
ವಾಷಿಂಗ್ಟನ್, ಅಕ್ಟೋಬರ್ 19: ಟೆಸ್ಲಾ, ಸ್ಪೇಸ್ಎಕ್ಸ್ ಸೇರಿದಂತೆ ಹಲವು ಕಂಪನಿಗಳ ಒಡೆಯ ಹಾಗೂ ವಿಶ್ವದ ಅತಿ ಶ್ರೀಮಂತನಾಗಿರುವ ಇಲಾನ್ ಮಸ್ಕ್ ಅವರು ಅಮೆರಿಕದಲ್ಲಿ ಉಚಿತ ಕೊಡುಗೆಗಳನ್ನು ನೀಡಲು ಹೊರಟಿದ್ದಾರೆ. ಮುಂದಿನ ವರ್ಷ ಅಮೆರಿಕದ ಪ್ರತೀ ಮಗುವಿಗೂ ಸ್ಪೇಕ್ಸ್ ಎಕ್ಸ್ (SpaceX) ಕಂಪನಿಯ ಷೇರನ್ನು ಕೊಡುಗೆಯಾಗಿ ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇಂಥ ಹಲವು ಕೊಡುಗೆಗಳಲ್ಲಿ ಇದು ಮೊದಲಾಗಿರುತ್ತದೆ ಎಂದು ಹೇಳುವ ಮೂಲಕ ಅಮೆರಿಕನ್ನರಲ್ಲಿ ಮಸ್ಕ್ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ
‘ಮುಂದಿನ ವರ್ಷ ನನ್ನ ಒಂದು ಸ್ಪೇಸ್ಎಕ್ಸ್ ಷೇರನ್ನು ಅಮೆರಿಕದ ಎಲ್ಲಾ ಮಕ್ಕಳಿಗೂ ನೀಡುತ್ತೇನೆ. ನೀಡಲಿರುವ ಹಲವು ಕೊಡುಗೆಗಳಲ್ಲಿ ಇದು ಮೊದಲನೆಯದಾಗಿರುತ್ತದೆ’ ಎಂದು ತಮ್ಮ ಎಕ್ಸ್ ಅಕೌಂಟ್ನಿಂದ ಇಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಜಾಗತಿಕ ಹಣಕಾಸು ಲೋಕಕ್ಕೆ ನಾವೇ ಕಿಂಗ್ ಎಂದು ಬೀಗುತ್ತಿರುವ ಪಾಕಿಸ್ತಾನ; ಮಾಜಿ ಐಎಂಎಫ್ ನಿರ್ದೇಶಕರಿಂದ ಸತ್ಯಾಂಶ ಬಹಿರಂಗ
ಇಲಾನ್ ಅವರು ತಮ್ಮ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಮಕ್ಕಳು ಎಂದರೆ ಎಷ್ಟು ವಯಸ್ಸಿನ ಒಳಗಿನವರು ಎಂಬುದು ಗೊತ್ತಿಲ್ಲ. 18 ವರ್ಷ ವಯಸ್ಸಿನ ಒಳಗಿನವರಿಗೆ ಸ್ಪೇಸ್ ಎಕ್ಸ್ ಷೇರನ್ನು ನೀಡುವ ಸಾಧ್ಯತೆ ಕಾಣುತ್ತದೆ.
ಇಲಾನ್ ಮಸ್ಕ್ ಅವರ ಟ್ವೀಟ್
Next year, I will give one of my SpaceX shares to every kid in America.
This will be the first of many.
— Elon Musk (@elonmusk) October 19, 2026
ಒಂದು ವರದಿ ಪ್ರಕಾರ, ಅಮೆರಿಕದಲ್ಲಿ 18 ವರ್ಷದೊಳಗಿನ ವಯೋಮಾನದ ಸುಮಾರು 7 ಕೋಟಿ ಸಂಖ್ಯೆಯಷ್ಟು ಮಕ್ಕಳಿದ್ದಾರೆ. ಆ ಪ್ರತಿಯೊಬ್ಬರಿಗೂ ಸ್ಪೇಸ್ ಎಕ್ಸ್ ಷೇರು ನೀಡಿದರೆ 7 ಕೋಟಿ ಷೇರು ಬೇಕಾಗುತ್ತದೆ.
ಮಾರುಕಟ್ಟೆಯಲ್ಲಿ ವಹಿವಾಟು ಆಗಬಲ್ಲಂತಹ ಸ್ಪೇಸ್ಎಕ್ಸ್ ಷೇರುಗಳ ಸಂಖ್ಯೆ ಒಟ್ಟು 290 ಕೋಟಿಯಷ್ಟು ಇದೆ. ಹೀಗಾಗಿ, 7 ಕೋಟಿ ಷೇರುಗಳ ವಿತರಣೆ ದೊಡ್ಡ ಸಂಗತಿ ಎನಿಸದೇ ಹೋಗಬಹುದು.
ಇದನ್ನೂ ಓದಿ: 20 ವರ್ಷಗಳ ದಾಖಲೆ ಮುರಿಯಲಿದೆ ಭಾರತದ ಜಿಡಿಪಿ ದರ; ಕೊರಿಯನ್ ಅರ್ಥಶಾಸ್ತ್ರಜ್ಞರ ವಿಶ್ಲೇಷಣೆ ಇಲ್ಲಿದೆ
ನಾಲ್ಕು ತಿಂಗಳ ಹಿಂದಷ್ಟೇ ಸ್ಪೇಸ್ ಎಕ್ಸ್ ಷೇರು ಮಾರುಕಟ್ಟೆಗೆ ಅಡಿ ಇಟ್ಟಿದೆ. ಒಂದು ಸ್ಪೇಸ್ ಎಕ್ಸ್ ಷೇರು ಬೆಲೆ ಸದ್ಯ 146.03 ಡಾಲರ್ ಇದೆ. 7 ಕೋಟಿ ಷೇರುಗಳಿಗೆ 1,022 ಕೋಟಿ ಡಾಲರ್ ಆಗುತ್ತದೆ. ರುಪಾಯಿ ಕರೆನ್ಸಿಯಲ್ಲಿ ಒಂದು ಲಕ್ಷ ರೂ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
