Hashtagintro

ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ

ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ

ನವದೆಹಲಿ, ನವೆಂಬರ್ 1: ಅಕ್ಟೋಬರ್ ತಿಂಗಳ ಜಿಎಸ್​ಟಿ ಕಲೆಕ್ಷನ್ ದತ್ತಾಂಶ ಪ್ರಕಟವಾಗಿದ್ದು ಇದು ಭಾರತದ ಆರ್ಥಿಕತೆ ಉತ್ತಮ ಬೆಳವಣಿಗೆ ಸಾಧಿಸುತ್ತಿರುವುದಕ್ಕೆ ಪೂರಕವೆಂಬಂತಿದೆ. 2026ರ ಅಕ್ಟೋಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹಣೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹಣಕಾಸು ಸಚಿವಾಲಯ ಇಂದು ಭಾನುವಾರ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ನಿವ್ವಳ ಜಿಎಸ್‌ಟಿ ಸಂಗ್ರಹವು ವಾರ್ಷಿಕ ಆಧಾರದ ಮೇಲೆ ಶೇ. 25.6ರಷ್ಟು ಹೆಚ್ಚಾಗಿ 2.03 ಲಕ್ಷ ಕೋಟಿ ರೂ. ತಲುಪಿದೆ. ಇದು ಪ್ರಸ್ತುತ ಹಣಕಾಸು ವರ್ಷದಲ್ಲೇ ಅತ್ಯಂತ ವೇಗದ ಜಿಎಸ್​ಟಿ ಏರಿಕೆಯಾಗಿದೆ.

ಒಟ್ಟು ಜಿಎಸ್‌ಟಿ ಸಂಗ್ರಹ ಶೇ. 23ರಷ್ಟು ಏರಿಕೆ: ಅಕ್ಟೋಬರ್ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು (Gross GST collections) ಶೇ. 22.9ರಷ್ಟು ಏರಿಕೆಯಾಗಿ 2.31 ಲಕ್ಷ ಕೋಟಿ ರೂ ಮುಟ್ಟಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 2 ಲಕ್ಷ ಕೋಟಿ ರೂ. ಗಡಿ ದಾಟುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ.

ಇದನ್ನೂ ಓದಿ: ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್​ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ

ಆಮದು ಆಧಾರಿತ ಜಿಎಸ್‌ಟಿ ಜಿಗಿತ

ಆಮದುಗಳಿಗೆ ಸಂಬಂಧಿಸಿದ ಜಿಎಸ್‌ಟಿ ರಾಜಸ್ವವು ಈ ತಿಂಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಆಮದುಗಳ ಮೇಲಿನ ಒಟ್ಟು ಐಜಿಎಸ್‌ಟಿ (IGST) ಆದಾಯವು ಶೇ. 42.2ರಷ್ಟು ಏರಿಕೆಯಾಗಿ 72,246 ಕೋಟಿ ರೂ. ತಲುಪಿದೆ. ಮರುಪಾವತಿಗಳ (refunds) ನಂತರದ ನಿವ್ವಳ ಆಮದು ಜಿಎಸ್‌ಟಿ ಶೇ. 56.2ರಷ್ಟು ಹೆಚ್ಚಾಗಿ 58,319 ಕೋಟಿ ರೂ. ಆಗಿದೆ. ಇದು ದೇಶದಲ್ಲಿ ಉತ್ಪಾದನಾ ಸಾಮರ್ಥ್ಯ ಮತ್ತು ಕಚ್ಚಾ ವಸ್ತುಗಳ ಆಮದು ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.

ದೇಶೀಯ ಜಿಎಸ್‌ಟಿ ಸಂಗ್ರಹ: ಅಕ್ಟೋಬರ್‌ನಲ್ಲಿ ದೇಶೀಯ ಜಿಎಸ್‌ಟಿ ಸಂಗ್ರಹವು ಶೇ. 15.8ರಷ್ಟು ಏರಿಕೆಯಾಗಿ 1.59 ಲಕ್ಷ ಕೋಟಿ ರೂ. ತಲುಪಿದೆ. ಇದು ಆಂತರಿಕ ಅನುಭೋಗ ಬೇಡಿಕೆ ಮತ್ತು ಆರ್ಥಿಕ ಚಟುವಟಿಕೆಗಳು ಗಟ್ಟಿಯಾಗಿರುವುದನ್ನು ತೋರಿಸುತ್ತದೆ.

ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್, ಎಟಿಎಫ್ ಇಂಧನಗಳ ಬೆಲೆಯಲ್ಲಿ ಅಲ್ಪ ಏರಿಕೆ; ಗೃಹಬಳಕೆ ಎಲ್​ಪಿಜಿ ದರದಲ್ಲಿ ಇಲ್ಲ ಬದಲಾವಣೆ

ಈ ಹಣಕಾಸು ವರ್ಷದ ಮೊದಲ ಏಳು ತಿಂಗಳುಗಳಲ್ಲಿ (ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ) ಒಟ್ಟು ಜಿಎಸ್‌ಟಿ ಸಂಗ್ರಹವು ಶೇ. 13.2ರಷ್ಟು ಬೆಳವಣಿಗೆಯೊಂದಿಗೆ 14.78 ಲಕ್ಷ ಕೋಟಿ ರೂ. ತಲುಪಿದೆ. ಹಾಗೆಯೇ ನಿವ್ವಳ ಜಿಎಸ್‌ಟಿ ಸಂಗ್ರಹವು ಶೇ. 12.6ರಷ್ಟು ಏರಿಕೆಯಾಗಿ 12.69 ಲಕ್ಷ ಕೋಟಿ ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language