Hashtagintro

ಐಫಾ ಅವಾರ್ಡ್ಸ್ 2026: ‘ಧುರಂಧರ್’ಗೆ ಹಲವು ಪ್ರಶಸ್ತಿ, ಇಲ್ಲಿದೆ ಪಟ್ಟಿ

ಐಫಾ ಅವಾರ್ಡ್ಸ್ 2026: ‘ಧುರಂಧರ್’ಗೆ ಹಲವು ಪ್ರಶಸ್ತಿ, ಇಲ್ಲಿದೆ ಪಟ್ಟಿ

ಇಂಟರ್ಯಾನ್ಯಾಷನಲ್ ಇಂಡಿಯನ್ ಫಿಲಂ ಅವಾರ್ಡ್ (ಐಫಾ) ಬಾಲಿವುಡ್​ ಸಿನಿಮಾಗಳು ಮತ್ತು ಒಟಿಟಿ ಕಂಟೆಂಟ್​​ಗೆ ಮೀಸಲಾಗಿರುವ ಪ್ರಶಸ್ತಿ ಆಗಿದ್ದು, 2000 ರಲ್ಲಿ ಪ್ರಾರಂಭವಾದ ಐಫಾ ಇದೀಗ 26ನೇ ಪ್ರಶಸ್ತಿ ಪಟ್ಟಿಯನ್ನು ಘೋಷಣೆ ಮಾಡಿದೆ. ನಿರೀಕ್ಷೆಯಂತೆ ‘ಧುರಂಧರ್’ ಸಿನಿಮಾ ಬಹುತೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದು, ಬೇರೆ ಕೆಲವು ಒಳ್ಳೆಯ ಸಿನಿಮಾ, ವೆಬ್ ಸರಣಿಗಳಿಗೂ ಸಹ ಪ್ರಶಸ್ತಿಗಳು ಧಕ್ಕಿವೆ. 26ನೇ ಐಫಾ ಪ್ರಶಸ್ತಿಯನ್ನು ನಿನ್ನೆ (ಅಕ್ಟೋಬರ್ 30) ಘೋಷಿಸಲಾಗಿದೆ.

ಶುಕ್ರವಾರ, ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ. ಆದಿತ್ಯ ಧರ್ ನಿರ್ದೇಶಿಸಿದ ಮತ್ತು ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಸ್ಪೈ ಆಕ್ಷನ್ ಡ್ರಾಮಾ ‘ಧುರಂಧರ್’ ಎಲ್ಲಾ ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದರೊಂದಿಗೆ, ‘ಸೈಯಾರಾ’ ಮತ್ತು ‘ಛಾವಾ’ ಚಿತ್ರಗಳು ಹಲವು ಪ್ರಶಸ್ತಿಗಳನ್ನು ಗೆದ್ದಿವೆ. ಒಟಿಟಿ ವಿಭಾಗದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ‘ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್’ ಪ್ರಾಬಲ್ಯ ಮೆರೆದಿದೆ. ಇಲ್ಲಿದೆ ಪೂರ್ಣ ಪಟ್ಟಿ

ಜನಪ್ರಿಯ ವಿಭಾಗಗಳು

ಅತ್ಯುತ್ತಮ ಚಿತ್ರ: – ಧುರಂಧರ್

ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ: ಅವತಾರ್: ಫೈರ್ & ಆಶ್

ಅತ್ಯುತ್ತಮ ನಿರ್ದೇಶಕರು: ಆದಿತ್ಯ ಧರ್ – ಧುರಂಧರ್

ಅತ್ಯುತ್ತಮ ನಟಿ : ಅನೀತ್ ಪಡ್ಡಾ- ಸೈಯಾರಾ

ಅತ್ಯುತ್ತಮ ನಟ : ರಣ್ವೀರ್ ಸಿಂಗ್ – ಧುರಂಧರ್

ಅತ್ಯುತ್ತಮ ನಟಿ ಪೋಷಕ ಪಾತ್ರ: ಹುಮಾ ಖುರೇಷಿ – ಜಾಲಿ ಎಲ್​​ಎಲ್​​ಬಿ 3

ಅತ್ಯುತ್ತಮ ನಟ ಪೋಷಕ ಪಾತ್ರ: ಸಂಜಯ್ ದತ್ – ಧುರಂಧರ್

ಖಳನಾಯಕ ಪಾತ್ರದಲ್ಲಿ ಅತ್ಯುತ್ತಮ ನಟ: ಅಕ್ಷಯ್ ಖನ್ನಾ – ಧುರಂಧರ್

ಅತ್ಯುತ್ತಮ ಸಂಗೀತ ನಿರ್ದೇಶನ: ಶಾಶ್ವತ್ ಸಚ್‌ದೇವ್ – ಧುರಂಧರ್

ಅತ್ಯುತ್ತಮ ಮೂಲ ಕಥೆ: ಆದಿತ್ಯ ಧರ್ – ಧುರಂಧರ್

ಅತ್ಯುತ್ತಮ ಅಡಾಪ್ಡೆಡ್ ಕಥೆ: ಬಷಾರತ್ ಪೀರ್, ಸುಮಿತ್ ರಾಯ್, ನೀರಜ್ ಘೈವಾನ್ – ಹೋಮ್‌ಬೌಂಡ್

ಅತ್ಯುತ್ತಮ ಗೀತರಚನೆ: ಇರ್ಷಾದ್ ಕಾಮಿಲ್ – ಸೈಯಾರಾ

ಅತ್ಯುತ್ತಮ ಹಿನ್ನೆಲೆ ಗಾಯಕ : ಫಹೀಮ್ ಅಬ್ದುಲ್ಲಾ – ಸೈಯಾರಾ

ಅತ್ಯುತ್ತಮ ಹಿನ್ನೆಲೆ ಗಾಯಕಿ : ಶ್ರೇಯಾ ಘೋಶಾಲ್ – ಸೈಯಾರಾ

ಅತ್ಯುತ್ತಮ ನಟಿ ಪಾದಾರ್ಪಣೆ: ರಾಶಾ ಥಡಾನಿ – ಆಜಾದ್

ಅತ್ಯುತ್ತಮ ನಟ ಪಾದಾರ್ಪಣೆ: ಅಹಾನ್ ಪಾಂಡೆ – ಸೈಯಾರಾ

ತಾಂತ್ರಿಕ ವಿಭಾಗಗಳು

ಅತ್ಯುತ್ತಮ ಛಾಯಾಗ್ರಹಣ: ವಿಕಾಸ್ ನೌಲಾಖಾ – ಧುರಂಧರ್

ಅತ್ಯುತ್ತಮ ಚಿತ್ರಕಥೆ: ಆದಿತ್ಯ ಧರ್ – ಧುರಂಧರ್

ಅತ್ಯುತ್ತಮ ಸಂಭಾಷಣೆ: ಆದಿತ್ಯ ಧರ್ – ಧುರಂಧರ್

ಅತ್ಯುತ್ತಮ ಸಂಕಲನ (ಎಡಿಟಿಂಗ್): ಶಿವಕುಮಾರ್ ವಿ. ಪಾಲಿಕರ್ – ಧುರಂಧರ್

ಅತ್ಯುತ್ತಮ ನೃತ್ಯ ಸಂಯೋಜನೆ: ಬೋಸ್ಕೋ ಲೆಸ್ಲಿ ಮಾರ್ಟಿಸ್ – ಆವಾನ್ ಜಾವಾನ್, ವಾರ್ 2

ಅತ್ಯುತ್ತಮ ಧ್ವನಿ ವಿನ್ಯಾಸ : ವಿಶ್ವದೀಪ್ ಚಟರ್ಜಿ – ಧುರಂಧರ್

ಅತ್ಯುತ್ತಮ ಧ್ವನಿ ಮಿಶ್ರಣ : ಅಲೋಕ್ ಡೇ – ಛಾವಾ

ಅತ್ಯುತ್ತಮ ಹಿನ್ನೆಲೆ ಸಂಗೀತ: ಎ.ಆರ್. ರೆಹಮಾನ್ – ಛಾವಾ

ಅತ್ಯುತ್ತಮ VFX: ಅಸೆಂಬ್ಲೇಜ್ ಎಂಟರ್‌ಟೈನ್‌ಮೆಂಟ್, ರೆಡಫೈನ್ – ಛಾವಾ

ಒಟಿಟಿ ಚಲನಚಿತ್ರ ವಿಭಾಗ

ಅತ್ಯುತ್ತಮ ಚಿತ್ರ – ಬಾರಾಮುಲ್ಲಾ

ಅತ್ಯುತ್ತಮ ಮೂಲ ಕಥೆ – ಬಾರಾಮುಲ್ಲಾ

ಅತ್ಯುತ್ತಮ ನಿರ್ದೇಶನ – ಸ್ಟೋಲೆನ್ ಚಿತ್ರಕ್ಕಾಗಿ ಕರಣ್ ತೇಜ್‌ಪಾಲ್

ಅತ್ಯುತ್ತಮ ನಾಯಕ ನಟ – ಅಭಿಷೇಕ್ ಬ್ಯಾನರ್ಜಿ (ಸ್ಟೋಲೆನ್)

ಅತ್ಯುತ್ತಮ ನಟಿ – ಸನ್ಯಾ ಮಲ್ಹೋತ್ರಾ (ಮಿಸೆಸ್)

ಅತ್ಯುತ್ತಮ ಪೋಷಕ ನಟಿ – ಮೋನಿಕಾ ಪನ್ವಾರ್ (ನಿಶಾಂಚಿ 2)

ಅತ್ಯುತ್ತಮ ಪೋಷಕ ನಟ– ಅವಿನಾಶ್ ತಿವಾರಿ (ದಿ ಮೆಹ್ತಾ ಬಾಯ್ಸ್)

ಒಟಿಟಿ ವೆಬ್ ಸರಣಿ ವಿಭಾಗ

ಅತ್ಯುತ್ತಮ ಸರಣಿ – ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್

ಅತ್ಯುತ್ತಮ ನಿರ್ದೇಶನ – ಆರ್ಯನ್ ಖಾನ್ (ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್)

ಅತ್ಯುತ್ತಮ ಪೋಷಕ ನಟಿ– ಅನ್ಯಾ ಸಿಂಗ್ (ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್)

ಅತ್ಯುತ್ತಮ ಪೋಷಕ ನಟ – ರಾಘವ್ ಜುಯಲ್ (ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್)

ಅತ್ಯುತ್ತಮ ನಾಯಕ ನಟ – ಜೈದೀಪ್ ಅಹ್ಲಾವತ್ (ಪಾತಾಲ್ ಲೋಕ್ 2)

ಅತ್ಯುತ್ತಮ ನಟಿ – ತಿಲೋತಮಾ ಶೋಮ್ (ಪಾತಾಲ್ ಲೋಕ್ 2)

ಅತ್ಯುತ್ತಮ ಮೂಲ ಕಥೆ – ಪಾತಾಲ್ ಲೋಕ್ 2

ಅತ್ಯುತ್ತಮ ಡಾಕ್ಯುಸೀರಿಸ್ / ಡಾಕ್ಯುಫಿಲ್ಮ್: ರಾಕೇಶ್ ರೋಷನ್ & ಶಶಿ ರಂಜನ್ – ದಿ ರೋಷನ್ಸ್

ಅತ್ಯುತ್ತಮ ರಿಯಾಲಿಟಿ ಶೋ– ದಿ ಟ್ರೇಟರ್ಸ್

ಅತ್ಯುತ್ತಮ ಶೀರ್ಷಿಕೆ ಗೀತೆ: ಉಜ್ವಲ್ ಗುಪ್ತಾ – ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language