Hashtagintro

ಕನ್ನಡಿಗ ನಿರ್ಮಾಪಕನ ಸಾಹಸ, ಸಿನಿಮಾ ಆಗುತ್ತಿದೆ ‘ಗಂಗಾಸಾಗರ’ ಕದನ

ಕನ್ನಡಿಗ ನಿರ್ಮಾಪಕನ ಸಾಹಸ, ಸಿನಿಮಾ ಆಗುತ್ತಿದೆ ‘ಗಂಗಾಸಾಗರ’ ಕದನ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸೈನ್ಯದ ಸಾಹಸಗಳ ಕುರಿತಾಗಿ, ಯುದ್ಧಗಳ ಕುರಿತಾಗಿ ಸಿನಿಮಾಗಳು ನಿರ್ಮಾಣ ಆಗುವುದು ಬಹಳ ಅಪರೂಪ. ಆದರೂ ಸಹ ಕೇವಲ ಬೆರಳೆಣಿಕೆಯಷ್ಟು. ಆದರೆ ಹಿಂದಿಯಲ್ಲಿ ಹಲವಾರು ಸಿನಿಮಾಗಳನ್ನು ಪ್ರತಿ ವರ್ಷ ನಿರ್ಮಾಣ ಮಾಡಲಾಗುತ್ತದೆ. ಅದರಲ್ಲೂ ಹಲವು ನಿಜವಾದ ಸೈನ್ಯದ ಆಪರೇಷನ್​​ಗಳು, ಕದನಗಳು, ಯುದ್ಧಗಳ ಕುರಿತಾಗಿ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಇದೀಗ ಇಂಥಹುದೇ ಒಂದು ಪ್ರಯತ್ನ ಕನ್ನಡದಲ್ಲೂ ಆಗುತ್ತಿದೆ. ವಿಶೇಷವೆಂದರೆ ಸೈನ್ಯದ ಹೋರಾಟದ ಬಗ್ಗೆ ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣ ಆಗಲಿದೆ.

1971 ರ ಭಾರತ-ಪಾಕಿಸ್ತಾನ ಯುದ್ಧದ ಭಾಗವಾಗಿರುವ ಭೀಕರ ಗಂಗಾಸಾಗರ ಕದನದ ಕುರಿತಾದ ಸಿನಿಮಾ ಅನ್ನು ತೆರೆಗೆ ತರಲಾಗುತ್ತಿದೆ. ಭಾರತೀಯ ಸೇನೆಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿರುವ ಗಂಗಾಸಾಗರ್ ಕದನದ ಕಥೆಗೆ ಚಿತ್ರಕತೆಯ ರೂಪ ನೀಡಲಾಗಿದೆ. ಸುಮಂತ್ ರಾತುರಿ ಅವರು ‘ಗಂಗಾಸಾಗರ್ ಕದನ’ ಕುರಿತಾದ ಸಿನಿಮಾ ನಿರ್ದೇಶನ ಮಾಡಲಿದ್ದು ಸಿನಿಮಾನಲ್ಲಿ ವರ್ಧನ್ ಪುರಿ ನಾಯಕನಾಗಿ ನಟಿಸಲಿದ್ದಾರೆ. ಈ ಸಿನಿಮಾಕ್ಕೆ ‘ಪರಂ ವೀರ್’ ಎಂದು ಹೆಸರಿಡಲಾಗಿದೆ.

‘ಪರಂ ವೀರ್’ ಚಿತ್ರವು ಭಾರತೀಯ ಸೈನಿಕರ ಅಪ್ರತಿಮ ಶೌರ್ಯ ಮತ್ತು ತ್ಯಾಗವನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸುವ ಗುರಿಯನ್ನು ಹೊಂದಿದೆ. ಸಿನಿಮಾದ ವಿಶೇಷತೆಯೆಂದರೆ ಈ ಸಿನಿಮಾವನ್ನು ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೈರಾಧಾ ಮೋಷನ್ ಪಿಕ್ಚರ್ಸ್ ಹಾಗೂ ಎಚ್‌ವಿಜೆ ಮೀಡಿಯಾ ಬ್ಯಾನರ್‌ಗಳ ಅಡಿಯಲ್ಲಿ ಕನ್ನಡಿಗ ಸಾಗರ್ ಗೌಡ ಮತ್ತು ಸುಮಂತ್ ರಾತುರಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:ಮತ್ತೆ ತೆಲುಗು ಚಿತ್ರರಂಗಕ್ಕೆ ಹೊರಟ ನಟಿ ಸಪ್ತಮಿ ಗೌಡ: ಸಿನಿಮಾ ಯಾವುದು?

ಕರ್ನಾಟಕ ಮೂಲದ ನಿರ್ಮಾಪಕ ಸಾಗರ್ ಗೌಡ ಬಾಲಿವುಡ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ತಮ್ಮ ಈ ಸಿನಿಮಾ ಸಾಹಸದ ಬಗ್ಗೆ ಮಾತನಾಡಿರುವ ನಿರ್ಮಾಪಕ ಸಾಗರ್ ಗೌಡ, ‘ಪರಂ ವೀರ್’ ಸಿನಿಮಾ ಕೇವಲ ಒಂದು ಸಿನಿಮಾ ಮಾತ್ರವಲ್ಲ. ದೇಶಕ್ಕಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ ಭಾರತೀಯ ಸೈನಿಕರ ಸಾಹಸಗಾಥೆಯನ್ನು ಜನರಿಗೆ ತಲುಪಿಸುವ ಮತ್ತು ಮುಂದಿನ ಪೀಳಿಗೆಗೆ ಅವರ ತ್ಯಾಗದ ಮಹತ್ವವನ್ನು ಪರಿಚಯಿಸುವ ಒಂದು ಮಹತ್ವದ ಕಾರ್ಯ’ ಎಂದಿದ್ದಾರೆ.

‘ಪರಂ ವೀರ್’ ಸಿನಿಮಾ ಅನ್ನು ತಾಂತ್ರಿಕವಾಗಿಯೂ ಅದ್ಧೂರಿಯಾಗಿ ತೆರೆಗೆ ತರಲು ನಿರ್ದೇಶಕ ಮತ್ತು ನಿರ್ಮಾಪಕರು ಸಜ್ಜಾಗಿದ್ದಾರೆ. ಛಾಯಾಗ್ರಹಣ, ಸಂಕಲನ, ಸಂಗೀತ, ಧ್ವನಿ ವಿನ್ಯಾಸ ಮತ್ತು ಇತರ ಪ್ರಮುಖ ತಾಂತ್ರಿಕ ವಿಭಾಗಗಳಲ್ಲಿ ಪರಿಣತ ತಂಡದ ಸಹಕಾರದೊಂದಿಗೆ ಚಿತ್ರವನ್ನು ರೂಪಿಸಲಾಗುತ್ತಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ‘ಪರಂ ವೀರ್’ ಮೋಶನ್ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್​​ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸದ್ಯ ಮೋಷನ್ ಪೋಸ್ಟರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿರೋ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ಮುಗಿಸಿಕೊಂಡು ಆದಷ್ಟು ಬೇಗ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತರಲಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language