Hashtagintro

Chanakya Niti: ಈ ಎರಡು ಸಂಗತಿಗಳಿಗೆ ಹೆದರುವವರು ಜೀವನದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ

Chanakya Niti: ಈ ಎರಡು ಸಂಗತಿಗಳಿಗೆ ಹೆದರುವವರು ಜೀವನದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ

ಜೀವನದಲ್ಲಿ ಯಶಸ್ಸನ್ನು (success) ಸಾಧಿಸಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಇದಕ್ಕಾಗಿ ಹಗಲಿರುಳು ಕಠಿಣ ಪರಿಶ್ರಮವನ್ನು ಪಡುವವರೂ ಸಹ ಇದ್ದಾರೆ. ಆದರೆ ಈ ಪರಿಶ್ರಮದ ಹೊರತಾಗಿಯೂ ಅನೇಕರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಎರಡು ಮುಖ್ಯ ಭಯಗಳೇ ಕಾರಣ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಜೀವನದಲ್ಲಿ ಎರಡು ಪ್ರಮುಖ ಸಂಗತಿಗಳಿಗೆ ಹೆದರುವ  ಯಾರೂ ಸಹ ಸಕ್ಸಸ್‌ ಆಗಲು ಸಾಧ್ಯವೇ ಇಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಿದ್ರೆ ಯಶಸ್ಸು ಸಾಧಿಸಲು ಬಯಸುವವರು ಯಾವೆಲ್ಲಾ ಭಯಗಳನ್ನು ಬಿಡಬೇಕು ಎಂಬುದನ್ನು ನೋಡೋಣ ಬನ್ನಿ.

ಟೀಕೆಗೆ ಹೆದರುವ ಜನರು ಯಶಸ್ಸುನ್ನು ಸಾಧಿಸಲು ಸಾಧ್ಯವಿಲ್ಲ:

ಆಚಾರ್ಯ ಚಾಣಕ್ಯರ ಪ್ರಕಾರ, ಟೀಕೆಗಳಿಗೆ ಹೆದರುವ ಜನರು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಸಾಧ್ಯವಿಲ್ಲ. ಟೀಕೆಯೇ ವ್ಯಕ್ತಿಯ ದೊಡ್ಡ ಭಯ ಎಂದು ಅವರು ಹೇಳುತ್ತಾರೆ. ಆ ಟೀಕೆಗಳಿಗೆ ಹೆದರುವುದನ್ನು ನಿಲ್ಲಿಸುವ ವ್ಯಕ್ತಿ ಮಾತ್ರ ಜೀವನದಲ್ಲಿ ಸಕ್ಸಸ್‌ ಗಳಿಸಲು ಸಾಧ್ಯ. ಯಶಸ್ಸಿಗೆ ಸಲಹೆಗಳನ್ನು ನೀಡುತ್ತಾ, ಅವರು ಒಬ್ಬ ವ್ಯಕ್ತಿಯು ಯಶಸ್ವಿಯಾಗಲು ಬಯಸಿದರೆ, ಅವನು ಭಿನ್ನವಾದದ್ದನ್ನು ಮಾಡಲು ಬಯಸಿದಾಗ ಜನರು ಏನು ಹೇಳುತ್ತಾರೋ ಎಂಬ ಭಯ ಮತ್ತು ಅವರ ಟೀಕೆಗಳಿಗೆ ಹೆದರಬಾರದು ಮತ್ತು ತನ್ನ ಗುರಿಯನ್ನು ತಲುಪಬೇಕು ಎಂದು ಹೇಳಿದರು. ಟೀಕೆ ಒಂದು ಅವಕಾಶದಂತೆ, ಅದಕ್ಕೆ ಹೆದರುವ ಬದಲು ಆ ಟೀಕೆಗಳನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಂಡು, ಮುಂದುವರೆಯಬೇಕು.

ಇದನ್ನೂ ಓದಿ: ಗಂಡನಾದವನು ಹೆಂಡತಿ ಹೇಳುವ ಈ ವಿಷಯಗಳಿಗೆ ಕಿವಿ ಕೊಡಬಾರದು ಎಂದಿದ್ದಾರೆ ಚಾಣಕ್ಯ

ಕಷ್ಟಗಳಿಗೆ ಹೆದರಿ ದೂರ ಹೋಗುವವನು ಸಕ್ಸಸ್‌ ಆಗೋದಿಲ್ಲ:  

ಕಷ್ಟಗಳು ಮಾನವ ಜೀವನದ ಒಂದು ಭಾಗ, ಮತ್ತು ಕಷ್ಟಗಳು ಬಂದಾಗ ನಾವು ಭಯಪಡಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಸವಾಲುಗಳಿಗೆ, ಕಷ್ಟಗಳಿಗೆ ಹೆದರುವವರು ಎಂದಿಗೂ ಯಶಸ್ಸನ್ನು ಸಾಧಿಸುವುದಿಲ್ಲ. ಕಷ್ಟಗಳು ಒಬ್ಬ ವ್ಯಕ್ತಿಯನ್ನು ಪರೀಕ್ಷಿಸುತ್ತವೆ ಮತ್ತು ಅವುಗಳನ್ನು ಮೆಟ್ಟಿ ನಿಲ್ಲುವವನು ಮಾತ್ರ ಸಕ್ಸಕ್‌ ಸಾಧಿಸಲು ಸಾಧ್ಯವಾಗುತ್ತದೆ.  ನೀವು ಕಷ್ಟಗಳಿಂದ ಭಯಭೀತರಾದರೆ, ನೀವು ಎಂದಿಗೂ ನಿಮ್ಮ ಗುರಿಗಳನ್ನು ತಲುಪಲು ಸಾಧ್ಯವಿಲ್ಲ. ನೀವು ಕೂಡ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ ಕಷ್ಟಗಳಿಗೆ ಹೆದರಬೇಡಿ, ಅವುಗಳನ್ನು ಸವಲಾಗಿ ಸ್ವೀಕರಿಸಿ, ಮುಂದುವರೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language