
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರು ತಮ್ಮ ಕುಟುಂಬದ ಕಾರಣಕ್ಕೆ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದ ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಗೌಡ ನಡುವಿನ ವಾಕ್ಸಮರ ಮತ್ತು ಆರೋಪ-ಪ್ರತ್ಯಾರೋಪಗಳ ಸರಣಿಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಮ್ಮ ಕುಟುಂಬದ ವಿಚಾರದಲ್ಲಿ ಧನ್ವೀರ್ ಗೌಡ ನೀಡುತ್ತಿರುವ ಹೇಳಿಕೆಗಳಿಗೆ ಕಾನೂನಿನ ಮೂಲಕವೇ ಕಡಿವಾಣ ಹಾಕಲು ದರ್ಶನ್ ಸಜ್ಜಾಗಿದ್ದು, ತಡೆಯಾಜ್ಞೆ ತರಲು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.
ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ವಿಚಾರದಲ್ಲಿ ಧನ್ವೀರ್ ಗೌಡ ಅವರು ಅನಗತ್ಯವಾಗಿ ಮಾತನಾಡುತ್ತಿದ್ದಾರೆ ಎಂಬುದು ದರ್ಶನ್ ಅವರ ಮುಖ್ಯ ಅಸಮಾಧಾನಕ್ಕೆ ಕಾರಣವಾಗಿದೆ. ಜೈಲಿನಲ್ಲಿದ್ದರೂ ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ದರ್ಶನ್ ಫುಲ್ ಅಲರ್ಟ್ ಆಗಿದ್ದಾರೆ. ಮಾಧ್ಯಮಗಳ ಮುಂದೆ ಧನ್ವೀರ್ ಅವರು ದರ್ಶನ್ ಕುಟುಂಬದ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಲು ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ.
ಧನ್ವೀರ್ ಅವರ ಇತ್ತೀಚಿನ ನಡೆ ಹಾಗೂ ಹೇಳಿಕೆಗಳು ದರ್ಶನ್ ಕುಟುಂಬದ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ಜೈಲಿನಿಂದಲೇ ಕಾನೂನು ಹೋರಾಟಕ್ಕೆ ಚಾಲನೆ ನೀಡಲಾಗಿದೆ. ಮಾಧ್ಯಮಗಳ ಮುಂದೆ ಧನ್ವೀರ್ ನಾಲಿಗೆ ಹರಿಬಿಡದಂತೆ ತಡೆಯಲು ಹಾಗೂ ದರ್ಶನ್ ಕುಟುಂಬದ ಬಗ್ಗೆ ಮಾತನಾಡುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸುವಂತೆ ತಡೆಯಾಜ್ಞೆ ತರಲು ಅರ್ಜಿಯ ಮೂಲಕ ನ್ಯಾಯಾಲಯಕ್ಕೆ ಬೇಡಿಕೆ ಇಡಲು ಸಿದ್ಧತೆ ನಡೆಸಲಾಗಿದೆ.
ಇದನ್ನೂ ಓದಿ: ಧನ್ವೀರ್ ಬಗ್ಗೆ ವಿಜಯಲಕ್ಷ್ಮಿಗೆ ಮಹತ್ವದ ಸೂಚನೆ ಕೊಟ್ಟ ದರ್ಶನ್
ಕೆಲವು ದಿನಗಳಿಂದ ಹರಿದಾಡುತ್ತಿರುವ ಆಡಿಯೋ ತುಣುಕುಗಳು ಹಾಗೂ ಜೈಲಿನ ಸಂದೇಶಗಳ ಕುರಿತಾದ ಹೇಳಿಕೆಗಳಿಂದಾಗಿ ಧನ್ವೀರ್ ಮತ್ತು ದರ್ಶನ್ ಆಪ್ತರ ನಡುವೆ ತೀವ್ರ ಘರ್ಷಣೆ ಏರ್ಪಟ್ಟಿತ್ತು. ಆದರೆ, ಈಗ ದರ್ಶನ್ ನೇರವಾಗಿ ಕಾನೂನಿನ ಮೂಲಕ ಲಗಾಮು ಹಾಕಲು ನಿರ್ಧರಿಸಿರುವುದು ಈ ವಿವಾದಕ್ಕೆ ದೊಡ್ಡ ತಿರುವು ನೀಡಿದೆ. ಧನ್ವೀರ್ ಅವರ ಮಾತಿಗೆ ಮಾತು ಬೆಳೆಸುವ ಬದಲು ಕಾನೂನಿನ ಅಸ್ತ್ರದ ಮೂಲಕವೇ ಬ್ರೇಕ್ ಹಾಕಲು ದರ್ಶನ್ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada Entertainment
