Hashtagintro

ಕೇದಾರನಾಥಕ್ಕೆ ಭೇಟಿ ಕೊಟ್ಟ ನಟಿ ಸಾರಾ ಅಲಿ ಖಾನ್ ವಿರುದ್ಧ ಫತ್ವಾ

ಕೇದಾರನಾಥಕ್ಕೆ ಭೇಟಿ ಕೊಟ್ಟ ನಟಿ ಸಾರಾ ಅಲಿ ಖಾನ್ ವಿರುದ್ಧ ಫತ್ವಾ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ ಮೂಲದ ಇಸ್ಲಾಮಿಕ್ ಧರ್ಮಗುರು ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ನಟಿಯ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಇಸ್ಲಾಂ ಶರಿಯಾ ಕಾಯ್ದೆಯ ಪ್ರಕಾರ ಹರಾಮ್ ಎಂದು ಅವರು ಕರೆದಿದ್ದಾರೆ.

ಸಾರಾ ಅಲಿ ಖಾನ್ ಅವರು ಅಕ್ಟೋಬರ್ 25ರಂದು ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಅವರು ಭಕ್ತರ ಸಾಲಿನಲ್ಲಿ ನಿಂತು ದರ್ಶನ ಪಡೆದಿದ್ದರು. ದೇವಾಲಯದ ಹೊರಗೆ ಕೈಮುಗಿದು ನಿಂತಿದ್ದ ಅವರ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದನ್ನು ಖಂಡಿಸಿರುವ ಧರ್ಮಗುರು, ಇಸ್ಲಾಂ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮದಂತೆ ಪೂಜೆ ಮಾಡುವುದು ಶರಿಯಾ ಪ್ರಕಾರ ಅಪರಾಧ ಎಂದು ಹೇಳಿದ್ದಾರೆ. ನಟಿ ಸಾರಾ ಕೂಡಲೇ ಅಲ್ಲಾಹನಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಾರಾ ಅಲಿ ಖಾನ್ ಅವರಿಗೆ ಕೇದಾರನಾಥ ದೇವಾಲಯದ ಜೊತೆ ವಿಶಿಷ್ಟ ಅನುಬಂಧವಿದೆ. ಅವರು ‘ಕೇದಾರ್​​ನಾಥ್ ಚಿತ್ರದ ಶೂಟಿಂಗ್​​ನ ಇಲ್ಲಿ ಮಾಡಿದ್ದರು. ಇದಾದ ಬಳಿಕ ನಿಯಮಿತವಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ನಟ ಸೈಫ್ ಅಲಿ ಖಾನ್ ಮತ್ತು ನಟಿ ಅಮೃತಾ ಸಿಂಗ್ ಅವರ ಪುತ್ರಿಯಾಗಿರುವ ಸಾರಾ, ಈ ಹಿಂದೆಯೂ ಅವರ ದೇವಾಲಯ ಭೇಟಿಗಳ ವಿರುದ್ಧ ಕೆಲವು ಧರ್ಮಗುರುಗಳಿಂದ ವಿರೋಧ ವ್ಯಕ್ತವಾಗಿತ್ತು.

ಇನ್ನೊಂದೆಡೆ ಬದ್ರಿನಾಥ್-ಕೇದಾರನಾಥ ದೇವಾಲಯ ಸಮಿತಿಯು ಅನ್ಯಧರ್ಮೀಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದಿದೆ. ಹಿಂದೂಯೇತರರು ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಯಸಿದರೆ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾರಾ ಅಲಿ ಖಾನ್ ಅವರ ತಂಡವು ದೇವಾಲಯ ಪ್ರವೇಶಕ್ಕೂ ಮುನ್ನ ಈ ನಿಯಮದಂತೆ ಅಗತ್ಯ ಪ್ರಮಾಣಪತ್ರವನ್ನು ಸಲ್ಲಿಸಿತ್ತು ಎಂದು ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಹನ್ ಸಿಂಗ್ ರಂಗರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸಾರಾ ಅಲಿ ಖಾನ್ ವಿರುದ್ಧ ಓರಿ ಗಂಭೀರ ಆರೋಪ; ಪಾರ್ಟಿಯಲ್ಲಿ ಹುಡುಗಿಯನ್ನು ಕುರ್ಚಿಯಿಂದ ತಳ್ಳಿದ್ರಂತೆ ನಟಿ

ಸಾರಾ ಅಲಿ ಖಾನ್ ಅವರ ಈ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲವರು ನಟಿಯ ನಿರ್ಧಾರವನ್ನು ಬೆಂಬಲಿಸಿದರೆ, ಇನ್ನು ಕೆಲವರು ಧರ್ಮಗುರುಗಳ ಹೇಳಿಕೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಪ್ರಸ್ತುತ ಸಾರಾ ಅಲಿ ಖಾನ್ ಈ ಫತ್ವಾ ಮತ್ತು ವಿವಾದದ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language