Hashtagintro

‘ರಾಮಾಯಣ’ ಕಲೆಕ್ಷನ್: ‘ಧುರಂಧರ್’, ‘ಆರ್‌ಆರ್‌ಆರ್’, ‘ಕೆಜಿಎಫ್ 2’ ದಾಖಲೆ ಧೂಳೀಪಟ

‘ರಾಮಾಯಣ’ ಕಲೆಕ್ಷನ್: ‘ಧುರಂಧರ್’, ‘ಆರ್‌ಆರ್‌ಆರ್’, ‘ಕೆಜಿಎಫ್ 2’ ದಾಖಲೆ ಧೂಳೀಪಟ

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮತ್ತು ರವಿ ದುಬೆ ಅಭಿನಯದ ‘ರಾಮಾಯಣ: ಪಾರ್ಟ್ 1’ ಸಿನಿಮಾ ವಿಶ್ವಾದ್ಯಂತ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದೆ. ವಾರಾಂತ್ಯದ ಭರ್ಜರಿ ಗಳಿಕೆಯೊಂದಿಗೆ ಈ ಸಿನಿಮಾ ಜಾಗತಿಕವಾಗಿ 1,380 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರದ ಒಟ್ಟು ಜೀವಿತಾವಧಿ ಗಳಿಕೆಯ ದಾಖಲೆಯನ್ನು ಮುರಿದಿದೆ.

ಇದಕ್ಕೂ ಮುನ್ನವೇ ‘ಕಲ್ಕಿ 2898 AD’, ‘ಜವಾನ್’, ‘ಕೆಜಿಎಫ್: ಚಾಪ್ಟರ್ 2’ ಸೇರಿದಂತೆ ಹಲವು ದೈತ್ಯ ಚಿತ್ರಗಳ ದಾಖಲೆಯನ್ನು ‘ರಾಮಾಯಣ’ ಹಿಂದಿಕ್ಕಿದೆ. ಇದುವರೆಗೆ ‘ರಾಮಾಯಣ’ ಹಿಂದಿಕ್ಕಿರುವ ಪ್ರಮುಖ ಚಿತ್ರಗಳ ಒಟ್ಟು ಗಳಿಕೆ ಹೀಗಿದೆ: ‘ಧುರಂಧರ್’ (1,307.35 ಕೋಟಿ ರೂ.), ‘ಆರ್‌ಆರ್‌ಆರ್’ (1,230 ಕೋಟಿ ರೂ.), ‘ಕೆಜಿಎಫ್ 2’ (1,215 ಕೋಟಿ ರೂ.), ‘ಜವಾನ್’ (1,160 ಕೋಟಿ ರೂ.), ‘ಪಠಾಣ್’ (1,055 ಕೋಟಿ ರೂ.) ಮತ್ತು ‘ಕಲ್ಕಿ 2898 AD’ (1,042.25 ಕೋಟಿ ರೂ.).

‘ರಾಮಾಯಣ’ ಬಿಡುಗಡೆಯಾಗಿ 11ನೇ ದಿನವಾದ ಎರಡನೇ ಭಾನುವಾರದಂದು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 75 ಕೋಟಿ ರೂ. (ನೆಟ್) ಹಾಗೂ 89.50 ಕೋಟಿ ರೂ. (ಗ್ರಾಸ್) ಗಳಿಕೆ ಕಂಡಿದೆ. ‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗಳಿಕೆ 760.60 ಕೋಟಿ ರೂ. ನೆಟ್ ಹಾಗೂ 909 ಕೋಟಿ ರೂ. ಗ್ರಾಸ್ ತಲುಪಿದೆ. ಇನ್ನು, ವಿದೇಶಿ ಮಾರುಕಟ್ಟೆಯಿಂದ ಇದುವರೆಗೆ 475.50 ಕೋಟಿ ರೂ. ಸಂಗ್ರಹವಾಗಿದ್ದು, ಭಾನುವಾರ ಒಂದೇ ದಿನ 40 ಕೋಟಿ ರೂ. ಹರಿದುಬಂದಿದೆ. ಈ ಮೂಲಕ ‘ರಾಮಾಯಣ’ ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ 1,384.50 ಕೋಟಿ ರೂ. (ಗ್ರಾಸ್) ತಲುಪಿದೆ. ಇದರೊಂದಿಗೆ 1,000 ಕೋಟಿ ರೂ. ಕ್ಲಬ್ ಸೇರಿದ ಭಾರತದ 11ನೇ ಸಿನಿಮಾ ಎಂಬ ಹೆಗ್ಗಳಿಕೆಗೆ ‘ರಾಮಾಯಣ’ ಪಾತ್ರವಾಗಿದೆ.

‘ರಾಮಾಯಣ’ ಚಿತ್ರದ ಮುಂದೆ ಈಗ ಕೇವಲ ನಾಲ್ಕು ಭಾರತೀಯ ಸಿನಿಮಾಗಳ ದಾಖಲೆ ಮಾತ್ರ ಉಳಿದಿದೆ. ದಂಗಲ್ (2,000 ಕೋಟಿ ರೂ.), ಪುಷ್ಪ 2 (1,871 ಕೋಟಿ ರೂ.), ಧುರಂಧರ್: ದಿ ರಿವೆಂಜ್ (1,813 ಕೋಟಿ ರೂ.), ಬಾಹುಬಲಿ 2 (1,788 ಕೋಟಿ ರೂ.) ಸಿನಿಮಾಗಳು ರಾಮಾಯಣ ಚಿತ್​ರಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡಿವೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಸೀತೆ ಪಾತ್ರಕ್ಕೆ ಟೀಕೆ; ಪ್ರತಿಕ್ರಿಯೆ ನೀಡಿದ ನಿರ್ದೇಶಕ ನಿತೇಶ್ ತಿವಾರಿ

ಈ ಚಿತ್ರಕ್ಕೆ ನಿತೇಶ್ ತಿವಾರಿ ಮತ್ತು ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು ರಾಕಿಂಗ್ ಸ್ಟಾರ್ ಯಶ್ ಜಂಟಿಯಾಗಿ ಈ ಮೆಗಾ ಪ್ರಾಜೆಕ್ಟ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language