Hashtagintro

ವಿದೇಶಿ ಹೂಡಿಕೆದಾರರಿಗೆ ಎಲ್​ಟಿಸಿಜಿ ತೆಗೆದುಹಾಕಲು ಸೆಬಿ ಶಿಫಾರಸು; ದೇಶೀಯ ಮ್ಯೂಚುವಲ್ ಫಂಡ್​ಗಳಿಗೂ ರಿಯಾಯಿತಿಗೆ ಪ್ರಸ್ತಾಪ

ವಿದೇಶಿ ಹೂಡಿಕೆದಾರರಿಗೆ ಎಲ್​ಟಿಸಿಜಿ ತೆಗೆದುಹಾಕಲು ಸೆಬಿ ಶಿಫಾರಸು; ದೇಶೀಯ ಮ್ಯೂಚುವಲ್ ಫಂಡ್​ಗಳಿಗೂ ರಿಯಾಯಿತಿಗೆ ಪ್ರಸ್ತಾಪ

ನವದೆಹಲಿ, ನವೆಂಬರ್ 2: ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಮತ್ತು ಜಾಗತಿಕ ಮಾರುಕಟ್ಟೆಯೊಂದಿಗೆ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಮಹತ್ವದ ಪ್ಲಾನ್ ಮಾಡಿದೆ. ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರಿಗೆ (FPI) ವಿಧಿಸಲಾಗುವ ದೀರ್ಘಕಾಲೀನ ಬಂಡವಾಳ ಲಾಭ ತೆರಿಗೆಯನ್ನು (LTCG) ತೆಗೆದುಹಾಕುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಮಾರುಕಟ್ಟೆಗೆ ವಿದೇಶಿ ಹೂಡಿಕೆದಾರರ ಒಳಹರಿವನ್ನು ಹೆಚ್ಚಿಸಲು ಮತ್ತು ಹೂಡಿಕೆದಾರರಿಗೆ ತೆರಿಗೆಯ ಹೊರೆಯನ್ನು ತಗ್ಗಿಸುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಮತ್ತಷ್ಟು ಆಕರ್ಷಕವಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಜಾಗತಿಕ ಮಾರುಕಟ್ಟೆಗಳನ್ನು ಮೀರಿಸಿದ ಭಾರತದ ಷೇರುಬಜಾರು: ಗೋಲ್ಡ್​ಮನ್ ಸ್ಯಾಕ್ಸ್ ವರದಿ

ದೇಶೀಯ ಮ್ಯೂಚುವಲ್ ಫಂಡ್​ಗಳಿಗೂ ಟ್ಯಾಕ್ಸ್ ರಿಲೀಫ್ ಕೊಡಲು ಆಲೋಚನೆ

ದೇಶೀಯ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಟ್ಯಾಕ್ಸ್ ರಿಲೀಫ್ ಕೊಡುವ ಯೋಜನೆಯೊಂದನ್ನು ಸೆಬಿ ಪ್ರಸ್ತಾಪಿಸಿದೆ. ಈಗಿರುವ ಹೂಡಿಕೆಯನ್ನು ಮಾರಿ ಹೊಸ ಹೂಡಿಕೆಗೆ ಅದನ್ನು ವಿನಿಯೋಗಿಸುತ್ತಿದ್ದರೆ ಆಗ ಎಲ್​ಟಿಸಿಜಿ ತೆರಿಗೆಯಿಂದ ವಿನಾಯಿತಿ ಕೊಡುವುದು ಸೆಬಿ ಮಾಡಿರುವ ಪ್ರಸ್ತಾಪವಾಗಿದೆ.

ತೆರಿಗೆ ನೀತಿಗಳ ಪುನರ್‌ಪರಿಶೀಲನೆ: ಪ್ರಸ್ತುತ ಅಸ್ತಿತ್ವದಲ್ಲಿರುವ ತೆರಿಗೆ ರಚನೆಗಳು ಮತ್ತು ಜಾಗತಿಕ ಹೂಡಿಕೆದಾರರ ಬೇಡಿಕೆಗಳನ್ನು ಪರಿಗಣಿಸಿ, ಬಂಡವಾಳ ಲಾಭ ತೆರಿಗೆಯ ನಿಯಮಗಳಲ್ಲಿ ಸೂಕ್ತ ಸಡಿಲಿಕೆ ಮಾಡುವ ಕುರಿತು ಸೆಬಿ ಒಲವು ತೋರಿದೆ.

ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ

ಮಾರುಕಟ್ಟೆಯ ಮೇಲಿನ ಪರಿಣಾಮ: ಈ ಬದಲಾವಣೆಯು ಜಾರಿಗೆ ಬಂದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs/FPIs) ಭಾರತೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ದೀರ್ಘಕಾಲೀನ ಹೂಡಿಕೆ ಮಾಡಲು ಹೆಚ್ಚು ಉತ್ಸುಕರಾಗಲಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language