Hashtagintro

ಎಲಾನ್ ಮಸ್ಕ್‌ಗಿಂತ 5 ಸಾವಿರ ವರ್ಷ ಮುಂಚೆಯೇ ಭಾರತದಲ್ಲಿ ಹಾರುವ ಕಾರು ಇತ್ತು: ರಣಬೀರ್ ಕಪೂರ್

ಎಲಾನ್ ಮಸ್ಕ್‌ಗಿಂತ 5 ಸಾವಿರ ವರ್ಷ ಮುಂಚೆಯೇ ಭಾರತದಲ್ಲಿ ಹಾರುವ ಕಾರು ಇತ್ತು: ರಣಬೀರ್ ಕಪೂರ್

ಎಲಾನ್ ಮಸ್ಕ್ ಅವರ ಹೊಸ ತಂತ್ರಜ್ಞಾನ ಹಾಗೂ ರಾಮಾಯಣದ ಪುಷ್ಪಕ ವಿಮಾನವನ್ನು ಹೋಲಿಸುವ ಮೂಲಕ ನಟ ರಣಬೀರ್ ಕಪೂರ್ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಭಾರತವು ಸುಮಾರು 5,000 ವರ್ಷಗಳ ಹಿಂದೆಯೇ ಇಂತಹ ಅದ್ಭುತ ಸಾಧನೆ ಮಾಡಿತ್ತು ಎಂದು ಅವರು ಹೇಳಿದ್ದಾರೆ. ಮುಂಬರುವ ‘ರಾಮಾಯಣ’ ಚಿತ್ರದ ಪ್ರಚಾರದ ವೇಳೆ ರಣಬೀರ್ ಆಡಿದ ಈ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿವೆ.

ಈ ಮಾತುಕತೆ ನಡೆದದ್ದು ರಾಮಾಯಣ ಚಿತ್ರದ ವಿಶೇಷ ಸಂದರ್ಶನದ ಸಮಯದಲ್ಲಿ. ನಟ ರಣಬೀರ್ ಕಪೂರ್, ಯಶ್, ರವಿ ದುಬೆ, ರಕುಲ್ ಪ್ರೀತ್ ಸಿಂಗ್ ಹಾಗೂ ನಿರ್ದೇಶಕ ನಿತೀಶ್ ತಿವಾರಿ ಈ ಕಾರ್ಯಕ್ರಮದಲ್ಲಿದ್ದರು. ಪುರಾತನ ಕಾಲದ ಆಯುಧಗಳು ಮತ್ತು ಅದ್ಭುತ ವಾಹನಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಆಧುನಿಕ ತಂತ್ರಜ್ಞಾನದ ವಿಷಯ ಪ್ರಸ್ತಾಪವಾಯಿತು.

ಎಲಾನ್ ಮಸ್ಕ್ ಇತ್ತೀಚೆಗೆ ಹಾರುವ ಕಾರನ್ನು ಕಂಡುಹಿಡಿದಿದ್ದಾರೆ ಎಂದು ರಣಬೀರ್ ಹೇಳಿದರು. ಆದರೆ ಭಾರತ ಇದನ್ನು 5,000 ವರ್ಷಗಳ ಹಿಂದೆಯೇ ಮಾಡಿತ್ತು ಎಂದು ಅವರು ತಿಳಿಸಿದರು. ರಾಮಾಯಣದಲ್ಲಿ ಉಲ್ಲೇಖವಾಗಿರುವ ರಾವಣನ ಪುಷ್ಪಕ ವಿಮಾನವನ್ನು ನೆನಪಿಸಿಕೊಂಡು ಅವರು ಈ ಹೇಳಿಕೆ ನೀಡಿದ್ದಾರೆ. ರಣಬೀರ್ ಅವರ ಈ ಮಾತು ನೆಟ್ಟಿಗರ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದರ್ಶನದ ವೀಡಿಯೋ ತುಣುಕುಗಳು ಭಾರಿ ಸದ್ದು ಮಾಡುತ್ತಿವೆ. ಕೆಲವರು ಭಾರತೀಯ ಪೌರಾಣಿಕ ಹಿನ್ನೆಲೆಯನ್ನು ಹೊಗಳಿದ್ದರೆ, ಮತ್ತೆ ಕೆಲವರು ಇದನ್ನು ವ್ಯಂಗ್ಯ ಮಾಡಿದ್ದಾರೆ. ಪೌರಾಣಿಕ ಕಥೆಗೂ ಆಧುನಿಕ ವಿಜ್ಞಾನಕ್ಕೂ ವ್ಯತ್ಯಾಸವಿದೆ ಎಂದು ಹಲವರು ವಾದಿಸಿದ್ದಾರೆ. ಇನ್ನು ಕೆಲವರು ಇದನ್ನೇ ತಮಾಷೆಯ ಮೀಮ್ಸ್ ಮಾಡಿ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ರಾಮಾಯಣ 2’ ರಿಲೀಸ್ ಮುಂದಕ್ಕೆ ಹೋಗುವ ವಿಷಯ ಮೊದಲೇ ಲೀಕ್ ಮಾಡಿದ್ದು ರಣಬೀರ್?

ಅಂದಹಾಗೆ ರಾಮಾಯಣದಲ್ಲಿ ಪುಷ್ಪಕ ವಿಮಾನವನ್ನು ಅತ್ಯಂತ ವೈಭವೋಪೇತ ಆಕಾಶ ರಥವೆಂದು ಬಣ್ಣಿಸಲಾಗಿದೆ. ಇದನ್ನು ದೇವಶಿಲ್ಪಿ ವಿಶ್ವಕರ್ಮನು ಬ್ರಹ್ಮದೇವನಿಗಾಗಿ ನಿರ್ಮಿಸಿದ್ದನು. ನಂತರ ಇದನ್ನು ಕುಬೇರನಿಗೆ ನೀಡಲಾಯಿತು. ರಾವಣನು ಕುಬೇರನನ್ನು ಸೋಲಿಸಿ ಈ ವಿಮಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದನು. ಈ ಪುರಾತನ ಕಥೆಯನ್ನು ರಣಬೀರ್ ಎಲಾನ್ ಮಸ್ಕ್ ಅವರ ಟೆಸ್ಲಾ ಕಾರಿಗೆ ಹೋಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language