
ತುಮಕೂರು, ನವೆಂಬರ್ 11: ಅಂಗವಿಕಲನಂತೆ ನಟಿಸಿ ಸಾರ್ವಜನಿಕರಿಂದ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ತುಮಕೂರು ನಗರದ ಶಿವಕುಮಾರ ಸ್ವಾಮಿಜಿ ವೃತ್ತದಲ್ಲಿ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸನ್ನಿ ಎಂಬಾತ ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ವಿಶೇಷಚೇತನನಂತೆ ನಟಿಸುತ್ತಿದ್ದ. ಸಾರ್ವಜನಿಕರಿಗೆ ಆತನ ನಡವಳಿಕೆ ಅನುಮಾನಾಸ್ಪದವಾಗಿ ಕಂಡುಬಂದಾಗ, ಅವರು ಆತನನ್ನು ತಡೆದು ವಿಚಾರಿಸಿದ್ದಾರೆ. ವಾಕಿಂಗ್ ಸ್ಟಿಕ್ ತೆಗೆದು ನೋಡಿದಾಗ ಆತನಿಗೆ ಯಾವುದೇ ಅಂಗವೈಕಲ್ಯ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಿಂದ ಕೆರಳಿದ ಸಾರ್ವಜನಿಕರು ಯುವಕನಿಗೆ ಥಳಿಸಿ ನಂತರ ನೆಹರು ನಗರ (ಎನ್ಇಪಿಎಸ್) ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಯುವಕನ ಒಂದು ಕಾಲಿನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಆದಾಗ್ಯೂ, ಭಿಕ್ಷಾಟನೆ ನಡೆಸದಂತೆ ಆತನಿಗೆ ಎಚ್ಚರಿಕೆ ನೀಡಿದ ಪೊಲೀಸರು, ಬಳಿಕ ಆತನನ್ನು ಕಳುಹಿಸಿದ್ದಾರೆ. ಇಂತಹ ಭಿಕ್ಷಾಟನೆ ಜಾಲಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಎತ್ತಿ ತೋರಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
