Hashtagintro

ಈರುಳ್ಳಿ ತಾಜಾವಾಗಿದೆಯೇ ಅಥವಾ ಒಳಗಿನಿಂದ ಕೊಳೆತಿದೆಯೇ? ಗುರುತಿಸುವ ಸುಲಭ ವಿಧಾನಗಳು

ಈರುಳ್ಳಿ ತಾಜಾವಾಗಿದೆಯೇ ಅಥವಾ ಒಳಗಿನಿಂದ ಕೊಳೆತಿದೆಯೇ? ಗುರುತಿಸುವ ಸುಲಭ ವಿಧಾನಗಳು

ಅಡುಗೆಮನೆಯಲ್ಲಿ ಈರುಳ್ಳಿಗೆ ಪ್ರಮುಖ ಸ್ಥಾನವಿದೆ. ಬಹುತೇಕ ಎಲ್ಲ ಬಗೆಯ ಅಡುಗೆಗಳಲ್ಲೂ ಈರುಳ್ಳಿಯನ್ನು ಬಳಸಲಾಗುತ್ತದೆ. ಹೀಗಾಗಿ ಹಲವರು ಮಾರುಕಟ್ಟೆಯಿಂದ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಖರೀದಿಸಿ ಮನೆಯಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಈರುಳ್ಳಿ ಖರೀದಿಸುವಾಗ ಸರಿಯಾದ ಆಯ್ಕೆ ಮಾಡದಿದ್ದರೆ ಅವು ಬೇಗನೆ ಕೊಳೆಯಬಹುದು. ಇದರಿಂದ ಹಣವೂ ವ್ಯರ್ಥವಾಗುತ್ತದೆ. ಹಾಗಾದರೆ ತಾಜಾ ಈರುಳ್ಳಿಯನ್ನು ಗುರುತಿಸುವುದು ಹೇಗೆ, ಆಯ್ಕೆ ಯಾವ ರೀತಿ ಇರಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೊರಗಿನ ಸಿಪ್ಪೆಯನ್ನು ಗಮನಿಸಿ

ಈರುಳ್ಳಿ ಖರೀದಿಸುವಾಗ ಮೊದಲು ಅದರ ಹೊರಗಿನ ಸಿಪ್ಪೆಯನ್ನು ಪರಿಶೀಲಿಸಿ. ತಾಜಾ ಈರುಳ್ಳಿಯ ಮೇಲಿನ ಸಿಪ್ಪೆ ಒಣಗಿದ್ದು, ಕಾಗದದಂತೆ ತೆಳುವಾಗಿರುತ್ತದೆ. ಸಿಪ್ಪೆಯಲ್ಲಿ ತೇವಾಂಶ ಹೆಚ್ಚಿರುವ ಈರುಳ್ಳಿ ಬೇಗನೆ ಹಾಳಾಗುವ ಸಾಧ್ಯತೆಯಿದೆ.

ಈರುಳ್ಳಿಯನ್ನು ಒತ್ತಿ ಪರೀಕ್ಷಿಸಿ

ಈರುಳ್ಳಿಯನ್ನು ಕೈಯಲ್ಲಿ ಹಿಡಿದು ಸ್ವಲ್ಪ ಒತ್ತಿ ನೋಡಿ. ತಾಜಾ ಈರುಳ್ಳಿ ಗಟ್ಟಿಯಾಗಿ ಇರಬೇಕು. ಬೆರಳಿನಿಂದ ಒತ್ತಿದಾಗ ಮೆತ್ತಗಾದರೆ ಅಥವಾ ಕೆಲವು ಭಾಗಗಳು ಮೃದುವಾಗಿದ್ದರೆ ಒಳಗಿನಿಂದ ಕೊಳೆಯಲು ಆರಂಭಿಸಿರಬಹುದು. ಇಂತಹ ಈರುಳ್ಳಿಗಳನ್ನು ಖರೀದಿಸುವುದನ್ನು ತಪ್ಪಿಸಿ.

ಮೊಳಕೆ ಬಂದಿರುವ ಈರುಳ್ಳಿ ಖರೀದಿಸಬೇಡಿ

ಕೆಲವರು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಮೊಳಕೆ ಬಂದಿರುವ ಈರುಳ್ಳಿಯನ್ನು ಖರೀದಿಸುತ್ತಾರೆ. ಆದರೆ ಮೊಳಕೆ ಬಂದ ಈರುಳ್ಳಿಯಲ್ಲಿ ರುಚಿ ಮತ್ತು ವಿನ್ಯಾಸ ಬದಲಾಗಬಹುದು. ಇಂತಹ ಈರುಳ್ಳಿಗಳನ್ನು ದೀರ್ಘಕಾಲ ಸಂಗ್ರಹಿಸುವುದು ಕಷ್ಟ. ಆದ್ದರಿಂದ ಸಾಧ್ಯವಾದಷ್ಟು ಮೊಳಕೆ ಬರದ, ಗಟ್ಟಿಯಾಗಿರುವ ಈರುಳ್ಳಿಯನ್ನು ಆಯ್ಕೆ ಮಾಡಿಕೊಳ್ಳಿ.

ಕಪ್ಪು ಶಿಲೀಂಧ್ರ ಮತ್ತು ದುರ್ವಾಸನೆ ಇದೆಯೇ ನೋಡಿ

ಈರುಳ್ಳಿಯ ಮೇಲೆ ಕಪ್ಪು ಪುಡಿಯಂತಹ ಪದರ, ಶಿಲೀಂಧ್ರ ಅಥವಾ ಕೊಳೆತ ಗುರುತುಗಳು ಕಂಡುಬಂದರೆ ಖರೀದಿಸಬೇಡಿ. ಅದೇ ರೀತಿ ದುರ್ವಾಸನೆ ಬರುತ್ತಿದ್ದರೆ ಅದನ್ನು ಬಳಸುವುದು ಸೂಕ್ತವಲ್ಲ. ಶಿಲೀಂಧ್ರ ಕಾಣಿಸಿಕೊಂಡ ಈರುಳ್ಳಿಯನ್ನು ಇತರ ಉತ್ತಮ ಈರುಳ್ಳಿಗಳಿಂದ ಪ್ರತ್ಯೇಕವಾಗಿ ಇರಿಸಿ.

ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಬೇಡಿ

ಮಾರುಕಟ್ಟೆಯಿಂದ ತಂದ ಈರುಳ್ಳಿಯನ್ನು ಅದೇ ಪ್ಲಾಸ್ಟಿಕ್ ಚೀಲದಲ್ಲಿ ದೀರ್ಘಕಾಲ ಇಡುವುದು ಒಳ್ಳೆಯದಲ್ಲ. ಇದರಿಂದ ತೇವಾಂಶ ಸಂಗ್ರಹವಾಗಿ ಈರುಳ್ಳಿ ಬೇಗನೆ ಹಾಳಾಗಬಹುದು. ಬದಲಾಗಿ ಗಾಳಿಯಾಡುವ ಬುಟ್ಟಿ ಅಥವಾ ಜಾಲರಿಯ ಪಾತ್ರೆಯಲ್ಲಿ ಸಂಗ್ರಹಿಸಿ. ಒಣಗಿದ ಮತ್ತು ಗಾಳಿಯಾಡುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಇಡಬೇಡಿ!

ಕೆಲವು ಮನೆಗಳಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಂದೇ ಬುಟ್ಟಿಯಲ್ಲಿ ಸಂಗ್ರಹಿಸುತ್ತಾರೆ. ಆದರೆ ಎರಡರಿಂದಲೂ ಹೊರಬರುವ ತೇವಾಂಶ ಮತ್ತು ಸಂಗ್ರಹಣೆಯ ಪರಿಸ್ಥಿತಿಗಳು ಅವು ಬೇಗನೆ ಹಾಳಾಗಲು ಕಾರಣವಾಗಬಹುದು. ಆದ್ದರಿಂದ ಎರಡನ್ನೂ ಪ್ರತ್ಯೇಕ ಬುಟ್ಟಿಗಳಲ್ಲಿ ಇಡುವುದು ಉತ್ತಮ. ಒಟ್ಟಿನಲ್ಲಿ, ಈರುಳ್ಳಿ ಖರೀದಿಸುವಾಗ ಅದರ ಗಟ್ಟಿತನ, ಸಿಪ್ಪೆ, ಬಣ್ಣ ಮತ್ತು ವಾಸನೆಯನ್ನು ಗಮನಿಸಿ. ಸರಿಯಾದ ರೀತಿಯಲ್ಲಿ ಸಂಗ್ರಹಿಸುವುದರಿಂದ ಆಹಾರ ವ್ಯರ್ಥವಾಗುವುದನ್ನು ಕಡಿಮೆ ಮಾಡಬಹುದು ಮತ್ತು ಹಣವನ್ನೂ ಉಳಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Health

Read full article on TV9 Kannada Health

Leave a Comment

Your email address will not be published. Required fields are marked *

समाचार की भाषा चुनें / Choose News Language