ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ರೊಮ್ಯಾಂಟಿಕ್ ಸಿನಿಮಾ ‘ಬೃಂದವಿಹಾರಿ’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ‘ಪ್ರೇಮದ ಊರಲಿ’ ಸಿನಿಮಾದ ಕಾರಣಕ್ಕಾಗಿ ಬಿಡುಗಡೆಯನ್ನು ಮುಂದೂಡಿಕೊಂಡಿದ್ದ ಈ ಸಿನಿಮಾ ಈಗ ತೆರೆಗೆ ಬರುತ್ತಿದೆ. ಸಿನಿಮಾ ಅನ್ನು ‘ಕೃಷ್ಣಂ ಪ್ರಣಯ ಸಖಿ’ ನಿರ್ದೇಶಕ ಶ್ರೀನಿವಾಸ ರಾಜು ನಿರ್ದೇಶನ ಮಾಡಿದ್ದಾರೆ.
ಬಿಗ್ಬಾಸ್ ವಿನ್ನರ್ ಶೈನ್ ಶೆಟ್ಟಿ ನಟನೆ ಮಾಡಿರುವ ಹಾರರ್, ಕಾಮಿಡಿ ಸಿನಿಮಾ ‘ಶಂಕರಾಭರಣ’ ಈ ವಾರ ರಿಲೀಸ್ ಆಗುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಸಖತ್ ಗಮನ ಸೆಳೆದಿದೆ. ಈ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಇದೇ ವಾರ ‘ಮಾರಿಗೆ ದಾರಿ’ ಎಂಬ ಕನ್ನಡ ಸಿನಿಮಾ ಸಹ ರಿಲೀಸ್ ಆಗುತ್ತಿದೆ.
ದುಲ್ಕರ್ ಸಲ್ಮಾನ್ ನಟನೆಯ ಮಾಡಿರುವ ತೆಲುಗು ಸಿನಿಮಾ ‘ಆಕಾಶಂಲೊ ಒಕ ತಾರಾ’ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಪತಿಯೊಬ್ಬ, ಪತ್ನಿಯ ಗಗನಯಾತ್ರಿ ಆಗುವ ಕನಸನ್ನು ನನಸು ಮಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
‘ಆಕಾಶಂಲೊ ಒಕ ತಾರಾ’ ಸಿನಿಮಾದ ಕತೆಯನ್ನು ಆಧರಿಸಿ ‘ಡಿಯರ್ ಆಸ್ಟ್ರೊನಾಟ್’ ತೆಲುಗು ಸಿನಿಮಾ ಸಹ ಈ ವಾರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಸಹ ಪತಿಯೊಬ್ಬ ತನ್ನ ಪತ್ನಿಯ ಗಗನಯಾತ್ರಿ ಆಗುವ ಕನಸನ್ನು ನನಸು ಮಾಡುವ ಯತ್ನ ಮಾಡುವ ಕತೆಯನ್ನು ಒಳಗೊಂಡಿದೆ.
ಕೆಲ ವರ್ಷಗಳ ಹಿಂದೆ ರಿಲೀಸ್ ಆಗಿದ್ದ ‘ಈ ನಗರಾನಿಕಿ ಏಮೈಯ್ಯಿಂದಿ’ ತೆಲುಗು ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಅದೇ ಸಿನಿಮಾದ ಸೀಕ್ವೆಲ್ ಅದೇ ಸಿನಿಮಾದ ಸೀಕ್ವೆಲ್ ‘ಈ ನಗರಾನಿಕಿ ಏಮಯ್ಯಿಂದಿ-ರಿಪೀಟ್’ ರಿಲೀಸ್ ಆಗುತ್ತಿದೆ. ಇದೊಂದು ಹಾಸ್ಯ ಪ್ರಧಾನ ಥ್ರಿಲ್ಲರ್ ಸಿನಿಮಾ ಆಗಿರಲಿದೆ.
ಮಮ್ಮುಟಿ, ಧನುಶ್, ಸಾಯಿ ಪಲ್ಲವಿ, ಶ್ರೀಲೀಲಾ ಒಟ್ಟಿಗೆ ನಟನೆ ಮಾಡಿರುವ ತಮಿಳು ಸಿನಿಮಾ ‘ಓಂ’ ಇದೇ ವಾರ ರಿಲೀಸ್ ಆಗುತ್ತಿದೆ. ರಕ್ತ ಚಂದನ ಕಳ್ಳ ಸಾಗಣೆ ಕುರಿತಾದ ಕತೆಯನ್ನು ‘ಓಂ’ ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಸಖತ್ ಗಮನ ಸೆಳೆದಿದೆ.
Source: TV9 Kannada Entertainment






