Hashtagintro

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಕೆಆರ್‌ಎಸ್, ತುಂಗಭದ್ರ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದ ಸಂಪೂರ್ಣ ಮಾಹಿತಿ ಇಲ್ಲಿದೆ!

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಕೆಆರ್‌ಎಸ್, ತುಂಗಭದ್ರ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದ ಸಂಪೂರ್ಣ ಮಾಹಿತಿ ಇಲ್ಲಿದೆ!

ಬೆಂಗಳೂರು, ಅಕ್ಟೋಬರ್ 24: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ತಗ್ಗಿದ್ದರೂ, ಪ್ರಮುಖ ಜಲಾಶಯಗಳಿಗೆ ಒಳಹರಿವು ಮುಂದುವರೆದಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ (ಕೆಆರ್‌ಎಸ್), ತುಂಗಭದ್ರ, ಕಬಿನಿ ಹಾಗೂ ವಿಜಯಪುರದ ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಮತ್ತು ಒಳ-ಹೊರಹರಿವಿನ ದೈನಂದಿನ ಅಂಕಿಅಂಶಗಳು ಲಭ್ಯವಾಗಿವೆ. ಈ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಮತ್ತು ಲೈವ್ ಸ್ಟೋರೇಜ್ ವಿವರಗಳು ಈ ಕೆಳಗಿನಂತಿವೆ.

ಕೆ.ಆರ್.ಎಸ್. ಜಲಾಶಯ

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 102.18 ಅಡಿ
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ನೀರು ಸಂಗ್ರಹ: 24.567 ಟಿಎಂಸಿ
  • ಲೈವ್ ಸ್ಟೋರೇಜ್: 16.188 ಟಿಎಂಸಿ
  • ಒಳಹರಿವು: 3,696 ಕ್ಯೂಸೆಕ್
  • ಹೊರಹರಿವು: 1,426 ಕ್ಯೂಸೆಕ್ (ನಾಲೆಗಳು ಮತ್ತು ಕುಡಿಯುವ ನೀರು ಸೇರಿದಂತೆ)

ತುಂಗಭದ್ರಾ ಜಲಾಶಯ

  • ಗರಿಷ್ಠ ಮಟ್ಟ (F.R.L): 1633.00 ಅಡಿ
  • ಇಂದಿನ ನೀರಿನ ಮಟ್ಟ: 1614.971 ಅಡಿ
  • ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
  • ಪ್ರಸ್ತುತ ನೀರು ಸಂಗ್ರಹ: 48.342 ಟಿಎಂಸಿ
  • ಒಳಹರಿವು: ಒಳಹರಿವು ಇಲ್ಲ (Nil)
  • ಹೊರಹರಿವು: 11,300 ಕ್ಯೂಸೆಕ್ (ನಾಲಾ ಭಾಗಕ್ಕೆ 10,141 ಕ್ಯೂಸೆಕ್ ಹಾಗೂ ನದಿಗೆ 1,159 ಕ್ಯೂಸೆಕ್)

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ನೀರಿನ ಮಟ್ಟ: 69.89 ಅಡಿ
  • ಒಟ್ಟು ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ
  • ಇಂದಿನ ನೀರು ಸಂಗ್ರಹ: 11.62 ಟಿಎಂಸಿ
  • ಪ್ರಸ್ತುತ ಲೈವ್ ಸ್ಟೋರೇಜ್: 1.81 ಟಿಎಂಸಿ
  • ಒಳಹರಿವು: 3,868 ಕ್ಯೂಸೆಕ್
  • ಒಟ್ಟು ಹೊರಹರಿವು: 500 ಕ್ಯೂಸೆಕ್ (ಕಬಿನಿ ನದಿಗೆ ಮಾತ್ರ, ನಾಲೆಗಳಿಗೆ ನೀರು ಬಿಡುಗಡೆ ಇಲ್ಲ)
  • ಮಳೆ: ಜಲಾಶಯದ ವ್ಯಾಪ್ತಿಯಲ್ಲಿ 50 ಮಿ.ಮೀ ಮಳೆ ದಾಖಲಾಗಿದೆ.

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 516.27 ಮೀಟರ್
  • ಒಳಹರಿವು: ಒಳಹರಿವು ಇಲ್ಲ (Nil)
  • ಹೊರಹರಿವು: 9,039 ಕ್ಯೂಸೆಕ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language