Hashtagintro

ಗೋಧಿ ಹಿಟ್ಟಿನಿಂದ ತಾಮ್ರ, ಹಿತ್ತಾಳೆ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು

ಗೋಧಿ ಹಿಟ್ಟಿನಿಂದ ತಾಮ್ರ, ಹಿತ್ತಾಳೆ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು

ದೀಪ, ಹರಿವಾಣದಂತಹ ಪೂಜಾ ಸಾಮಾಗ್ರಿಗಳಿಂದ ಹಿಡಿದು ತಟ್ಟೆ, ಚೊಂಬಿನಂತಹ ತಾಮ್ರ (Copper), ಹಿತ್ತಳೆ ಪಾತ್ರೆಗಳು ಬಹುತೇಕ ಎಲ್ಲಾ ಮನೆಗಳಲ್ಲೂ ಇದ್ದೇ ಇರುತ್ತದೆ. ದೈನಂದಿನ ಬಳಕೆ ಮತ್ತು ಗಾಳಿ ಮತ್ತು ನೀರಿಗೆ ಒಡ್ಡಿಕೊಳ್ಳುವುದರಿಂದ ಹಿತ್ತಾಳೆ, ತಾಮ್ರದ ಪಾತ್ರೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ  ಮತ್ತು ಮಸುಕಾಗುತ್ತವೆ. ಅಲ್ಲದೆ ಅವುಗಳ ಮೇಲೆ ಕಪ್ಪು ಅಥವಾ ಹಸಿರು ಕಲೆಗಳು ರೂಪುಗೊಳ್ಳುತ್ತವೆ. ಈ ಕಲೆ, ಕೊಳೆಗಳನ್ನು ತೆಗೆದುಹಾಕಲು ಹೆಚ್ಚಿನವರು ದುಬಾರಿ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ರಾಸಾಯನಿಕಗಳ ಅತಿಯಾದ ಬಳಕೆಯು ಪಾತ್ರೆಗಳು ಮತ್ತು ಕೈಗಳಿಗೆ ಹಾನಿಕಾರಕವಾಗಿದೆ. ಹೀಗಿರುವಾಗ ನೀವು ಗೋಧಿ ಹಿಟ್ಟಿನ ಸಹಾಯದಿಂದ ಯಾವುದೇ ಖರ್ಚಿಲ್ಲದೆ ಸುಲಭವಾಗಿ ಹಿತ್ತಾಳೆ, ತಾಮ್ರ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು. ಗೋಧಿ ಹಿಟ್ಟಿನಿಂದ ತಾಮ್ರದ ಪಾತ್ರೆಗಳನ್ನು ಕ್ಲೀನ್‌ ಮಾಡೋದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ.

ಗೋಧಿ ಹಿಟ್ಟಿನಿಂದ ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆ ಹೊಳೆಯುವಂತೆ ಮಾಡಲು ಮೊದಲು ಗೋಧಿ ಹಿಟ್ಟಿನ ಪೇಸ್ಟ್ ತಯಾರಿಸಬೇಕು. ಗೋಧಿ ಹಿಟ್ಟು ಪ್ರತಿಯೊಂದು ಮನೆಯಲ್ಲೂ ಇದ್ದೇ ಇರುತ್ತದೆ. ಈ ಗೋಧಿ ಹಿಟ್ಟು ತಾಮ್ರ, ಹಿತ್ತಾಳೆ ಪಾತ್ರೆಯ ಕೊಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು, ಮೊದಲು, ಒಂದು ಬಟ್ಟಲಿನಲ್ಲಿ ಸ್ವಲ್ಪ ಪ್ರಮಾಣದ ಗೋಧಿ ಹಿಟ್ಟು ಹಾಕಿ, ಅದಕ್ಕೆ ಉಪ್ಪು, ಸ್ವಲ್ಪ ಸೋಡಾ, ಅರಶಿನ ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್‌ ತಯಾರಿಸಿಕೊಳ್ಳಿ.

ಗೋಧಿ ಹಿಟ್ಟಿನ ಪೇಸ್ಟ್‌ನಿಂದ ಪಾತ್ರೆಗಳನ್ನು ಈ ರೀತಿ ಸ್ವಚ್ಛಗೊಳಿಸಿ:

ತಯಾರಾದ ಪೇಸ್ಟ್ ಅನ್ನು ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳಿಗೆ ಚೆನ್ನಾಗಿ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅರಿಶಿನ ಮತ್ತು ಉಪ್ಪು ಕೊಳೆಯನ್ನು ಸಡಿಲಗೊಳಿಸುತ್ತದೆ, ಆದರೆ ನಿಂಬೆಯ ನೈಸರ್ಗಿಕ ಆಮ್ಲವು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಂತರ, ಮೃದುವಾದ ಬಟ್ಟೆ ಅಥವಾ ಸ್ಪಂಜಿನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಕೆಲವೇ ನಿಮಿಷಗಳಲ್ಲಿ, ಪಾತ್ರೆಗಳು ಹೊಸದರಂತೆ ಹೊಳೆಯುತ್ತವೆ. ಪಾತ್ರೆಯನ್ನು ಬಲವಾಗಿ ಉಜ್ಜುವುದನ್ನು ತಪ್ಪಿಸಿ, ಏಕೆಂದರೆ ಇದು ಪಾತ್ರೆಗಳಲ್ಲಿ ಗೀರುಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ: ಕಿತ್ತಳೆ ಸಿಪ್ಪೆಯ ಸಾಬೂನು; ಈ ಕೆಮಿಕಲ್‌ ಫ್ರೀ ಸೋಪ್ ತಯಾರಿಸೋದು ಬಲು ಸುಲಭ

ರಾಸಾಯನಿಕಗಳಿಲ್ಲದ ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ:

ಈ ಹೋಮ್‌ಮೇಡ್‌ ಪೇಸ್ಟ್‌ನ ದೊಡ್ಡ ಪ್ರಯೋಜನವೆಂದರೆ ಇದರಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಇದು ಪಾತ್ರೆಗಳ ಲೇಪನಕ್ಕೆ  ಮತ್ತು ಕೈಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಇದರಿಂದ ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ, ಪಾತ್ರೆಗಳ ನೈಸರ್ಗಿಕ ಹೊಳಪು ದೀರ್ಘಕಾಲ ಹಾಗೆಯೇ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Lifestyle

Read full article on TV9 Kannada Lifestyle

Leave a Comment

Your email address will not be published. Required fields are marked *

समाचार की भाषा चुनें / Choose News Language