Hashtagintro

ಸೌಂದರ್ಯಾ ಪರ ಬ್ಯಾಟ್ ಬೀಸಿದ ಮಂಜು; ಕಿರಣ್ ಶಾಸ್ತ್ರಿ ಆಕ್ರೋಶ

ಸೌಂದರ್ಯಾ ಪರ ಬ್ಯಾಟ್ ಬೀಸಿದ ಮಂಜು; ಕಿರಣ್ ಶಾಸ್ತ್ರಿ ಆಕ್ರೋಶ

ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಮನೆಯ ಸ್ಪರ್ಧಿಗಳ ನಡುವೆ ನಾಮಿನೇಷನ್ ಮತ್ತು ಟಾಸ್ಕ್ ವಿಚಾರವಾಗಿ ಸಣ್ಣ ಸಣ್ಣ ಗಲಾಟೆಗಳು ದೊಡ್ಡ ಮಟ್ಟದ ಯುದ್ಧಕ್ಕೆ ಕಾರಣವಾಗುತ್ತಿವೆ. ಇದೀಗ ಬಿಗ್‌ ಬಾಸ್ ಮನೆಯಲ್ಲಿ ಸೌಂದರ್ಯಾ ಹಾಗೂ ಕಿರಣ್ ಶಾಸ್ತ್ರಿ ನಡುವೆ ತೀವ್ರ ಸ್ವರೂಪದ ಮಾತಿನ ಸಮರ ನಡೆದಿದೆ.

ನಾಮಿನೇಷನ್ ಪ್ರಕ್ರಿಯೆ ವೇಳೆ ಸೌಂದರ್ಯಾ ಅವರು ಕಿರಣ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ‘ಈ ಮನೆಯಲ್ಲಿ ನೀವು ಇರೋದಕ್ಕೆ ಅರ್ಹರೇ ಅಲ್ಲ. ನೀವು ಮಾಡುವ ಕಾಂಟ್ರಿಬ್ಯೂಷನ್ ಏನೂ ಇಲ್ಲ, ಬರೀ ಕೆಲಸವಿಲ್ಲದ ಮಾತುಗಳು’ ಎಂದು ಸೌಂದರ್ಯಾ ಕಿರಣ್ ವಿರುದ್ಧ ಆಕ್ರೋಶ ಹೊರಹಾಕಿದರು. ಇದರಿಂದ ಕೆರಳಿದ ಕಿರಣ್ ಶಾಸ್ತ್ರಿ ಕೂಡ ಪ್ರತ್ಯುತ್ತರ ನೀಡಿ ಸೌಂದರ್ಯಾ ವಿರುದ್ಧ ಹರಿಹಾಯ್ದರು.

ಈ ವೇಳೆ ಸಭೆಯ ಅಧ್ಯಕ್ಷ ಸ್ಥಾನದಲ್ಲಿದ್ದ ಮಂಜು ಅವರು ಇಬ್ಬರ ವಾದ-ವಿವಾದಗಳನ್ನು ಆಲಿಸಿದ ನಂತರ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿದರು. ಸೌಂದರ್ಯಾ ಅವರನ್ನು ನಾಮಿನೇಷನ್‌ನಿಂದ ಸೇಫ್ ಮಾಡಿ, ಕಿರಣ್ ಶಾಸ್ತ್ರಿ ಅವರನ್ನು ನಾಮಿನೇಟ್ ಮಾಡುವುದಾಗಿ ಮಂಜು ಘೋಷಿಸಿದರು.

ಕಿರಣ್ ಶಾಸ್ತ್ರಿ ಧಿಕ್ಕಾರ ಮತ್ತು ಆಕ್ರೋಶ:

ಮಂಜು ಅವರ ಈ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡ ಕಿರಣ್ ಶಾಸ್ತ್ರಿ, ‘ಧಿಕ್ಕಾರ ಧಿಕ್ಕಾರ, ಇಷ್ಟಕ್ಕೆಲ್ಲಾ ಕಾರಣವಾದ ಮಂಜುಗೆ ಧಿಕ್ಕಾರ’ ಎಂದು ಕೂಗಿದರು. ಇದಕ್ಕೆ ಸಿಟ್ಟಾದ ಮಂಜು, ‘ಇದರ ಪರಿಣಾಮವನ್ನು ನೀವು ಅನುಭವಿಸುತ್ತೀರಾ, ನೋಡ್ತೀರಾ. ಸುಮ್ಮನಿರಿ, ಈ ತರ ನೀರಸ ಮಾತುಗಳನ್ನು ಆಡಬೇಡಿ’ ಎಂದು ನೇರವಾಗಿಯೇ ಗಂಭೀರ ಎಚ್ಚರಿಕೆ ನೀಡುವ ಮೂಲಕ ಅವರ ಬಾಯಿ ಮುಚ್ಚಿಸಿದರು.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು; ಮನೆ ಅಸ್ತವ್ಯಸ್ತ

ಈ ಹೈಡ್ರಾಮಾ ಬಿಗ್‌ ಬಾಸ್ ಮನೆಯಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸಿದ್ದು, ಮುಂಬರುವ ದಿನಗಳಲ್ಲಿ ಕಿರಣ್ ಶಾಸ್ತ್ರಿ ಹಾಗೂ ಮಂಜು ನಡುವಿನ ವೈರತ್ವ ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language