಿಂಗ್ ಆಗಿದೆ.

ಇದನ್ನೂ ಓದಿ: ಮಾರ್ಕೊ ರೂಬಿಯೋ-ಮುಕೇಶ್ ಅಂಬಾನಿ ಭೇಟಿ; ಅಮೆರಿಕದ ವಿದೇಶಾಂಗ ಸಚಿವನಿಗೆ ರಿಲಯನ್ಸ್ ದಿಗ್ಗಜನೊಂದಿಗೆ ಏನು ಕೆಲಸ? ಇಲ್ಲಿವೆ ಕಾರಣಗಳು

ಇನ್ನು, ಶೇ. 35ಕ್ಕಿಂತ ಹೆಚ್ಚು ಷೇರುಪಾಲು ಹೊಂದಿರುವ ರೀಟೇಲ್ ಹೂಡಿಕೆದಾರರ ಕೆಟಗರಿಯೂ ಬೇಗ ಪೂರ್ಣಗೊಳ್ಳುತ್ತಿದೆ. ಇವತ್ತಷ್ಟೇ ಈ ಕೆಟಗರಿಗೆ ಸಬ್​ಸ್ಕ್ರಿಪ್ಷನ್ ಅವಕಾಶ ಶುರುವಾಗಿದೆ. ಮೊದಲ ದಿನವೇ ಶೇ. 50ಕ್ಕಿಂತ ಹೆಚ್ಚು ಷೇರುಗಳಿಗೆ ಬಿಡ್ಡಿಂಗ್ ಸಲ್ಲಿಕೆಯಾಗಿದೆ. ಅಕ್ಟೋಬರ್ 23ರಷ್ಟರಲ್ಲಿ ಇದು ಹಲವು ಪಟ್ಟು ಹೆಚ್ಚು ಸಬ್​ಸ್ಕ್ರಿಪ್ಷನ್ ಪಡೆಯುವ ನಿರೀಕ್ಷೆ ಇದೆ. ಇದರ ಮಧ್ಯೆ ಜಿಯೋ ಐಪಿಒದ ಜಿಎಂಪಿ ಕೂಡ ಸತತವಾಗಿ ಏರಿಕೆ ಕಾಣುತ್ತಾ ಬರುತ್ತಿದೆ.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ ಈವರೆಗೆ ಸಾಧಿಸಿದ ದಾಖಲೆಗಳಿವು…

  • ಭಾರತದ ಅತಿದೊಡ್ಡ ಐಪಿಒ: ಹ್ಯೂಂಡಾಯ್ ಮೋಟಾರ್ ಇಂಡಿಯಾ ಇತ್ತೀಚೆಗೆ 27,870 ಕೋಟಿ ರೂ ಮೊತ್ತದ ಐಪಿಒ ಪೂರ್ಣಗೊಳಿಸಿತ್ತು. ಈಗ ಜಿಯೋ ಐಪಿಒ 30,213 ಕೋಟಿ ರೂನದ್ದಾಗಿದೆ. ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎನಿಸಿದೆ.
  • ಅತಿವೇಗದ ಐಪಿಒ: ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒದ ಆಂಕರ್ ಇನ್ವೆಸ್ಟರ್ಸ್ ಕೆಟಗರಿಯಲ್ಲಿ ಕೇವಲ 100 ನಿಮಿಷಗಳ ಅವಧಿಯೊಳಗೆ ಪೂರ್ಣ ಸಬ್​ಸ್ಕ್ರಿಪ್ಷನ್ ಮುಟ್ಟಿತ್ತು. ದೊಡ್ಡ ಸಂಸ್ಥೆಗಳ ಪೈಕಿ, ಕಡಿಮೆ ಅವಧಿಯಲ್ಲಿ ಈ ಕೆಟಗರಿಯ ಸಬ್​ಸ್ಕ್ರಿಪ್ಷನ್ ಪೂರ್ಣಗೊಳಿಸಿದ ದಾಖಲೆ ಇದು.
  • ಕ್ಯೂಐಬಿ ಕೆಟಗರಿ 28 ನಿಮಿಷಕ್ಕೆ ಪೂರ್ಣ: ಕ್ವಾಲಿಫೈಡ್ ಇನ್ಸ್​ಟಿಟ್ಯೂಷನಲ್ ಇನ್ವೆಸ್ಟರ್ಸ್ ಕೆಟಗರಿಯಲ್ಲಿ ಕೇವಲ 28 ನಿಮಿಷಗಳಲ್ಲಿ ಪೂರ್ಣ ಸಬ್​ಸ್ಕ್ರಿಪ್ಷನ್ ಮುಗಿದಿತ್ತು. ಇದೂ ಕೂಡ ದಾಖಲೆಯೇ.

ಹಾಗೆಯೇ, ಎನ್​ಐಐ ಕೆಟಗರಿಯಲ್ಲೂ ಬೇಗನೇ ಸಬ್​ಸ್ಕ್ರಿಪ್ಷನ್ ಮುಗಿದಿದೆ. ಉದ್ಯೋಗಿಗಳಿಗೆ ಮೀಸಲಾದ ಷೇರುಗಳೂ ಕೂಡ ಪೂರ್ಣ ಬಿಡ್ಡಿಂಗ್ ಪಡೆದಿವೆ. ರೀಟೇಲ್ ಕೆಟಗರಿ ಎರಡನೇ ದಿನ ಪೂರ್ಣ ಸಬ್​ಸ್ಕ್ರಿಪ್ಷನ್ ಪಡೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ: ಜಿಯೋ ಐಪಿಒ; ಆಂಕರ್ ಇನ್ವೆಸ್ಟರ್ಸ್ ನಂತರ ಸಾಂಸ್ಥಿಕ ಹೂಡಿಕೆದಾರರಿಂದಲೂ ಭರ್ಜರಿ ಸ್ಪಂದನೆ

ಜಿಯೋ ಐಪಿಒ ವಿವರ

  • ಒಟ್ಟು ಷೇರುಗಳು: 27 ಕೋಟಿ
  • ಷೇರುಬೆಲೆ: 1,065-1,119 ರೂ
  • ದಿನಾಂಕ: ಅಕ್ಟೋಬರ್ 21ರಿಂದ 23ರವರೆಗೆ
  • ಲಿಸ್ಟಿಂಗ್ ದಿನಾಂಕ: ಅಕ್ಟೋಬರ್ 28ಕ್ಕೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language