Hashtagintro

Deepavali 2026: ದೀಪಾವಳಿಯಂದು ತಪ್ಪಿಯೂ ಈ ವಸ್ತುವನ್ನು ಮನೆಗೆ ತರಬೇಡಿ

Deepavali 2026: ದೀಪಾವಳಿಯಂದು ತಪ್ಪಿಯೂ ಈ ವಸ್ತುವನ್ನು ಮನೆಗೆ ತರಬೇಡಿ

ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿಯನ್ನು (Deepavali) ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಲಕ್ಷ್ಮೀ ದೇವಿಯನ್ನು ಪೂಜಿಸುವ ವಾಡಿಕೆ ಇದೆ. ಲಕ್ಷೀ ದೇವಿಯನ್ನು ಒಲಿಸಿಕೊಳ್ಳಲು, ಮನೆಯಲ್ಲಿ ಶಾಂತಿ ಸಮೃದ್ಧಿ ನೆಲೆಸಲು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ, ದೀಪಾವಳಿ ಹಬ್ಬದ ಆರಂಭವನ್ನು ಸೂಚಿಸುವ ಧನತ್ರಯೋದಶಿಯ ದಿನ ಚಿನ್ನ, ಬೆಳ್ಳಿ ಸೇರಿದಂತೆ ಜನ ಒಂದಷ್ಟು ನಿರ್ಧಿಷ್ಟ ವಸ್ತುಗಳನ್ನು ಮನೆಗೆ ತರುತ್ತಾರೆ. ಜೊತೆಗೆ ದೀಪಾವಳಿಯಂದು ವಾಹನಗಳನ್ನು ಕೂಡ ಖರೀದಿ ಮಾಡುತ್ತಾರೆ. ಅದೇ ರೀತಿ ಈ ಕೆಲವೊಂದು ವಸ್ತುಗಳನ್ನು ದೀಪಾವಳಿ ಹಬ್ಬದ ಸಮಯದಲ್ಲಿ ಮನೆಗೆ ತರುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ರೆ ಯಾವೆಲ್ಲಾ ವಸ್ತುಗಳನ್ನು ದೀಪಾವಳಿ ಸಮಯದಲ್ಲಿ ಖರೀದಿ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಕಬ್ಬಿಣದ ವಸ್ತುಗಳನ್ನು ಖರೀದಿಸಿಬೇಡಿ:

ಧನತ್ರಯೋದಶಿ ದಿನದಂದು ಕಬ್ಬಿಣದ ವಸ್ತುಗಳನ್ನು ಮನೆಗೆ ತರುವುದು ಶುಭವಲ್ಲ. ದೀಪಾವಳಿಯಂದು ಕಬ್ಬಿಣಕ್ಕೆ ಸಂಬಂಧಿಸಿದ ಯಾವ ವಸ್ತುಗಳನ್ನು ತಪ್ಪಿಯೂ ಖರೀದಿಸಬಾರದಂತೆ. ಏಕೆಂದರೆ ಕಬ್ಬಿಣವು ಶನಿ ದೇವರಿಗೆ ಸಂಬಂಧಿಸಿದೆ. ಆದ್ದರಿಂದ ಕಬ್ಬಿಣ ವಸ್ತುಗಳನ್ನು ಖರೀದಿಸಬೇಡಿ. ಬದಲಿಗೆ  ಹಿತ್ತಾಳೆ, ಬೆಳ್ಳಿ ಅಥವಾ ತಾಮ್ರದ ವಸ್ತುಗಳನ್ನು ಖರೀದಿಸಿ.

ಗಾಜಿನ ವಸ್ತುಗಳನ್ನು ಖರೀದಿಸುವುದು ಶುಭವಲ್ಲ:

ದೀಪಾವಳಿ ಹಬ್ಬದ ಸಮಯದಲ್ಲಿ ಒಡೆದ ವಸ್ತುಗಳು, ಗಾಜು ಇತ್ಯಾದಿಗಳನ್ನು ಮನೆಯಲ್ಲಿ ಇಡಬಾರದು, ಅಂತಹ ವಸ್ತುಗಳನ್ನು ಖರೀದಿಸಲು ಬಾರದು ಇವು ಬಡತನವನ್ನು ತರುತ್ತವೆ ಎಂಬ ನಂಬಿಕೆಯಿದೆ. ಹಾಗಾಗಿ  ನೀವು ಧನತ್ರಯೋದಶಿ  ಹಬ್ಬದಂದು ಗಾಜಿನ ವಸ್ತುಗಳನ್ನು ಮನೆಗೆ ತರಬಾರದು.

ಚಾಕು, ಕತ್ತರಿಯಂತಹ ಚೂಪಾದ ವಸ್ತುಗಳನ್ನು ಖರೀದಿಸಬೇಡಿ:

ದೀಪಾವಳಿಯಂದು ಚಾಕು ಮತ್ತು ಕತ್ತರಿಗಳಂತಹ ಹರಿತವಾದ ವಸ್ತುಗಳನ್ನು ಖರೀದಿಸುವುದು ಶುಭವಲ್ಲ ಎಂದು ಹೇಳಲಾಗುತ್ತದೆ. ಈ ದಿನದಂದು ಚಾಕು ಮತ್ತು ಕತ್ತರಿಗಳನ್ನು ಮಾತ್ರವಲ್ಲದೆ, ಸೂಜಿಗಳನ್ನು ಸಹ ತಪ್ಪಿಸಬೇಕು. ಯಾವುದೇ ಶುಭ ದಿನದಂದು ಅಂತಹ ವಸ್ತುಗಳನ್ನು ಮನೆಗೆ ತರಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಅವುಗಳು ನಕಾರಾತ್ಮಕತೆಯನ್ನು ಸಂಕೇತಿಸುತ್ತವೆ.

ಕಪ್ಪು ಬಣ್ಣದ ವಸ್ತುಗಳನ್ನು ಖರೀದಿಸಬೇಡಿ:

ಧನತ್ರಯೋದಶಿಯಂದು ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. ಕಪ್ಪು ಬಣ್ಣ ನಕಾರಾತ್ಮಕತೆಯನ್ನು ಸಂಕೇತಿಸುವುದರಿಂದ ದೀಪಾವಳಿಯಂದು ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸುವುದು ಶುಭವಲ್ಲ ಎಂದಿ ಹೇಳಲಾಗುತ್ತದೆ.

ಇದನ್ನೂ ಓದಿ: ದೀಪಾವಳಿಯಂದು ನಿಮ್ಮ ಪ್ರೀತಿಪಾತ್ರರಿಗೆ ಈ ವಿಶೇಷ ಉಡುಗೊರೆಯನ್ನು ನೀಡಿ

ದೀಪಾವಳಿಯಂದು ಏನನ್ನು ಖರೀದಿಸುವುದು ಶುಭ?

  • ದೀಪಾವಳಿಯಂದು ಕಬ್ಬಿಣವನ್ನು ಹೊರತು ಪಡಿಸಿ ಚಿನ್ನ, ಬೆಳ್ಳಿ ಮತ್ತು ಇತರ ಲೋಹದ ವಸ್ತುಗಳನ್ನು ಖರೀದಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.
  • ದೀಪಾವಳಿಯಂದು, ಗಣೇಶ, ಲಕ್ಷ್ಮಿ ದೇವಿ, ಕುಬೇರನ ವಿಗ್ರಹ ಮತ್ತು ಧೂಪದ್ರವ್ಯ, ಕಲಶ, ದೀಪ, ಪೂಜಾ ತಟ್ಟೆ, ಮಂತ್ರ ಫಲಕ ಮುಂತಾದ ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ಒಳ್ಳೆಯದು.
  • ದೀಪಾವಳಿಯ ದಿನದಂದು ಪೊರಕೆಯನ್ನು ಖರೀದಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.
  • ಕೊತ್ತಂಬರಿ ಬೀಜ, ಉಪ್ಪು ಮತ್ತು ಗೃಹೋಪಯೋಗಿ ವಸ್ತುಗಳು ಇತ್ಯಾದಿಗಳನ್ನು ಖರೀದಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Lifestyle

Read full article on TV9 Kannada Lifestyle

Leave a Comment

Your email address will not be published. Required fields are marked *

समाचार की भाषा चुनें / Choose News Language