Hashtagintro

‘ಮ್ಯಾರೇಜ್ ಪಾರ್ಟಿ’ ಸಿನಿಮಾದಿಂದ ಬಂತು ಮೋಜು ಮಸ್ತಿಯ ‘ಗಲಾಟೆ’ ಹಾಡು

‘ಮ್ಯಾರೇಜ್ ಪಾರ್ಟಿ’ ಸಿನಿಮಾದಿಂದ ಬಂತು ಮೋಜು ಮಸ್ತಿಯ ‘ಗಲಾಟೆ’ ಹಾಡು

ಚಯನ್ ಶೆಟ್ಟಿ ನಿರ್ದೇಶನದಲ್ಲಿ ಸಿದ್ಧವಾಗಿರುವ ‘ಮ್ಯಾರೇಜ್ ಪಾರ್ಟಿ’ ಸಿನಿಮಾದ ‘ಗಲಾಟೆ..’ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಇದೇ ಡಿಸೆಂಬರ್ 4ರಂದು ಅದ್ದೂರಿಯಾಗಿ ತೆರೆಗಾಣಲಿರುವ ಈ ಚಿತ್ರದಲ್ಲಿನ ಮನರಂಜನೆಯ ಝಲಕ್ ತೋರಿಸುವ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡಿನ ಬಿಡುಗಡೆ ನೆಪದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಯಿತು. ನಿರ್ದೇಶಕ ಚಯನ್ ಶೆಟ್ಟಿ, ನಟರಾದ ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ಪುಷ್ಪರಾಜ್ ಬೋಳಾರ್, ನಿರ್ಮಾಪಕ ಸಂತೋಷ್ ವಿ., ಕೋರಿಯೋಗ್ರಾಫರ್ ಮುರುಗ, ಮೈಮ್ ರಾಮದಾಸ್, ಭೀಮ್ ರಾವ್ ವಾಸ್ಟರ್, ಜ್ಯೋತಿ ಶೆಟ್ಟಿ, ನಮಿತಾ ಕಿರಣ್, ಅನನ್ಯಾ, ರಕ್ಷಿತಾ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ಸಿನಿಮಾದಲ್ಲಿ ವಿನೀತ್ ಅವರು ನಾಯಕನಾಗಿ ನಟಿಸಿದ್ದಾರೆ.

ನಿರ್ದೇಶಕ ಚಯನ್ ಶೆಟ್ಟಿ ಅವರು ಈ ಹಾಡಿನ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಇದು ಹೆಸರೇ ಸೂಚಿಸುವಂತೆ ಮದುವೆಯೊಂದರ ಸುತ್ತ ಘಟಿಸುವ ಕಥೆಯ ಚಿತ್ರ. ಇದರಲ್ಲಿ ಹಾರರ್ ಅಂಶಗಳೂ ಇವೆ. ಈ ಹಾಡು ಇಷ್ಟೊಂದು ಚೆನ್ನಾಗಿ ಮೂಡಿಬರಲು ಕಾರಣವೇ ನಮ್ಮ ನಿರ್ಮಾಪಕರು. ಮ್ಯಾರೇಜ್ ಪಾರ್ಟಿ ಅಂದಾಕ್ಷಣ ಇದು ಸಂಪೂರ್ಣವಾಗಿ ಮದುವೆ ಸುತ್ತಲೇ ಸುತ್ತುವ ಕಥೆ ಅಂದುಕೊಳ್ಳಬೇಕಿಲ್ಲ. ಅದರಲ್ಲಿ ಬೇರೆ ಕಥನಗಳೂ ಇವೆ’ ಎಂದು ಅವರು ಹೇಳಿದರು.

ನಿರ್ಮಾಪಕ ಸಂತೋಷ್ ವಿ. ಅವರಿಗೆ ಇದು ಮೊದಲ ಸಿನಿಮಾ. ‘ಮೊದಲ ಹೆಜ್ಜೆಯಲ್ಲಿಯೇ ಅತ್ಯಂತ ಅಚ್ಚುಕಟ್ಟಾಗಿ ತನ್ನ ಕೆಲಸವನ್ನು ನಿರ್ವಹಿಸುವ ಚಯನ್ ಶೆಟ್ಟಿ ನಿರ್ದೇಶಕರಾಗಿ ಸಿಕ್ಕಿರೋದು ಹೆಮ್ಮೆಯ ವಿಚಾರ. ಎಲ್ಲ ತಂತ್ರಜ್ಞರು, ಕಲಾವಿದರ ಸಹಕಾರದೊಂದಿಗೆ ಇದೊಂದು ಉತ್ತಮ ಚಿತ್ರವಾಗಿ ಮೂಡಿಬಂದಿದೆ’ ಎಂದು ಅವರು ಹೇಳಿದ್ದಾರೆ.

Marriage Party Team

Marriage Party Team

ಈ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಹಾಗೂ ಗಲಾಟೆ ಸಾಂಗ್‌ನಲ್ಲಿ ಹೆಜ್ಜೆ ಹಾಕಿರುವ ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು ಹಾಗೂ ಮೈಮ್ ರಾಮ್‌ದಾಸ್ ಅವರು ಕೂಡ ತಮ್ಮ ಅನುಭವಗಳನ್ನು ಹಂಚಿಕೊಂಡರು. ‘ಇದು ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲಿದೆ’ ಎಂದು ಅವರೆಲ್ಲ ಭರವಸೆಯ ಮಾತುಗಳನ್ನಾಡಿದರು.

ಇದನ್ನೂ ಓದಿ: ಕರಾವಳಿ ಕಥೆಯ ‘ಮ್ಯಾರೇಜ್ ಪಾರ್ಟಿ’ ಚಿತ್ರದಲ್ಲಿ ಕಾಮಿಡಿ ಕಲಾವಿದರ ದಂಡು

ಈ ಹಾಡಿಗೆ ಪ್ರಣವಮ್ ಸಸಿ ಅವರು ಧ್ವನಿ ನೀಡಿದ್ದಾರೆ. ತ್ರಿಲೋಕ್ ತ್ರಿವಿಕ್ರಮ ಅವರು ಸಾಹಿತ್ಯ ಬರೆದಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಹಲವಾರು ರಿಯಾಲಿಟಿ ಶೋಗಳ ಮೂಲಕ ಹೆಸರಾಗಿರುವ ಮುರುಗ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ವಾಸ್ಟರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language