Hashtagintro

ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್​ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ

ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್​ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ

ನವದೆಹಲಿ, ನವೆಂಬರ್ 1: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ದಾಖಲಾಗಿದೆ. ಹಬ್ಬದ ಸೀಸನ್ ಹಾಗೂ ದೀಪಾವಳಿಯ ಖರೀದಿಯ ಭರಾಟೆಯಿಂದಾಗಿ 2026ರ ಅಕ್ಟೋಬರ್ ತಿಂಗಳಲ್ಲಿ ಯುಪಿಐ ವಹಿವಾಟುಗಳು ಸಾರ್ವಕಾಲಿಕ ದಾಖಲೆ ಬರೆದಿವೆ. ಇತಿಹಾಸದಲ್ಲೇ ಮೊದಲ ಬಾರಿಗೆ UPI ಯ ದೈನಂದಿನ ಸರಾಸರಿ ವಹಿವಾಟು ಮೌಲ್ಯವು 1 ಲಕ್ಷ ಕೋಟಿ ರೂ ದಾಟಿದೆ.

ಅಕ್ಟೋಬರ್ ತಿಂಗಳಲ್ಲಿ ಪ್ರತಿದಿನ ಸರಾಸರಿ 82.2 ಕೋಟಿ ವಹಿವಾಟುಗಳು ನಡೆದಿವೆ ಮತ್ತು ದೈನಂದಿನ ಸರಾಸರಿ ವಹಿವಾಟು ಮೌಲ್ಯವು 1 ಲಕ್ಷ ಕೋಟಿ ರೂ. ಗಡಿ ದಾಟುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಆ ತಿಂಗಳಲ್ಲಿ ಒಟ್ಟು 25.47 ಬಿಲಿಯನ್ (2,547 ಕೋಟಿ) ವಹಿವಾಟುಗಳು ನಡೆದಿವೆ. ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಆಗಿದ್ದ (ಅಕ್ಟೋಬರ್ 2025) 20.7 ಬಿಲಿಯನ್ ವಹಿವಾಟುಗಳಿಗೆ ಹೋಲಿಸಿದರೆ ಸುಮಾರು ಶೇ. 23ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್, ಎಟಿಎಫ್ ಇಂಧನಗಳ ಬೆಲೆಯಲ್ಲಿ ಅಲ್ಪ ಏರಿಕೆ; ಗೃಹಬಳಕೆ ಎಲ್​ಪಿಜಿ ದರದಲ್ಲಿ ಇಲ್ಲ ಬದಲಾವಣೆ

ಒಟ್ಟು ವಹಿವಾಟು ಮೊತ್ತ 31 ಲಕ್ಷ ಕೋಟಿ ರೂ

2026ರ ಅಕ್ಟೋಬರ್ ತಿಂಗಳಲ್ಲಿ ಒಟ್ಟು 31.53 ಲಕ್ಷ ಕೋಟಿ ರೂ ಮೌಲ್ಯದ ಹಣವನ್ನು ಯುಪಿಐ ಮೂಲಕ ವರ್ಗಾಯಿಸಲಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 27.27 ಲಕ್ಷ ಕೋಟಿ ರೂಗಿಂತ ಶೇ. 16ರಷ್ಟು ಅಧಿಕವಾಗಿದೆ.

ಹಬ್ಬದ ಸೀಸನ್ ಕೊಡುಗೆ: ನವರಾತ್ರಿ ಮತ್ತು ಪ್ರಮುಖ ಆನ್‌ಲೈನ್ ಸೇಲ್‌ಗಳು ಅಕ್ಟೋಬರ್‌ನಲ್ಲಿ ಬಂದಿದ್ದರಿಂದ ಜನರು ತಮ್ಮ ದೈನಂದಿನ ಖರ್ಚುಗಳ ಜೊತೆಗೆ ಹಬ್ಬದ ದೊಡ್ಡ ಮೊತ್ತದ ಖರೀದಿಗೂ ಯುಪಿಐ ಬಳಸಿರುವುದು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಬಿನಾನ್ಸ್ ಕ್ರಿಪ್ಟೋ ಕನ್ನ; ಉತ್ತರಕೊರಿಯನ್ ತಂಡದ ಮೇಲೆ ಶಂಕೆ; ಹ್ಯಾಕರ್​ಗಳಿಂದ ಬಹಳ ಸಂಯೋಜಿತ ದಾಳಿ ಸಾಧ್ಯವಾಗಿದ್ದು ಹೀಗೆ…

ಈ ಯುಪಿಐ ವಹಿವಾಟುಗಳ ಅಂಕಿ ಅಂಶಗಳು ಕೆಲ ಕುತೂಹಲಗಳನ್ನು ಹುಟ್ಟಿಸಿವೆ. ‘ಈ ಹಣಕಾಸು ವರ್ಷದಲ್ಲಿ, ಏಪ್ರಿಲ್​ನಿಂದ ಆಗಸ್ಟ್​ವರೆಗೆ ಯುಪಿಐ ಪಾವತಿಗಳು ಹೆಚ್ಚುತ್ತಲೇ ಹೋದರೂ, ಅವುಗಳ ನಿತ್ಯದ ಮೌಲ್ಯದಲ್ಲಿ ವ್ಯತ್ಯಯ ಆಗಲಿಲ್ಲ. ಸರಾಸರಿ ಪೇಮೆಂಟ್ ಕಡಿಮೆ ಆಗುತ್ತಲೇ ಹೋಯಿತು. ಆದರೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಯುಪಿಐ ಪೆಮೆಂಟ್​ನ ಸಂಖ್ಯೆಗಿಂತ ಅದರ ಮೌಲ್ಯ ಹೆಚ್ಚಿದೆ. ಈ ಎರಡು ತಿಂಗಳು ಸರಾಸರಿ ಪೇಮೆಂಟ್ ಗಾತ್ರ ಏರಿಕೆ ಆಗಿದೆ’ ಎಂದು ಕ್ಯಾಷ್​ಫ್ರೀ ಸಂಸ್ಥೆಯ ರೀಜು ದತ್ತಾ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language