Hashtagintro

ಆಯೋಧ್ಯೆಯ ಮಾರ್ಬಲ್​​​ನೊಂದಿಗೆ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಹೈಟೆಕ್ ಸ್ವರ್ಶ

ಆಯೋಧ್ಯೆಯ ಮಾರ್ಬಲ್​​​ನೊಂದಿಗೆ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಹೈಟೆಕ್ ಸ್ವರ್ಶ

ದೇವನಹಳ್ಳಿ, (ಅಕ್ಟೋಬರ್ 26): 600 ವರ್ಷಗಳ ಇತಿಹಾಸದ ಪ್ರಾಂಗಣಕ್ಕೆ ಆಯೋಧ್ಯೆಯಿಂದ ಬಂದ ವೈಟ್ ಮಾರ್ಬಲ್, ಸುಣ್ಣ ಬಣ್ಣಗಳೊಂದಗೆ ಕಲರ್ ಪುಲ್ ಆಗಿ ಮಿಂಚುತ್ತಿರುವ ಗುಡಿ ಗೋಪುರಗಳು. ಹೀಗೆ ಹಲವು ಸೌಲಭ್ಯಗಳೊಂದಿಗೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಹೈಟೆಕಟ್ ಟಚ್ ನೀಡಲಾಗಿದೆ. ಹೌದು…ಘಾಟಿ ಸುಬ್ರಮಣ್ಯನ ದರ್ಶನಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಭಕ್ತರು ಸೂಕ್ತ ಮೂಲ ಸೌಕರ್ಯ ಸಿಗ್ತಿಲ್ಲ ಅನ್ನೋ ಆರೋಫ ಕೇಳಿ ಬರುತ್ತಿದ್ದವು. ಹೀಗಾಗಿ ದೇವಾಲಯವನ್ನ ಮತ್ತಷ್ಟು ಅಭಿವೃದ್ಧಿಪಡಿಸಲು 23 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಟಚ್ ನೀಡಲಾಗಿದೆ.

ಮುಂದಾದ ಸಚಿವ ಕೆಹೆಚ್ ಮುನಿಯಪ್ಪ 2 ವರ್ಷಗಳಿಂದೆ ದೇವಾಲಯವನ್ನ ಪ್ರಾಧಿಕಾರವಾಗಿ ಮೇಲ್ದರ್ಜೇಗೇರಿಸಿದ್ದರು. ಇನ್ನೂ ದೇವಾಲಯ ಮೇಲ್ದರ್ಜೆಗೇರಿದ 2 ವರ್ಷದಲ್ಲೆ ಪ್ರಾಧಿಕಾರದ ವತಿಯಿಂದ 23 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಅನ್ನದಾಸೋಹ ಭವನ, ಯಾತ್ರಿ ನಿವಾಸ, ಹಾಗೂ ರಥ ಬೀದಿಯ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ದೇವಸ್ಥಾನದ ಮುಂಭಾಗ ಅತಿಕ್ರಮಣವಾಗಿದ್ದ ದೇವಸ್ಥಾನ ಅಂಗಡಿಗಳ ಒತ್ತುವರಿ ತೆರವು ಮಾಡುವ ಮೂಲಕ ನೂತನ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆ.

ಇದನ್ನೂ ನೋಡಿ: ಸೀಗೆಗುಡ್ಡದಲ್ಲಿ ಜನವೋ ಜನ…ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ ಸಿನಿಮಾ

ಘಾಟಿ ಸುಬ್ರಮಣ್ಯಕ್ಕೆ ಮಂಗಳವಾರ ಭಾನುವಾರ ಮತ್ತು ವಿಶೇಷ ದಿನಗಳಲ್ಲಿ ಭಕ್ತ ಸಾಗರವೆ ಹರಿದು ಬರ್ತಿದ್ದು, ಮಳೆ ಮತ್ತು ಬಿಸಿಲಿನಲ್ಲಿ ಗಂಟೆ ಗಟ್ಟಲೆ ಕ್ಯೂ ನಲ್ಲಿ ನಿಲಲ್ಲು ಪರದಾಡ್ತಿದ್ದರು. ಹೀಗಾಗಿ ಇದನ್ನೆಲ್ಲ ಮನಗೊಂಡ ಕೆಲ ಭಕ್ತರು ಸಹ ದೇವಸ್ಥಾನದ ಪ್ರಾಂಗಣದಲ್ಲಿ ಮಂಗಳೂರು ಶೈಲಿಯಲ್ಲಿ ಹೆಂಚಿನ ಮೇಲ್ಚಾವಣಿ, ರಾಜರು ಕಟ್ಟಿಸಿದ ದೇವಸ್ಥಾನದ ಗೋಡೆಗಳಿಗೆ ಕಲ್ಲಿನ ಕೆತ್ತನೆಯ ಹೈಟೆಕ್ ಸ್ವರ್ಶ ನೀಡಲಾಗಿದೆ. ಜೊತೆಗೆ ಶೀಥಿಲಗೊಂಡಿದ್ದ ಗೋಪುರಗಳ ಜೀರ್ಣೋದ್ದಾರ ಹಾಗೂ ದೇವಸ್ಥಾನದ ಸುತ್ತಾಮುತ್ತ ಕಲ್ಲಿನ ಕಂಬಗಳ ಮಂಟಪ ನಿರ್ಮಾಣ ಮಾಡ್ತಿದ್ದು 600 ವರ್ಷಗಳ ಇತಿಹಾಸ ಪ್ರಸಿದ್ದ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಆಧುನಿಕ ತಂತ್ರಜ್ನಾನದ ಜೊತೆಗೆ ಮೂಲ ಸ್ವರೂಪಕ್ಕೆ ದಕ್ಕೆ ಆಗದಂತೆ ಹೈಟೆಕ್ ಸ್ವರ್ಶ ನೀಡಿಲಾಗುತ್ತಿದೆ.

ಇನ್ನೂ ದೇವಸ್ಥಾನದ ಸುತ್ತಾಮುತ್ತ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿ ಕೆಲಸಗಳನ್ನ ಮಾಡ್ತಿದ್ದು, ಗರ್ಭಗುಡಿ ಮತ್ತು ದೇವಸ್ಥಾನ ಮೂಲಕ್ಕೆ ದಕ್ಕೆ ಆಗದಂತೆ ಗರ್ಭಗುಡಿಯಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language