Hashtagintro

ಬೆಂಗಳೂರಿನಲ್ಲಿ ಬುಲೆಟ್ ರೈಲು ತಯಾರಿಕೆ ಪರಿಶೀಲಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರಿನಲ್ಲಿ ಬುಲೆಟ್ ರೈಲು ತಯಾರಿಕೆ ಪರಿಶೀಲಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರು, ನವೆಂಬರ್​ 02: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನ ಬಿಇಎಂಎಲ್ (BEML) ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ, ಬಹು ನಿರೀಕ್ಷಿತ ಬುಲೆಟ್ ರೈಲು B28 ತಯಾರಿಕಾ ಪ್ರಕ್ರಿಯೆಯನ್ನು ಪರಿಶೀಲಿಸಿದ್ದಾರೆ. ಅಂಡರ್‌ಫ್ರೇಮ್, ಸೈಡ್‌ವಾಲ್, ಮೇಲ್ಛಾವಣಿ ಜೋಡಣೆ, ಬೋಗಿ ಜೋಡಣೆ, ಮೇಲ್ಮೈ ಸಿದ್ಧತೆ ಮತ್ತು ಸಂಸ್ಕರಣೆ ಸೇರಿದಂತೆ ಉತ್ಪಾದನೆಯ ಪ್ರಮುಖ ಹಂತಗಳನ್ನು ಅವರು ವೀಕ್ಷಿಸಿದ್ದಾರೆ.

ಘಟಕಗಳ ಕಾರ್ಯವೈಖರಿ ಬಗ್ಗೆಯೂ ಸಚಿವರಿಂದ ಪರಿಶೀಲನೆ

ಪ್ರಯಾಣಿಕರ ಆಸನಗಳು, ಹೀಟಿಂಗ್, ವೆಂಟಿಲೇಷನ್ ಮತ್ತು ಏರ್ ಕಂಡೀಷನಿಂಗ್ (HVAC) ವ್ಯವಸ್ಥೆ, ಕಪ್ಲರ್‌ಗಳು ಹಾಗೂ ರೈಲಿನ ಇತರ ಉಪಕರಣಗಳು ಮತ್ತು ಘಟಕಗಳ ಕಾರ್ಯವೈಖರಿಯನ್ನೂ ಸಚಿವರು ಪರಿಶೀಲಿಸಿದ್ದಾರೆ. ಸೈಡ್ ಮಾಡ್ಯೂಲ್ ಮತ್ತು ರೂಫ್ ಮಾಡ್ಯೂಲ್‌ಗಳ ತಯಾರಿಕೆ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್: ಇಲ್ಲಿದೆ ಟಿಕೆಟ್ ದರ, ವೇಳಾಪಟ್ಟಿ ಮಾಹಿತಿ

ಬುಲೆಟ್ ರೈಲಿನ ಪ್ರಮುಖ ವೈಶಿಷ್ಟ್ಯಗಳು

ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಬುಲೆಟ್ ರೈಲು ಗಂಟೆಗೆ ಗರಿಷ್ಠ 280 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ ಕಾರ್ಯಾಚರಣಾ ವೇಗ ಗಂಟೆಗೆ 249 ಕಿ.ಮೀ. ಇರಲಿದೆ. 202 ಮೀಟರ್ ಉದ್ದದ ಈ ರೈಲಿನಲ್ಲಿ ಎಂಟು ಬೋಗಿಗಳಿದ್ದು, ಒಟ್ಟು 557 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಮುಂಬೈ-ಅಹಮದಾಬಾದ್ ನಡುವಿನ 508 ಕಿ.ಮೀ. ಉದ್ದದ ಬುಲೆಟ್ ರೈಲು ಕಾರಿಡಾರ್‌ನಲ್ಲಿ ಈ ರೈಲು ಸಂಚಾರ ನಡೆಸಲಿದ್ದು, ಸಂಪೂರ್ಣ ಕಾರಿಡಾರ್ 2029ರ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language