Hashtagintro

ಅಕ್ಟೋಬರ್​ನಲ್ಲಿ ಹಣದುಬ್ಬರ ಶೇ. 6.09; ಆರ್​ಬಿಐನ ತಾಳಿಕೆ ಮಿತಿ ದಾಟಿದ ಬೆಲೆ ಏರಿಕೆ ದರ

ಅಕ್ಟೋಬರ್​ನಲ್ಲಿ ಹಣದುಬ್ಬರ ಶೇ. 6.09; ಆರ್​ಬಿಐನ ತಾಳಿಕೆ ಮಿತಿ ದಾಟಿದ ಬೆಲೆ ಏರಿಕೆ ದರ

ನವದೆಹಲಿ, ನವೆಂಬರ್ 12: ಅಕ್ಟೋಬರ್ ತಿಂಗಳ ಹಣದುಬ್ಬರ ದತ್ತಾಂಶವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ ಹಣದುಬ್ಬರ ಶೇ. 6.09ಕ್ಕೆ ಏರಿದೆ. ಇದರೊಂದಿಗೆ ಹಣದುಬ್ಬರ ಸತತ 12ನೇ ಬಾರಿ ಹೆಚ್ಚಿದಂತಾಗಿದೆ. ಆರ್​ಬಿಐ ನಿಗದಿ ಮಾಡಿರುವ ಶೇ. 6ರ ತಾಳಿಕೆ ಮಿತಿಗಿಂತಲೂ ಇದು ಹೊರಗಿದೆ.

2024ರ ವರ್ಷವನ್ನು ಆಧಾರವಾಗಿಟ್ಟುಕೊಂಡು ಗಣಿಸಲಾದ ಹಣದುಬ್ಬರ ದರ ಇದಾಗಿದೆ. 2025ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ 2026ರ ಅಕ್ಟೋಬರ್ ತಿಂಗಳಲ್ಲಿ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಶೇ. 6.09ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶವು ಹೇಳುತ್ತಿದೆ.

ಇದನ್ನೂ ಓದಿ: ಟಾಟಾ ಗ್ರೂಪ್​ನ ಆರು ಕಂಪನಿಗಳ ನಾಯಕತ್ವ ತ್ಯಜಿಸಿದ ನೋಯೆಲ್; ಗ್ರೂಪ್​ನಲ್ಲಿ ಅವರ ಹಿಡಿತಕ್ಕೇನು ಆಗಿಲ್ಲ ಧಕ್ಕೆ

ಹಿಂದಿನ ತಿಂಗಳಲ್ಲಿ (2026ರ ಸೆಪ್ಟೆಂಬರ್) ಹಣದುಬ್ಬರ ಶೇ. 5.54ರಷ್ಟು ಇತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ (2025ರ ಅಕ್ಟೋಬರ್) ಹಣದುಬ್ಬರ ಶೇ. 0.25 ರಷ್ಟಿತ್ತು. ಈ ತಿಂಗಳು ಇದು ಶೇ. 6 ಅನ್ನು ದಾಟಿ ಹೋಗಿದೆ. ಹೆಚ್ಚಿನ ಆರ್ಥಿಕ ತಜ್ಞರು ಮತ್ತು ಏಜೆನ್ಸಿಗಳೂ ಕೂಡ ಅಕ್ಟೋಬರ್​ನಲ್ಲಿ ಹಣದುಬ್ಬರ ಶೇ. 6 ಅನ್ನು ಮುಟ್ಟಬಹುದು ಎಂದು ಮಾಡಿದ್ದ ಊಹೆ ನಿಜವಾಗಿದೆ.

ದತ್ತಾಂಶಗಳ ಪ್ರಕಾರ, ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಶೇ. 6.63 ಇದ್ದರೆ, ನಗರ ಭಾಗದಲ್ಲಿ ಶೇ. 5.41 ಇದೆ. ಆಹಾರ ಹಣದುಬ್ಬರ ಶೇ. 8.94ಕ್ಕೆ ಏರಿದೆ. ಗ್ರಾಮೀಣ ಭಾಗದಲ್ಲಿ ಆಹಾರ ಹಣದುಬ್ಬರ ಶೇ. 9.09 ಇದ್ದರೆ, ನಗರ ಭಾಗದಲ್ಲಿ ಆಹಾರ ಹಣದುಬ್ಬರ ಶೇ. 8.68ರಷ್ಟಿದೆ.

ಇದನ್ನೂ ಓದಿ: ಭಾರತದ ಜಿಡಿಪಿ ಎರಡನೇ ಕ್ವಾರ್ಟರ್​ನಲ್ಲಿ ಶೇ. 7.8 ಸಾಧ್ಯತೆ: ಆರ್​ಬಿಗಿಂತ ಹೆಚ್ಚಿನ ನಿರೀಕ್ಷೆ ಇಟ್ಟ ಎಸ್​ಬಿಐ ರಿಸರ್ಚ್

ಹಣದುಬ್ಬರವನ್ನು ಶೇ. 4ಕ್ಕೆ ಕಟ್ಟಿಹಾಕಬೇಕೆಂದು ಸರ್ಕಾರವು ಆರ್​ಬಿಐಗೆ ಜವಾಬ್ದಾರಿ ನೀಡಿದೆ. ಈ ಹಿನ್ನೆಲೆಯಲ್ಲಿ ಆರ್​ಬಿಐ ಹಣದುಬ್ಬರ ಶೇ. 2ರಿಂದ 6ರ ಶ್ರೇಣಿಯನ್ನು ತಾಳಿಕೆ ಮಿತಿಯಾಗಿ ನಿಗದಿ ಮಾಡಿದೆ. ಬಹಳ ತಿಂಗಳ ನಂತರ ಹಣದುಬ್ಬರವು ಈ ತಾಳಿಕೆ ಮಿತಿ ದಾಟಿ ಹೋಗಿದೆ. ಮುಂಬರುವ ಎಂಪಿಸಿ ಸಭೆಯಲ್ಲಿ ಆರ್​ಬಿಐ ಮತ್ತೊಂದು ಸುತ್ತಿನ ರೆಪೋ ದರ ಏರಿಕೆ ಕ್ರಮ ತೆಗೆದುಕೊಂಡರೂ ಅಚ್ಚರಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language