Hashtagintro

ಜನ ವೀಕ್ಷಿಸಲಿ, ಬಿಡಲಿ, ನಿಮ್ಮ ವಿಡಿಯೋ ಪೋಸ್ಟ್​ಗಳಿಗೆ ಸಿಗುತ್ತೆ ಲಕ್ಷಾಂತರ ರೂ ಹಣ: ಎಕ್ಸ್​ನಲ್ಲಿ ಹೊಸ ಇನ್ಸೆಂಟಿವ್ ಪ್ರೋಗ್ರಾಮ್

ಜನ ವೀಕ್ಷಿಸಲಿ, ಬಿಡಲಿ, ನಿಮ್ಮ ವಿಡಿಯೋ ಪೋಸ್ಟ್​ಗಳಿಗೆ ಸಿಗುತ್ತೆ ಲಕ್ಷಾಂತರ ರೂ ಹಣ: ಎಕ್ಸ್​ನಲ್ಲಿ ಹೊಸ ಇನ್ಸೆಂಟಿವ್ ಪ್ರೋಗ್ರಾಮ್

ನವದೆಹಲಿ, ಅಕ್ಟೋಬರ್ 21: ಇನ್ಸ್​ಟಾ, ಯೂಟ್ಯೂಬ್​ಗಳಲ್ಲಿ ಪೋಸ್ಟ್ ಮಾಡಲಾಗುವ ವಿಡಿಯೋಗಳಿಗೆ ಸುಮ್ಮನೆ ಹಣ ಸಿಗೋದಿಲ್ಲ. ಅರ್ಹ ಚಾನಲ್​ಗಳು ಮತ್ತು ಕನಿಷ್ಠ ವೀಕ್ಷಣೆ ದಾಟಿದ ವಿಡಿಯೋಗಳಿಗೆ ಅವುಗಳ ವೀಕ್ಷಣೆ ಸಂಖ್ಯೆ ಮತ್ತು ಅವಧಿ ಆಧಾರದ ಮೇಲೆ ಪೇಮೆಂಟ್ ಸಿಗುತ್ತದೆ. ಆದರೆ, ಪೋಸ್ಟ್ ಮಾಡಿದ ಎಲ್ಲಾ ವಿಡಿಯೋಗಳಿಗೂ ಪೇಮೆಂಟ್ ಸಿಗುವಂತಿದ್ದರೆ? ಇಲಾನ್ ಮಸ್ಕ್ ಅವರ ಎಕ್ಸ್ ಪ್ಲಾಟ್​ಫಾರ್ಮ್ ಅಂಥದ್ದೊಂದು ಆಫರ್ ನೀಡಲು ಮುಂದಾಗಿದೆ. ತನ್ನ ಪ್ಲಾಟ್​ಫಾರ್ಮ್​ನಲ್ಲಿ ವಿಡಿಯೋ ಕಂಟೆಂಟ್​ಗಳಿಗೆ ಉತ್ತೇಜನ ನೀಡಲು ವಿಡಿಯೋ ಕಿಕ್​ಸ್ಟಾರ್ಟ್ ಬೋನಸ್ ಎನ್ನುವ ಹೊಸ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಯಲ್ಲಿ ಅರ್ಹ ಕಂಟೆಂಟ್ ಕ್ರಿಯೇಟರ್​ಗಳಿಗೆ 3,000 ಡಾಲರ್ ಅಥವಾ 2.85 ಲಕ್ಷ ರೂ ಪೇಮೆಂಟ್ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಈ ಯೋಜನೆಯ ಪೈಲಟ್ ಹಂತ ಅಥವಾ ಪ್ರಾಯೋಗಿಕ ಹಂತ ಈಗ ಆರಂಭವಾಗಿದೆ. ಸ್ಪೇಸ್​ಎಕ್ಸ್​ಎಐನ ಕ್ರಿಯೇಟರ್ ಪ್ರಾಡಕ್ಟ್ ಮುಖ್ಯಸ್ಥರಾದ ಅಲೀಗ್ರಾ ಜಾಚಿಯಾ ಅವರು ನೀಡಿರುವ ಮಾಹಿತಿ ಪ್ರಕಾರ, ಕಂಟೆಂಟ್ ಕ್ರಿಯೇಟರ್ಸ್​ಗೆ ನೀಡಲಾಗುವ ಪೇಮೆಂಟ್, ವಿಡಿಯೋ ವೀಕ್ಷಣೆ ಸಂಖ್ಯೆ ಅಥವಾ ಅವಧಿಯ ಮೇಲೆ ಅವಲಂಬಿತವಾಗಿರುವುದಿಲ್ಲ. ಆದರೆ, ಅರ್ಹ ಕಂಟೆಂಟ್ ಕ್ರಿಯೇಟರ್ಸ್ ಅನ್ನು ಎಕ್ಸ್ ಸಂಸ್ಥೆಯೇ ಆಯ್ಕೆ ಮಾಡುತ್ತದೆ. ಆ ಆಯ್ಕೆ ಮಾನದಂಡಗಳೇನು ಎಂಬುದನ್ನು ಬಹಿರಂಗಪಡಿಸಿಲ್ಲ.

ಅಲೀಗ್ರಾ ಜಾಚಿಯಾ ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಭಾರತದ ಸರ್ವಂ ಈಗ ಅಮೆರಿಕದ ಎಐ ಮಾಡಲ್​ಗಳನ್ನೂ ಹೋಸ್ಟ್ ಮಾಡಬಲ್ಲುದು: ಸಹ-ಸಂಸ್ಥಾಪಕ ಪ್ರತ್ಯೂಶ್ ಕುಮಾರ್

ಗಮನಿಸಬೇಕಾದ ಸಂಗತಿ ಎಂದರೆ, ಎಕ್ಸ್​ನಲ್ಲೇ ಇದೇ ರೀತಿಯ ಇನ್ನೊಂದು ಪ್ರೋಗ್ರಾಮ್ ಚಾಲನೆಯಲ್ಲಿದೆ. ಅದು ಒರಿಜಿನಲ್ ಕಂಟೆಂಟ್ ರಿವಾರ್ಡ್ಸ್ ಪ್ರೋಗ್ರಾಮ್. ಈ ಪ್ರೋಗ್ರಾಮ್​ನಲ್ಲಿ ಜೋಡಿತವಾಗಬೇಕಾದರೆ ಪ್ರೀಮಿಯಮ್ ಸಬ್​ಸ್ಕ್ರಿಪ್ಷನ್ ಹೊಂದಿರಬೇಕು. 500 ವೆರಿಫೈಡ್ ಫಾಲೋಯರ್ಸ್ ಇರಬೇಕು. ಅಕೌಂಟ್​ನಿಂದ ಪೋಸ್ಟ್ ಆದ ವಿಡಿಯೋಗಳಿಗೆ 5 ಲಕ್ಷ ಇಂಪ್ರೆಷನ್ಸ್ ಇರಬೇಕು. ಈ ನಿಯಮಗಳು ಕಂಟೆಂಟ್ ರಿವಾರ್ಡ್ಸ್ ಪ್ರೋಗ್ರಾಮ್​ನಲ್ಲಿ ಇವೆ.

ಈ ಮೂರು ಷರತ್ತುಗಳನ್ನು ಗಮನಿಸಿ…

ಆದರೆ, ವಿಡಿಯೋ ಕಿಕ್​ಸ್ಟಾರ್ಟ್ ಬೋನಸ್ ಪ್ರೋಗ್ರಾಮ್ ಬೇರೆಯದು. ಇದರಲ್ಲಿ ಪ್ರೀಮಿಯಮ್ ಸಬ್​ಸ್ಕ್ರಿಪ್ಷನ್, ವೆರಿಫೈಡ್ ಫಾಲೋಯರ್ಸ್ ಇತ್ಯಾದಿ ನಿಯಮಗಳೇನಿಲ್ಲ. ಆದರೆ, ಈ ಕೆಳಗಿನ ಷರತ್ತುಗಳಿವೆ:

  1. ವಿಡಿಯೋ ವರ್ಟಿಕಲ್ ಫಾರ್ಮ್ಯಾಟ್​ನಲ್ಲಿರಬೇಕು. ಮೂರು ನಿಮಿಷದೊಳಗಿನ ಅವಧಿಯ ವಿಡಿಯೋ ಆಗಿರಬೇಕು. ಒರಿಜಿನಲ್ ಕಂಟೆಂಟ್ ಆಗಿರಬೇಕು.
  2. ಇತರ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಪೋಸ್ಟ್ ಆದ ವಿಡಿಯೋಗಳನ್ನು ಬಳಸಬಹುದು. ಆದರೆ, ಅವುಗಳ ವಾಟರ್​ಮಾರ್ಕ್ ಇರಕೂಡದು. ಸದಸ್ಯರ ಒರಿಜಿನಲ್ ಕಂಟೆಂಟ್ ಆಗಿರಬೇಕು.
  3. 30 ದಿನಗಳ ಅವಧಿಯಲ್ಲಿ 15 ದಿನ ಕನಿಷ್ಠ ಒಂದಾದರೂ ವಿಡಿಯೋವನ್ನು ಪಬ್ಲಿಷ್ ಮಾಡಬೇಕು. ಒಂದೇ ದಿನ 15 ವಿಡಿಯೋ ಪೋಸ್ಟ್ ಮಾಡುವಂತಿಲ್ಲ.

ಇದನ್ನೂ ಓದಿ: ಮಾರ್ಕೊ ರೂಬಿಯೋ-ಮುಕೇಶ್ ಅಂಬಾನಿ ಭೇಟಿ; ಅಮೆರಿಕದ ವಿದೇಶಾಂಗ ಸಚಿವನಿಗೆ ರಿಲಯನ್ಸ್ ದಿಗ್ಗಜನೊಂದಿಗೆ ಏನು ಕೆಲಸ? ಇಲ್ಲಿವೆ ಕಾರಣಗಳು

ಅಕ್ಟೋಬರ್ 30ರೊಳಗೆ ಎನ್​ರೋಲ್ ಆಗಿ

ಕಂಟೆಂಟ್ ಕ್ರಿಯೇಟರ್ಸ್​ಗೆ ಎಕ್ಸ್​ನಿಂದಲೇ ಇನ್ವಿಟೇಶನ್ ಹೋಗುತ್ತದೆ. ಈ ರೀತಿ ಆಹ್ವಾನ ಪಡೆದ ಕಂಟೆಂಟ್ ಕ್ರಿಯೇಟರ್​ಗಳು 2026ರ ಅಕ್ಟೋಬರ್ 30ರೊಳಗೆ ಎನ್​ರೋಲ್ ಆಗಬೇಕು ಎಂದು ಅಲೀಗ್ರಾ ಜಾಚಿಯಾ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language