Hashtagintro

Chanakya Niti: ಒತ್ತಡಮುಕ್ತ ಜೀವನ ನಿಮ್ಮದಾಗಲೂ ಈ ಸರಳ ಸೂತ್ರವನ್ನು ಅಳವಡಿಸಿಕೊಳ್ಳಿ

Chanakya Niti: ಒತ್ತಡಮುಕ್ತ ಜೀವನ ನಿಮ್ಮದಾಗಲೂ ಈ ಸರಳ ಸೂತ್ರವನ್ನು ಅಳವಡಿಸಿಕೊಳ್ಳಿ

ಇಂದಿನ ಈ ಒತ್ತಡದ ಬದುಕಿನಲ್ಲಿ ಒತ್ತಡವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಭಾಗವಾಗಿಬಿಟ್ಟಿದೆ. ಕೆಲಸದ ಒತ್ತಡ (stress), ಕುಟುಂಬದ ಜವಾಬ್ದಾರಿಗಳು, ಕೌಟುಂಬಿಕ ಸಮಸ್ಯೆಗಳು, ಭವಿಷ್ಯ ಹಾಗೂ ಹಣಕಾಸಿನ ಚಿಂತೆಗಳು… ಇಂತಹ ಅನೇಕ ಚಿಂತೆಗಳು ಮನಸ್ಸನ್ನು ದುರ್ಬಲಗೊಳಿಸುತ್ತವೆ. ಒತ್ತಡವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತವೆ. ಹೀಗೆ ಅನೇಕರು ಈ ಒತ್ತಡದಿಂದ ಬೇಸತ್ತು ಜೀವನದಲ್ಲಿ ನೆಮ್ಮದಿಯನ್ನು ಹುಡುಕುತ್ತಿದ್ದಾರೆ, ನೀವು ಕೂಡ ಇದೇ ರೀತಿ ಒತ್ತಡದಿಂದ ಮುಕ್ತರಾಗಿ ನೆಮ್ಮದಿ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಬಯಸುತ್ತಿದ್ದೀರಾ? ಅದಕ್ಕಾಗಿ ಹೆಚ್ಚೇನೂ ಮಾಡಬೇಕೆಂದಿಲ್ಲ, ಆಚಾರ್ಯ ಚಾಣಕ್ಯರು ತಿಳಿಸಿಕೊಟ್ಟಿರುವ ಈ ಸರಳ ಸೂತ್ರದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ.

ಆಗಿ ಹೋಗಿರುವುದಕ್ಕೆ ದುಃಖಿಸಬೇಡಿ, ಭವಿಷ್ಯದ ಬಗ್ಗೆ ಚಿಂತಿಸಬೇಡಿ:

ಅನೇಕರು ಭೂತಕಾಲದಲ್ಲಿ ಆಗಿ ಹೋಗಿರುವಂತಹ ವಿಷಯಗಳ ಬಗ್ಗೆ ವಿಷಾದಿಸುತ್ತಾ ಅದನ್ನೇ ಯೋಚಿಸುತ್ತಾ ಕುಳಿತುಬಿಡುತ್ತಾರೆ. ಇನ್ನೂ ಕೆಲವರು ಭವಿಷ್ಯದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ನಿರಂತರವಾಗಿ ಚಿಂತಿಸುತ್ತಾರೆ. ಇದರ ಬಗ್ಗೆ ಚಿಂತಿಸಿ ಫಲವೇನಿಲ್ಲ ಏಕೆಂದರೆ ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಭವಿಷ್ಯ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಹಾಗಾಗಿ ಆಗಿ ಹೋಗಿರುವುದರ ಬಗ್ಗೆ ಚಿಂತೆಯನ್ನು ಬಿಟ್ಟು ವರ್ತಮಾನದಲ್ಲಿ ಬದುಕಿ. ಆಗ ಮಾತ್ರ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯ ಎಂದಿದ್ದಾರೆ ಚಾಣಕ್ಯ.

ನಿಮ್ಮ ಸಹವಾಸ ಕೂಡ ಉತ್ತಮ ರೀತಿಯಲ್ಲಿರಲಿ:

ನಮ್ಮ ಸುತ್ತಮುತ್ತಲಿನ ಜನರು ನಮ್ಮ ಆಲೋಚನೆಗಳು ಮತ್ತು ನಡವಳಿಕೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಾರೆ. ಆದ್ದರಿಂದ ನಿರಂತರವಾಗಿ ನಕಾರಾತ್ಮಕವಾಗಿ ಮಾತನಾಡುವ, ಪ್ರತಿಯೊಂದರಲ್ಲೂ ತಪ್ಪು ಹುಡುಕುವ ಜನರಿಂದ ದೂರವಿರಿ. ನೆಮ್ಮದಿಯ ಜೀವನ ನಿಮ್ಮದಾಗಲು ಸಕಾರಾತ್ಮಾಕ ಮನೋಭಾವದ, ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಉತ್ತಮ ಜನರೊಂದಿಗೆ ಬೆರೆಯಿರಿ.

ನಿಮ್ಮ ಆಲೋಚನೆಗಳನ್ನು ನಿಯಂತ್ರಿಸಿ:

ಒತ್ತಡವು ಹೊರಗಿನ ವಿಷಯಗಳಿಂದ ಬರುವುದಿಲ್ಲ. ಅದು ನಮ್ಮದೇ ಆದ ಭಯ ಮತ್ತು ಆತಂಕಗಳಿಂದ ಉಂಟಾಗುತ್ತದೆ.  ಕೆಟ್ಟ ಆಲೋಚನೆಗಳು ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದೇ ಸಕಾರಾತ್ಮಕ ಆಲೋಚನೆಗಳು ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ನಾವು ಯಾವಾಗಕೂ ಪಾಸಿಟಿವ್‌ ಆಗಿರ್ಬೇಕು ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಚಾಣಕ್ಯರ ಈ ಮಾತುಗಳನ್ನು ತಪ್ಪದೇ ಪಾಲಿಸಿ

ನಿಮ್ಮ ಮನಸ್ಸು ಮತ್ತು ಆಸೆಗಳನ್ನು ನಿಯಂತ್ರಿಸಿ:

ಕೋಪ, ಅಸೂಯೆಮ ದುರಾಸೆ, ಇತರರಿಂದ ಅತಿಯಾಗಿ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಇವೆಲ್ಲವೂ ಮನಸ್ಸಿನ ಶಾಂತಿಯನ್ನು ಕೆಡಿಸಿ ಒತ್ತಡವನ್ನು ಹೆಚ್ಚು ಮಾಡುತ್ತವೆ. ಆದ್ದರಿಂದ ನಿಮ್ಮ ಮನಸ್ಸನ್ನು ನಿಯಂತ್ರಿಸಲು ಕಲಿಯಿರಿ. ಯಾರಿಂದಲೂ ಅತಿಯಾಗಿ ಏನನ್ನೂ ನಿರೀಕ್ಷಿಸಬೇಡಿ. ಆಗ ಮಾತ್ರ ನೆಮ್ಮದಿಯ ಜೀವನ ನಿಮ್ಮದಾಗಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ನಿಮಗಾಗಿ ಸಮಯ ಮಾಡಿಕೊಳ್ಳಿ:

ಪ್ರತಿದಿನ ಸ್ವಲ್ಪ ಸಮಯ ಮೌನವಾಗಿ ಕುಳಿತು ನಿಮ್ಮ ಆಲೋಚನೆಗಳನ್ನು ಗಮನಿಸುತ್ತಿರಿ. ಇದು ಮನಸ್ಸಿಗೆ ಶಾಂತಿಯನ್ನು ತರುತ್ತದೆ. ಧ್ಯಾನ, ಮೌನ ಮತ್ತು ಆತ್ಮಾವಲೋಕನದಂತಹ ಅಭ್ಯಾಸಗಳು ನಮಗೆ ಹೊಸ ಶಕ್ತಿಯನ್ನು ತುಂಬುತ್ತವೆ. ಒತ್ತಡವನ್ನು ದೂರ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language