Hashtagintro

Diwali 2026 Stock Market Holiday: ದೀಪಾವಳಿ ಸೀಸನ್​ನಲ್ಲಿ ಷೇರು ಮಾರುಕಟ್ಟೆಗೆ ಇರುವ ರಜಾದಿನಗಳು

Diwali 2026 Stock Market Holiday: ದೀಪಾವಳಿ ಸೀಸನ್​ನಲ್ಲಿ ಷೇರು ಮಾರುಕಟ್ಟೆಗೆ ಇರುವ ರಜಾದಿನಗಳು

ನವದೆಹಲಿ, ನವೆಂಬರ್ 5: ದೀಪಾವಳಿ ಸಮಯ ಬಂದೇಬಿಟ್ಟಿದೆ. ನವೆಂಬರ್ 5 ಆಗಿರುವ ಇವತ್ತಿನಿಂದಲೇ ದೀಪಾವಳಿ ಸೀಸನ್ ಶುರುವಾಗಿದೆ. ಇವತ್ತು ಗೋವತ್ಸ ದ್ವಾದಶಿಯಾಗಿದ್ದು, ಮಹಾರಾಷ್ಟ್ರ ಮೊದಲಾದ ಕೆಲ ರಾಜ್ಯಗಳಲ್ಲಿ ದನಕರುಗಳಿಗೆ ಪೂಜೆ ಮಾಡಲಾಗುತ್ತದೆ. ನಾಳೆ, ಶುಕ್ರವಾರವೇ ಧನತ್ರಯೋದಶಿ ಇದ್ದು, ದೀಪಾವಳಿಯ ಶುಭ ಸಮಯ ಆರಂಭವಾಗುತ್ತದೆ. ನವೆಂಬರ್ 7, ಶನಿವಾರದಂದು ನರಕ ಚತುರ್ದಶಿ ಇದೆ. ಅದಾದ ಬಳಿಕ ಬಹಳ ಮುಖ್ಯವಾದ ಧನಲಕ್ಷ್ಮೀ ಪೂಜೆ ಇರುತ್ತದೆ. ಅದು ಭಾನುವಾರ. ನವೆಂಬರ್ 10ರಂದು ಗೋವರ್ಧನ ಪೂಜೆಯ ದಿನ ಇರುತ್ತದೆ. ನವೆಂಬರ್ 5ರಿಂದ 11ರವರೆಗೂ ದೀಪಾವಳಿಯ ವಿವಿಧ ಶುಭದಿನಗಳಿವೆ. ಈ ವೇಳೆ, ಷೇರು ಮಾರುಕಟ್ಟೆಯಲ್ಲಿ ಯಾವ್ಯಾವ ದಿನ ರಜೆ ಇರುತ್ತದೆ? ಇಲ್ಲಿದೆ ಕೆಲ ಮಾಹಿತಿ….

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಷೇರು ವಿನಿಮಯ ಕೇಂದ್ರಗಳ ರಜಾದಿನಗಳ ಕ್ಯಾಲೆಂಡರ್ ಪ್ರಕಾರ, ದೀಪಾವಳಿಯ ಎರಡು ದಿನಗಳು ಮಾರುಕಟ್ಟೆಗೆ ವಿಶೇಷವಾಗಿದೆ. ಧನಲಕ್ಷ್ಮೀ ಪೂಜೆಯಂದು ಮುಹೂರ್ತ ಟ್ರೇಡಿಂಗ್ ನಡೆಯುತ್ತದೆ. ಗೋವರ್ಧನ ಪೂಜೆಯ ದಿನದಂದು ಟ್ರೇಡಿಂಗ್ ಪೂರ್ಣ ರಜೆ ಇರುತ್ತದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಈ ವರ್ಷದ ವಿಶೇಷ ಮುಹೂರ್ತ ಟ್ರೇಡಿಂಗ್; ದಿನಾಂಕ, ಸಮಯ ಪ್ರಕಟಿಸಿದ ಎನ್​ಎಸ್​ಇ, ಬಿಎಸ್​ಇ

ಆ ಪ್ರಕಾರ, ನವೆಂಬರ್ 8ರಂದು ಮಧ್ಯಾಹ್ನ 2:05ರಿಂದ 3:30ರವರೆಗೂ ಮುಹೂರ್ತ ಟ್ರೇಡಿಂಗ್ ನಡೆಯುತ್ತದೆ. ಅಂದು ಭಾನುವಾರ ಸಾಮಾನ್ಯ ರಜಾದಿನವಾಗಿದ್ದರೂ ಮುಹೂರ್ತ ಟ್ರೇಡಿಂಗ್​ಗೋಸ್ಕರ ಸುಮಾರು ಒಂದೂವರೆ ಗಂಟೆ ಕಾಲ ಟ್ರೇಡಿಂಗ್​ಗೆ ಅವಕಾಶ ನೀಡಲಾಗುತ್ತದೆ.

ನವೆಂಬರ್ 10, ಮಂಗಳವಾರ ಮಾರುಕಟ್ಟೆಗೆ ರಜೆ

ನವೆಂಬರ್ 10ರಂದು ಷೇರು ಮಾರುಕಟ್ಟೆಗೆ ರಜೆ ಘೋಷಿಸಲಾಗಿದೆ. ಶ್ರೀಕೃಷ್ಣನು ವೃಂದಾವನದಲ್ಲಿ ಗೋವರ್ಧನಗಿರಿಯನ್ನು ಎತ್ತಿ ಜನರಿಗೆ ರಕ್ಷಣೆ ಕೊಟ್ಟ ದಂತಕಥೆ ಇದೆ. ಅಂದು ಕೃಷಿಕರಿಗೂ ಸಂಭ್ರಮದ ದಿನ. ಆ ದಿನ ಯಾವುದೇ ಟ್ರೇಡಿಂಗ್ ವಹಿವಾಟು ನಡೆಯುವುದಿಲ್ಲ.

ಇದನ್ನೂ ಓದಿ: ಭಾರತದ ಷೇರುಬಜಾರಿಗೆ ಗುರುವಾರದ ಸುಗ್ಗಿ; ಸಖತ್ ಮಿಂಚಿರುವ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆ ಓಟಕ್ಕೆ ಕಾರಣಗಳಿವು

ದೀಪಾವಳಿಯ ವಿವಿಧ ದಿನಗಳು

  • ನವೆಂಬರ್ 5, ಗುರುವಾರ: ಗೋವತ್ಸ ದ್ವಾದಶಿ
  • ನವೆಂಬರ್ 6, ಶುಕ್ರವಾರ: ಧನತ್ರಯೋದಶಿ
  • ನವೆಂಬರ್ 7, ಶನಿವಾರ: ಕಾಳಿ ಚೌದಾಸ್, ನರಕ ಚತುರ್ದಶಿ
  • ನವೆಂಬರ್ 8, ಭಾನುವಾರ: ಧನಲಕ್​ಮೀ ಪೂಜೆ (ದೀಪಾವಳಿಯ ಮುಖ್ಯಭಾಗ)
  • ನವೆಂಬರ್ 9, ಸೋಮವಾರ: ದೀಪಾವಳಿ ಸ್ನಾನ ಮತ್ತು ದೇವಪೂಜೆ
  • ನವೆಂಬರ್ 10, ಮಂಗಳವಾರ: ಗೋವರ್ಧನ ಪೂಜೆ
  • ನವೆಂಬರ್ 11, ಬುಧವಾರ: ಯಮ ದ್ವಿತೀಯ, ಭಾಯ್ ದೂಜ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language