Hashtagintro

ಅಕ್ಟೋಬರ್​ನಲ್ಲಿ ಜಾಗತಿಕ ಮಾರುಕಟ್ಟೆಗಳನ್ನು ಮೀರಿಸಿದ ಭಾರತದ ಷೇರುಬಜಾರು: ಗೋಲ್ಡ್​ಮನ್ ಸ್ಯಾಕ್ಸ್ ವರದಿ

ಅಕ್ಟೋಬರ್​ನಲ್ಲಿ ಜಾಗತಿಕ ಮಾರುಕಟ್ಟೆಗಳನ್ನು ಮೀರಿಸಿದ ಭಾರತದ ಷೇರುಬಜಾರು: ಗೋಲ್ಡ್​ಮನ್ ಸ್ಯಾಕ್ಸ್ ವರದಿ

ನವದೆಹಲಿ, ನವೆಂಬರ್ 2: ಕಳೆದ ತಿಂಗಳು ಬೇರೆ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಷೇರುಮಾರುಕಟ್ಟೆ ಉತ್ತಮ ಸಾಧನೆ ನೀಡಿದೆ ಎಂದು ಜಾಗತಿಕ ಹೂಡಿಕೆ ಸಂಸ್ಥೆಯಾದ ಗೋಲ್ಡ್​ಮನ್ ಸ್ಯಾಕ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಸಂಬಂಧಿತ ತಂತ್ರಜ್ಞಾನ ಷೇರುಗಳಿಂದ ಬಂಡವಾಳವನ್ನು ಬೇರೆಡೆಗೆ ವರ್ಗಾಯಿಸುತ್ತಿರುವ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ಅಭಿಪ್ರಾಯಪಟ್ಟಿದೆ.

ಕಳೆದ ಕೆಲವು ತಿಂಗಳುಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ವಿಪರೀತ ಏರಿಕೆಯಾಗಿದ್ದ ಎಐ (AI) ಮತ್ತು ತಂತ್ರಜ್ಞಾನ ಕ್ಷೇತ್ರಗಳ ಷೇರುಗಳಿಂದ ಹೂಡಿಕೆದಾರರು ಪ್ರಾಫಿಟ್ ಬುಕ್ ಮಾಡಿ (ಲಾಭ ಪಡೆದು) ಹೊರಬರುತ್ತಿದ್ದಾರೆ. ಬದಲಾಗಿ ಸ್ಥಿರ ಮತ್ತು ಭರವಸೆಯ ಮಾರುಕಟ್ಟೆಗಳ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಈ ಗ್ಲೋಬಲ್ ಇನ್ವೆಸ್ಟ್​ಮೆಂಟ್ ಕಂಪನಿಯ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ

ಭಾರತೀಯ ಮಾರುಕಟ್ಟೆಯ ಬಲವಾದ ಸಾಧನೆ

ಜಾಗತಿಕ ಮಾರುಕಟ್ಟೆಗಳಲ್ಲಿ ಇಂತಹ ಬದಲಾವಣೆಗಳು ನಡೆಯುತ್ತಿರುವ ಮಧ್ಯೆಯೂ, ಭಾರತೀಯ ಷೇರುಪೇಟೆಯು ತನ್ನ ಆಂತರಿಕ ಆರ್ಥಿಕ ಬಲ, ಗೃಹಬಳಕೆಯ ಬೇಡಿಕೆ ಮತ್ತು ಬಲವಾದ ಸಾಂಸ್ಥಿಕ ಹೂಡಿಕೆಗಳ ಬೆಂಬಲದಿಂದಾಗಿ ಜಾಗತಿಕ ಸೂಚ್ಯಂಕಗಳಿಗಿಂತ ಉತ್ತಮ ಪ್ರದರ್ಶನ (Outperform) ದಾಖಲಿಸಿರುವುದನ್ನು ಈ ಏಜೆನ್ಸಿ ಗುರುತಿಸಿದೆ.

ಎಐ ಎನೇಬ್ಲರ್ ಎನಿಸಿಕೊಂಡ ಕಂಪನಿಗಳ ಷೇರುಗಳಿಂದ ಹೂಡಿಕೆದಾರರು ಹೊರಬಂದಿದ್ದಾರೆ. ಭಾರತೀಯ ಕಂಪನಿಗಳು ಪ್ರಬಲವಾಗಿರುವ ಐಟಿ ಸರ್ವಿಸಸ್ ಸ್ಟಾಕ್​ಗಳಲ್ಲಿ ಹೂಡಿಕೆ ಹರಿವು ಬರುತ್ತಿದೆ. ಜಾಗತಿಕವಾಗಿ ಎಐ ಸ್ಟಾಕ್​ಗಳು ಅಕ್ಟೋಬರ್​ನಲ್ಲಿ ನಿಫ್ಟಿ ಸೂಚ್ಯಂಕಕ್ಕಿಂತ ಶೇ. 6 ಕಡಿಮೆ ಸಾಧನೆ ತೋರಿದೆ. ಎಸಿಎಸ್​ಐ ಏಷ್ಯಾ ಪೆಸಿಫಿಕ್ ಸೂಚ್ಯಂಕ ಕೂಡ ನಿಫ್ಟಿಗಿಂತ ಶೇ. 7 ಕಡಿಮೆ ಸಾಧನೆ ತೋರಿದೆ ಎಂಬುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ

ಹೂಡಿಕೆದಾರರ ವಿಶ್ವಾಸ: ಭಾರತದ ಮಾರುಕಟ್ಟೆಯ ಮೂಲಭೂತ ಅಂಶಗಳು ಭದ್ರವಾಗಿರುವುದರಿಂದ, ವಿದೇಶಿ ಮತ್ತು ದೇಶೀಯ ಹೂಡಿಕೆದಾರರು ಇಲ್ಲಿನ ವಿವಿಧ ವಲಯಗಳ ಮೇಲೆ ನಿರಂತರವಾಗಿ ವಿಶ್ವಾಸವಿಟ್ಟು ಹೂಡಿಕೆ ಮಾಡುತ್ತಿರುವುದು ಮಾರುಕಟ್ಟೆಗೆ ಆಸರೆಯಾಗಿದೆ ಎನ್ನುವುದು ಗೋಲ್ಡ್​ಮನ್ ಸ್ಯಾಕ್ಸ್​ನ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language