Hashtagintro

ವಯನಾಡಿನಲ್ಲಿ ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವು; ತಾಯಾನೆಯ ಗೋಳಾಟದ ವಿಡಿಯೋ ವೈರಲ್

ವಯನಾಡಿನಲ್ಲಿ ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವು; ತಾಯಾನೆಯ ಗೋಳಾಟದ ವಿಡಿಯೋ ವೈರಲ್

ವಯನಾಡ್, ಅಕ್ಟೋಬರ್ 26: ಕೇರಳದ ವಯನಾಡ್ ಜಿಲ್ಲೆಯ ಕಾಟಿಕುಲಂ ಬಳಿಯ ಮುತ್ತುಮರಿ ಪ್ರದೇಶದಲ್ಲಿ ಬೆಟ್ಟದ ಇಳಿಜಾರಿನಿಂದ ಬಿದ್ದು ಮರಿ ಆನೆಯೊಂದು ಸಾವನ್ನಪ್ಪಿದೆ. ಬೆಟ್ಟದ ಇಳಿಜಾರಿನಲ್ಲಿ ನಡೆಯುತ್ತಿದ್ದ ಮರಿ ಆನೆ ಅನಿರೀಕ್ಷಿತವಾಗಿ ಇಳಿಜಾರಿನ ಕೆಳಗೆ ಬಿದ್ದಿದೆ ಎಂದು ಹೇಳಲಾಗುತ್ತದೆ. ತನ್ನ ಮರಿಯನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಬೇಕೆಂದು ತಾಯಿ ಆನೆ ನಡೆಸಿದ ಹತಾಶ ಮತ್ತು ಕರುಣಾಜನಕ ಪ್ರಯತ್ನವು ಪ್ರತ್ಯಕ್ಷದರ್ಶಿಗಳು ಹಾಗೂ ಅರಣ್ಯಾಧಿಕಾರಿಗಳ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಈ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಯನಾಡಿನ ಕಡಿದಾದ ಅರಣ್ಯ ಗುಡ್ಡಗಾಡು ಪ್ರದೇಶದಲ್ಲಿ ಆನೆಗಳ ಹಿಂಡು ಚಲಿಸುತ್ತಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ ಮರಿ ಆನೆಯೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಮರಿ ಕೆಳಗೆ ಬಿದ್ದ ತಕ್ಷಣ ಆತಂಕಗೊಂಡ ತಾಯಿ ಆನೆ ತನ್ನ ಸೊಂಡಿಲಿನಿಂದ ಮರಿಯನ್ನು ಮೇಲಕ್ಕೆತ್ತಲು ಹಾಗೂ ಎಬ್ಬಿಸಿ ನಿಲ್ಲಿಸಲು ಸತತವಾಗಿ ಪ್ರಯತ್ನಿಸಿದೆ. ಸುಮಾರು ಗಂಟೆಗಳ ಕಾಲ ತಾಯಿ ಆನೆ ಅಸಹಾಯಕರಾಗಿ ಘೀಳಿಡುತ್ತಾ ಮರಿಯನ್ನು ರಕ್ಷಿಸಲು ಹೋರಾಟ ನಡೆಸಿತು. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಪಶುವೈದ್ಯರ ತಂಡ, ತಾಯಿ ಆನೆಯನ್ನು ಸುರಕ್ಷಿತವಾಗಿ ಪಕ್ಕಕ್ಕೆ ಕಳುಹಿಸಿ ತೀವ್ರವಾಗಿ ಗಾಯಗೊಂಡಿದ್ದ ಮರಿ ಆನೆಗೆ ತಕ್ಷಣದ ವೈದ್ಯಕೀಯ ಉಪಚಾರ ನೀಡಲು ಮುಂದಾಯಿತು. ಆದರೆ, ಗುಡ್ಡದಿಂದ ಬಿದ್ದ ರಭಸಕ್ಕೆ ಮರಿ ಆನೆಯ ಅಂಗಾಂಗಗಳಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿತ್ತು. ಅರಣ್ಯ ವೈದ್ಯರು ಅಹೋರಾತ್ರಿ ಶ್ರಮಿಸಿ ಚಿಕಿತ್ಸೆ ನೀಡಿದರೂ ಸಹ, ಚಿಕಿತ್ಸೆಗೆ ಸ್ಪಂದಿಸದೆ ಮರಿ ಆನೆಯು ಕೊನೆಯುಸಿರೆಳೆದಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language