Hashtagintro

ಷೇರು ಬಜಾರಿಗೆ ಜಿಯೋ ಪ್ಲಾಟ್​ಫಾರ್ಮ್ಸ್ ಭರ್ಜರಿ ಪದಾರ್ಪಣೆ; ಮಾರ್ಕೆಟ್ ಕ್ಯಾಪ್​ನಲ್ಲಿ ರಿಲಯನ್ಸ್ ಕಂಪನಿಗಳೇ ನಂ. 1, ನಂ. 2

ಷೇರು ಬಜಾರಿಗೆ ಜಿಯೋ ಪ್ಲಾಟ್​ಫಾರ್ಮ್ಸ್ ಭರ್ಜರಿ ಪದಾರ್ಪಣೆ; ಮಾರ್ಕೆಟ್ ಕ್ಯಾಪ್​ನಲ್ಲಿ ರಿಲಯನ್ಸ್ ಕಂಪನಿಗಳೇ ನಂ. 1, ನಂ. 2

ಮುಂಬೈ, ಅಕ್ಟೋಬರ್ 28: ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ಜಿಯೋ ಪ್ಲಾಟ್​ಫಾರ್ಮ್ಸ್ (Reliance Platforms) ಐಪಿಒ ಭರ್ಜರಿ ಯಶಸ್ಸು ಕಂಡಿದ್ದು, ಹಲವು ದಾಖಲೆ, ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಜಿಯೋ ಇಂದು ಮಾರುಕಟ್ಟೆಗೆ ಭರ್ಜರಿಯಾಗಿ ಲಿಸ್ಟ್ ಆಗಿದೆ. ಜಿಎಂಪಿ ಲೆಕ್ಕಾಚಾರಕ್ಕೆ ಸರಿಯಾಗಿ ಜಿಯೋ ಶೇ. 21.4ರಷ್ಟು ಪ್ರೀಮಿಯಮ್​ನಲ್ಲಿ ಲಿಸ್ಟ್ ಆಗಿದೆ. ಇದು ಸಾಲದೆಂಬಂತೆ, ಮೊದಲ ದಿನವೇ ಅದರ ಷೇರುಬೆಲೆ ಮತ್ತಷ್ಟು ಉಬ್ಬಿಹೋಗಿದೆ.

ಜಿಯೋ ಐಪಿಒದಲ್ಲಿ ಷೇರು ಬೆಲೆ 1,119 ರೂ ಇತ್ತು. 1,358 ರೂಗೆ ಇಂದು ಷೇರುಗಳು ಲಿಸ್ಟ್ ಆಗಿವೆ. ಇವತ್ತು ಟ್ರೇಡಿಂಗ್ ಕೊನೆಯಲ್ಲಿ ಜಿಯೋ ಷೇರುಬೆಲೆ 1,417.50 ರೂಗೆ ಏರಿದೆ. ಅಂದರೆ, ಜಿಯೋ ಐಪಿಒದಲ್ಲಿ ಹೂಡಿಕೆ ಮಾಡಿದವರಿಗೆ ಒಂದೇ ದಿನದಲ್ಲಿ ಸಿಕ್ಕಿರುವ ಆದಾಯ ಶೇ. 26ಕ್ಕಿಂತಲೂ ಹೆಚ್ಚು.

ಮಾರ್ಕೆಟ್ ಕ್ಯಾಪ್​ನಲ್ಲಿ ಮೊದಲೆರಡು ಸ್ಥಾನ ರಿಲಯನ್ಸ್ ಕಂಪನಿಗಳದ್ದೇ

ಜಿಯೋ ಪ್ಲಾಟ್​ಫಾರ್ಮ್ಸ್​ನ ಎಂಟ್ರಿ ಅಕ್ಷರಶಃ ಬ್ಲಾಕ್​ಬಸ್ಟರ್ ಆಗಿದೆ. ಅದರ ಒಟ್ಟು ಷೇರು ಸಂಪತ್ತು ಅಥವಾ ಮಾರ್ಕೆಟ್ ಕ್ಯಾಪಿಟಲ್ 13 ಲಕ್ಷ ಕೋಟಿ ರೂ ದಾಟಿದೆ. ಅತಿಹೆಚ್ಚು ಮಾರುಕಟ್ಟೆ ಕ್ಯಾಪ್ ಇರುವ ಕಂಪನಿಗಳ ಪಟ್ಟಿಯಲ್ಲಿ ಒಮ್ಮೆಲೇ 2ನೇ ಸ್ಥಾನಕ್ಕೆ ಹೋಗಿದೆ.

ಇದನ್ನೂ ಓದಿ: ಮ್ಯಾನುಫ್ಯಾಕ್ಚರಿಂಗ್​ಗೆ ಸರ್ಕಾರದಿಂದ ಮತ್ತಷ್ಟು ಬಲ; ಕ್ರೀಡಾ ಸಾಮಗ್ರಿ ಮತ್ತು ಕಂಟೇನರ್ ತಯಾರಿಕೆಗೆ 11,856 ಕೋಟಿ ರೂ ಅನುದಾನ

ಕುತೂಹಲ ಎಂದರೆ, ಮೊದಲ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಇದೆ. ಇದು 15.92 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪಿಟಲ್ ಹೊಂದಿದೆ. ಅದರ ನಂತರದ ಸ್ಥಾನದಲ್ಲಿ ಜಿಯೋ ಇದೆ. ಮೊದಲೆರಡು ಸ್ಥಾನಗಳು ಅಂಬಾನಿಗೆ ಸೇರಿದ ಕಂಪನಿಗಳೇ ಆಗಿವೆ. ಮಾರ್ಕೆಟ್ ಕ್ಯಾಪ್​ನಲ್ಲಿ ಟಾಪ್-5 ಕಂಪನಿಗಳ ಪಟ್ಟಿ ಈ ಕೆಳಕಂಡಂತಿದೆ:

  1. ರಿಲಯನ್ಸ್ ಇಂಡಸ್ಟ್ರೀಸ್: 15.92 ಲಕ್ಷ ಕೋಟಿ ರೂ
  2. ಜಿಯೋ ಪ್ಲಾಟ್​ಫಾರ್ಮ್ಸ್: 13.05 ಲಕ್ಷ ಕೋಟಿ ರೂ
  3. ಭಾರ್ತಿ ಏರ್​ಟೆಲ್: 12.06 ಲಕ್ಷ ಕೋಟಿ ರೂ
  4. ಎಚ್​ಡಿಎಫ್​ಸಿ ಬ್ಯಾಂಕ್: 10.40 ಲಕ್ಷ ಕೋಟಿ ರೂ
  5. ಐಸಿಐಸಿಐ ಬ್ಯಾಂಕ್: 9.78 ಲಕ್ಷ ಕೋಟಿ ರೂ

ಜಿಯೋ ಪ್ಲಾಟ್​ಫಾರ್ಮ್ ಬ್ಯುಸಿನೆಸ್ ಮಾಡಲ್ ಹೇಗೆ?

ಜಿಯೋ ಪ್ಲಾಟ್​ಫಾರ್ಮ್ಸ್ ಉತ್ತಮ ಆದಾಯ ಮತ್ತು ಲಾಭ ಹೊಂದಿರುವ ಸಂಸ್ಥೆಯಾಗಿದೆ. 2025-26ರ ಹಣಕಾಸು ವರ್ಷದಲ್ಲಿ ಅದು 1.47 ಲಕ್ಷ ಕೋಟಿ ರೂ ಆದಾಯ ದಾಖಲಿಸಿದೆ. ಇದರಲ್ಲಿ ತೆರಿಗೆ ಇತ್ಯಾದಿ ವ್ಯಯ ಕಳೆದು 30,049 ಕೋಟಿ ರೂ ನಿವ್ವಳ ಲಾಭ ಪಡೆದಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ದೀಪಾವಳಿ ಗಿಫ್ಟ್; ತುಟ್ಟಿಭತ್ಯೆ ಶೇ. 60ರಿಂದ 63ಕ್ಕೆ ಏರಿಕೆ

ಜಿಯೋ ಪ್ಲಾಟ್​ಫಾರ್ಮ್ಸ್​ನ ಪ್ರಮುಖ ಬ್ಯುಸಿನೆಸ್​ಗಳೆಂದರೆ ಟೆಲಿಕಾಂ, ಡಿಜಿಟಲ್ ಅಪ್ಲಿಕೇಶನ್​ಗಳು, ಹಾರ್ಡ್​ವೇರ್​ಗಳು. 52 ಕೋಟಿಗೂ ಅಧಿಕ ಮೊಬೈಲ್ ಮತ್ತು ಬ್ರಾಡ್​ಬ್ಯಾಂಡ್ ಗ್ರಾಹಕರನ್ನು ಅದು ಹೊಂದಿದೆ. ಅದರಿಂದ ಹೆಚ್ಚಿನ ಲಾಭದ ಹರಿವು ಬರುತ್ತಿದೆ.

ಜಿಯೋಭಾರತ್ 4ಜಿ ಫೋನ್​ಗಳು, ಜಿಯೋ ಏರ್​ಫೈಬರ್ ರೂಟರ್​ಗಳು, ಸೆಟ್​ಟಾಪ್ ಬಾಕ್ಸ್​ಗಳನ್ನು ವಿತರಿಸುತ್ತದೆ. ಅದರದ್ದೇ ಸಾಫ್ಟ್​ವೇರ್ ಸ್ಟ್ಯಾಕ್​ಗಳನ್ನು ಹೊಂದಿದೆ. ಜಿಯೋಟಿವಿ, ಜಿಯೋಸಾವನ್, ಜಿಯೋಕ್ಲೌಡ್ ಇತ್ಯಾದಿಗೆ 36 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. ಕ್ಲೌಡ್ ಸಲ್ಯೂಶನ್ಸ್, ಎಐ ಟೂಲ್ಸ್ ಇತ್ಯಾದಿ ಇನ್ನೂ ಕೆಲವು ಸೇವೆಗಳನ್ನು ಜಿಯೋ ಪ್ಲಾಟ್​ಫಾರ್ಮ್ಸ್ ಒದಗಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language