Hashtagintro

ಸಾಯಿ ಪಲ್ಲವಿ ಟ್ರೋಲ್ ಮಾಡಿದವರಿಗೆ ಪ್ರೋಮೋ ಮೂಲಕ ಉತ್ತರ ಕೊಟ್ಟ ‘ರಾಮಾಯಣ’ ತಂಡ

ಸಾಯಿ ಪಲ್ಲವಿ ಟ್ರೋಲ್ ಮಾಡಿದವರಿಗೆ ಪ್ರೋಮೋ ಮೂಲಕ ಉತ್ತರ ಕೊಟ್ಟ ‘ರಾಮಾಯಣ’ ತಂಡ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರತಂಡವು ಪ್ರಮುಖ ಪಾತ್ರಗಳ ಪರಿಚಯವನ್ನು ಒಂದೊಂದಾಗಿ ಮಾಡುತ್ತಿದೆ. ಇದೀಗ ಚಿತ್ರದಲ್ಲಿ ಸೀತಾ ದೇವಿಯಾಗಿ ನಟಿಸಿರುವ ನಟಿ ಸಾಯಿ ಪಲ್ಲವಿ ಅವರ ಕ್ಯಾರೆಕ್ಟರ್ ಪ್ರೋಮೋ ಬಿಡುಗಡೆಯಾಗಿದೆ. ರವಿ ದುಬೆ ಅವರ ಲಕ್ಷ್ಮಣನ ಪೋಸ್ಟರ್ ಬೆನ್ನಲ್ಲೇ ಈ ವಿಡಿಯೋ ಹೊರಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಸಾಯಿ ಪಲ್ಲವಿ ಅವರ ಕಾಸ್ಟಿಂಗ್ ಬಗ್ಗೆ ಆರಂಭದಲ್ಲಿ ಕೆಲವರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಹೊಸ ಪ್ರೋಮೋ ಬಿಡುಗಡೆಯಾದ ಬಳಿಕ ಎಲ್ಲರ ಅಭಿಪ್ರಾಯ ಬದಲಾಗಿದೆ. ಪ್ರೋಮೋದಲ್ಲಿ ಸಾಯಿ ಪಲ್ಲವಿ ಅವರ ಹಾವಭಾವ ಹಾಗೂ ಸೌಮ್ಯ ಸ್ವಭಾವ ಎಲ್ಲರ ಗಮನ ಸೆಳೆದಿದೆ. ಸೀತಾ ಮಾತೆಯ ಪಾತ್ರದಲ್ಲಿ ಅವರು ಸಂಪೂರ್ಣವಾಗಿ ಪರಕಾಯ ಪ್ರವೇಶ ಮಾಡಿದ್ದಾರೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಪ್ರೋಮೋ ಹಂಚಿಕೊಂಡಿರುವ ಚಿತ್ರತಂಡ, ‘ಭೂಮಿಯ ಪುತ್ರಿ, ಮಿಥಿಲೆಯ ರಾಜಕುಮಾರಿ. ಪ್ರೀತಿಯಿಂದ ಬಂಧಿತಳಾಗಿ, ಧರ್ಮದಿಂದ ಮಾರ್ಗದರ್ಶಿಸಲ್ಪಟ್ಟವಳು’ ಎಂದು ಬರೆದುಕೊಂಡಿದೆ. ವಿಡಿಯೋದಲ್ಲಿ ಸಾಯಿ ಪಲ್ಲವಿ ಅವರ ಮುಖದಲ್ಲಿನ ಶಾಂತತೆ ಮತ್ತು ದೈವಿಕ ಕಳೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಆರಂಭದ ದಿನಗಳಲ್ಲಿ ಇದ್ದ ಎಲ್ಲಾ ಅನುಮಾನಗಳನ್ನು ಈ ಹೊಸ ಪ್ರೋಮೋ ಸಂಪೂರ್ಣವಾಗಿ ದೂರ ಮಾಡಿದೆ.

ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಯಶ್ ರಾವಣನ ಪಾತ್ರದಲ್ಲಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗವು ಇದೇ ನವೆಂಬರ್ 5ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಪೈರಸಿಯಿಂದ ತಪ್ಪಿಸಿಕೊಳ್ಳಲು ರಿಲೀಸ್​​ಗೂ ಮೊದಲೇ ದೊಡ್ಡ ಶೀಲ್ಡ್ ಪಡೆದ ‘ರಾಮಾಯಣ’

ಚಿತ್ರದ ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಸ್ಟಾರ್ ನಟರ ಬಹುಕೋಟಿ ವೆಚ್ಚದ ಈ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆಗಳಿವೆ. ಮೊದಲ ಭಾಗದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಾಯಿ ಪಲ್ಲವಿ ಅವರ ಅಭಿನಯವು ಸಿನಿಮಾಗೆ ಮತ್ತಷ್ಟು ಬಲ ತಂದುಕೊಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language