Hashtagintro

ಟ್ರೋಲ್‌ಗಳನ್ನು ಮೆಟ್ಟಿನಿಂತು ಪ್ರೀತಿ ಸಾಬೀತುಪಡಿಸಿದ ನಟಿ ಮಹಾಲಕ್ಷ್ಮಿ

ಟ್ರೋಲ್‌ಗಳನ್ನು ಮೆಟ್ಟಿನಿಂತು ಪ್ರೀತಿ ಸಾಬೀತುಪಡಿಸಿದ ನಟಿ ಮಹಾಲಕ್ಷ್ಮಿ

ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಶಂಕರ್ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ದಂಪತಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. 2022ರ ಸೆಪ್ಟೆಂಬರ್‌ನಲ್ಲಿ ತಿರುಪತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಮದುವೆ ಚಿತ್ರಗಳು ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪ್ರಮಾಣದ ಟ್ರೋಲ್‌ಗಳು ವ್ಯಕ್ತವಾಗಿದ್ದವು. ಆದರೆ, ಆ ಎಲ್ಲಾ ನೆಗೆಟಿವಿಟಿಗಳನ್ನು ಮೆಟ್ಟಿ ನಿಂತಿರುವ ಈ ದಂಪತಿ, ಈಗ ಯಶಸ್ವಿಯಾಗಿ ತಮ್ಮ ಪ್ರೀತಿಯ ಪ್ರಯಾಣವನ್ನು ಮುಂದುವರಿಸಿದ್ದಾರೆ.

ಇತ್ತೀಚೆಗೆ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ಮಹಾಲಕ್ಷ್ಮಿ, ಪತಿ ರವೀಂದರ್ ಜೊತೆಗಿನ ಸುಂದರವಾದ ಫೋಟೋವನ್ನು ಹಂಚಿಕೊಂಡು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಎಲ್ಲವೂ 4 ವರ್ಷಗಳ ಹಿಂದೆ (ಸೆಪ್ಟೆಂಬರ್ 2022) ಇದೇ ತಿರುಪತಿಯಲ್ಲಿ ಆರಂಭವಾಯಿತು. ನಮ್ಮ ಜೀವನದ ಹೊಸ ಹಾಗೂ ಸುಂದರ ಅಧ್ಯಾಯ ಶುರುವಾಗಿದ್ದು ಇಲ್ಲೇ’ ಎಂದು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುವ ಟ್ರೋಲ್‌ಗಳು ಹಾಗೂ ಕಮೆಂಟ್‌ಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿರುವ ನಟಿ, ಪ್ರೀತಿಯ ನೈಜ ಅರ್ಥವನ್ನು ಬಿಚ್ಚಿಟ್ಟಿದ್ದಾರೆ. ‘ಪ್ರೀತಿ ಎಂದರೆ ಇತರರು ಏನು ನೋಡುತ್ತಾರೆ, ಏನು ಹೇಳುತ್ತಾರೆ ಅಥವಾ ಹೇಗೆ ಕಮೆಂಟ್ ಮಾಡುತ್ತಾರೆ ಎಂಬುದಲ್ಲ. ನಾವು ಪರಸ್ಪರ ಹೇಗೆ ಭಾವಿಸುತ್ತೇವೆ, ಒಬ್ಬರನ್ನೊಬ್ಬರು ಎಷ್ಟು ಆರೈಕೆ ಮಾಡುತ್ತೇವೆ ಮತ್ತು ರಕ್ಷಿಸುತ್ತೇವೆ ಎಂಬುದೇ ನಿಜವಾದ ಪ್ರೀತಿ’ ಎಂದು ಖಡಕ್ ಸಂದೇಶ ನೀಡಿದ್ದಾರೆ.

ರವೀಂದರ್ ಅವರ ದೇಹದಾಢ್ಯ ಹಾಗೂ ತೂಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಈ ಜೋಡಿಯನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು. ಹಣಕ್ಕಾಗಿ ನಟಿ ಈ ಮದುವೆಯಾಗಿದ್ದಾರೆ ಎಂದೆಲ್ಲಾ ಅಪಪ್ರಚಾರ ಮಾಡಲಾಗಿತ್ತು. ಆದರೆ, ಇಬ್ಬರೂ ಈ ಯಾವುದೇ ನೆಗೆಟಿವ್ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ, ಪರಸ್ಪರ ನೀಡಿದ ನಿಃಸ್ವಾರ್ಥ ಬೆಂಬಲ ಮತ್ತು ನಂಬಿಕೆಯಿಂದ ಪ್ರೀತಿಯ ಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಕಿಲಾಡಿ ಮೇಘ’ ಸಿನಿಮಾದಲ್ಲಿ ದೈವಾರಾಧಕನ ಪಾತ್ರದಲ್ಲಿ ಶಂಕರ್ ಅಶ್ವತ್ಥ್

‘ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಕಾಳಜಿ ವಹಿಸುತ್ತೇವೆ ಮತ್ತು ಪರಸ್ಪರ ರಕ್ಷಿಸಿಕೊಳ್ಳುತ್ತೇವೆ’ ಎಂದು ಬರೆಯುವ ಮೂಲಕ ಮಹಾಲಕ್ಷ್ಮಿ ತಮ್ಮ ವೈವಾಹಿಕ ಜೀವನದ ಸುಖಕರ ಪಯಣವನ್ನು ಸಾರಿದ್ದಾರೆ. ಕಷ್ಟದ ಸಮಯದಲ್ಲೂ ಪರಸ್ಪರ ಜೊತೆಯಾಗಿ ನಿಂತು ಸಂಸಾರ ನಡೆಸುತ್ತಿರುವ ಈ ಜೋಡಿಯ ಪೋಸ್ಟ್‌ಗೆ ಇದೀಗ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language