Hashtagintro

‘ರಾಮಾಯಣ’ ಧಮಾಕಾ; ಆರು ದಿನಕ್ಕೆ 800 ಕೋಟಿ ರೂಪಾಯಿ ಕ್ಲಬ್‌ ಸೇರಿ ಹೊಸ ಇತಿಹಾಸ

‘ರಾಮಾಯಣ’ ಧಮಾಕಾ; ಆರು ದಿನಕ್ಕೆ 800 ಕೋಟಿ ರೂಪಾಯಿ ಕ್ಲಬ್‌ ಸೇರಿ ಹೊಸ ಇತಿಹಾಸ

ದೀಪಾವಳಿ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಬಹುನಿರೀಕ್ಷಿತ ‘ರಾಮಾಯಣ‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ಮೊದಲ ಮಂಗಳವಾರ ಅಂದರೆ ಆರನೇ ದಿನವೂ ಪ್ರೇಕ್ಷಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಚಿತ್ರ ದೇಶಾದ್ಯಂತ ಒಟ್ಟು 24,344 ಶೋಗಳಿಂದ ಬರೋಬ್ಬರಿ 94.10 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. 112 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಹಬ್ಬದ ದಿನಗಳಲ್ಲಿ ಚಿತ್ರಮಂದಿರಗಳತ್ತ ಜನಸಾಗರವೇ ಹರಿದುಬಂದಂತಾಗಿದೆ.

ಚಿತ್ರದ ಭಾಷಾವಾರು ಲೆಕ್ಕಾಚಾರ ನೋಡುವುದಾದರೆ, ಹಿಂದಿ ಆವೃತ್ತಿಯಲ್ಲಿ ಅತ್ಯಧಿಕವಾಗಿ 76 ಕೋಟಿ ರೂಪಾಯಿ ಗಳಿಕೆಯಾಗಿದೆ. ಉಳಿದಂತೆ ಕನ್ನಡದಲ್ಲಿ 7.75 ಕೋಟಿ ರೂಪಾಯಿ, ತೆಲುಗಿನಲ್ಲಿ 4.00 ಕೋಟಿ ರೂಪಾಯಿ, ತಮಿಳಿನಲ್ಲಿ 3.60 ಕೋಟಿ ರೂಪಾಯಿ ಹಾಗೂ ಮಲಯಾಳಂನಲ್ಲಿ 2.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆರನೇ ದಿನದಂದು ಪ್ರತಿ ಶೋಗೆ ಸರಾಸರಿ 38,726 ಸಾವಿರ ರೂಪಾಯಿ ಗಳಿಕೆಯಾಗಿದ್ದು, ಶೇಕಡಾ 55.3 ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ.

ಆರನೇ ದಿನದ ಈ ಭರ್ಜರಿ ಗಳಿಕೆಯೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 440.45 ಕೋಟಿ ರೂಪಾಯಿಗೆ ಹಾಗೂ ಒಟ್ಟು ಗ್ರಾಸ್ ಕಲೆಕ್ಷನ್ 526.50 ಕೋಟಿ ರೂಪಾಯಿಗೆ ತಲುಪಿದೆ. ಭಾರತದಾದ್ಯಂತ ಎಲ್ಲ ಭಾಷೆಗಳಲ್ಲೂ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಶರವೇಗದಲ್ಲಿ ಮುನ್ನುಗ್ಗುತ್ತಿದೆ.

ಇನ್ನು ವಿದೇಶಗಳಲ್ಲೂ ‘ರಾಮಾಯಣ’ ಅಬ್ಬರ ಜೋರಾಗಿದ್ದು, ಮಂಗಳವಾರ ಒಂದೇ ದಿನ 35 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ಅನ್ನು 297 ಕೋಟಿಗೆ ಏರಿದೆ. ಇದರೊಂದಿಗೆ ಚಿತ್ರದ ವಿಶ್ವವ್ಯಾಪಿ ಅಂದರೆ ವರ್ಲ್ಡ್‌ವೈಡ್ ಗ್ರಾಸ್ ಒಟ್ಟು ಗಳಿಕೆ ಬರೋಬ್ಬರಿ 823.50 ಕೋಟಿ ರೂಪಾಯಿ ಗಡಿ ದಾಟಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ: ‘ಆಸ್ಕರ್ ಮಾತು ಹಿಂಪಡೆಯುತ್ತಿದ್ದೇನೆ’;‘ರಾಮಾಯಣ ನೋಡಿ ಮಾತು ಬದಲಿಸಿದ ನಿತೀಶ್ ಭಾರದ್ವಾಜ್

ಚಿತ್ರದ ದಿನದ ಕಲೆಕ್ಷನ್ ನೋಡುವುದಾದರೆ ಮೊದಲ ದಿನ ಗುರುವಾರ 64.85 ಕೋಟಿ ರೂಪಾಯಿ ನೆಟ್ ಗಳಿಸಿತ್ತು. ಎರಡನೇ ದಿನ ಶುಕ್ರವಾರ ₹48.05 ಕೋಟಿ, ಮೂರನೇ ದಿನ ಶನಿವಾರ 69.80 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ ಭಾನುವಾರ 56.15 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಐದನೇ ದಿನ ಸೋಮವಾರ 107.50 ಕೋಟಿ ರೂಪಾಯಿ ಗಳಿಸಿ ಬೆರಗುಗೊಳಿಸಿದ್ದ ಚಿತ್ರ, ಆರನೇ ದಿನವೂ 94.10 ಕೋಟಿ ರೂಪಾಯಿ ಕಲೆಹಾಕಿದೆ. ಹಬ್ಬದ ರಜೆ ಮುಂದುವರಿದಿರುವುದರಿಂದ ಸಿನಿಮಾ ಶೀಘ್ರದಲ್ಲೇ 1000 ಕೋಟಿ ಕ್ಲಬ್‌ಗೆ ಸೇರುವುದು ಖಚಿತವಾಗಿದೆ. ಚಿತ್ರದ ಒಟ್ಟಾರೆ ಗಳಿಕೆ 2 ಸಾವಿರ ಕೋಟಿ ರೂಪಾಯಿ ದಾಟುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language