Hashtagintro

ಉತ್ತರಾಖಂಡದಲ್ಲಿ ಹೆಲಿಕಾಪ್ಟರ್​​ ದುರಂತ: AAIBಯಿಂದ ತನಿಖೆ ಆರಂಭ; ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳ ಹಸ್ತಾಂತರ

ಉತ್ತರಾಖಂಡದಲ್ಲಿ ಹೆಲಿಕಾಪ್ಟರ್​​ ದುರಂತ: AAIBಯಿಂದ ತನಿಖೆ ಆರಂಭ; ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳ ಹಸ್ತಾಂತರ

ಉತ್ತರಾಖಂಡ, ಅಕ್ಟೋಬರ್ 31: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ನಡೆದ ಹೆಲಿಕಾಪ್ಟರ್ ದುರಂತದಲ್ಲಿ 5 ಮಂದಿ ಕನ್ನಡಿಗರು ಸೇರಿ ಒಟ್ಟು 6 ಮಂದಿ ದಾರುಣವಾಗಿ ಮೃತಪಟ್ಟಿದ್ದ ಘಟನೆ ಸಂಬಂಧ ವಿಮಾನ ಅಪಘಾತ ತನಿಖಾ ಸಂಸ್ಥೆಯಿಂದ (Aircraft Accident Investigation Bureau) ಇನ್ವೆಷ್ಟಿಗೇಷನ್​ ಆರಂಭವಾಗಿದೆ. ಹೆಲಿಕಾಪ್ಟರ್‌ನ ಬ್ಲ್ಯಾಕ್​ಬಾಕ್ಸ್ ಮತ್ತು ಫ್ಲೈಟ್ ಡೇಟಾ ಪರಿಶೀಲನೆ ನಡೆಯುತ್ತಿದ್ದು, ಹೆಲಿಕಾಪ್ಟರ್ ನಿರ್ವಹಣೆ ಮತ್ತು ತಾಂತ್ರಿಕ ಸ್ಥಿತಿಯ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷದ ಜೊತೆಗೆ DGCA ನಿಯಮ ಪಾಲನೆ ಬಗ್ಗೆಯೂ ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ. ಒಂದು ತಿಂಗಳೊಳಗೆ ಈ ಸಂಬಂಧ ಪ್ರಾಥಮಿಕ ತನಿಖಾ ವರದಿ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ

ಇನ್ನು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವ ಆರು ಮಂದಿಯ ಮೃತದೇಹಗಳನ್ನು ರಕ್ಷಣಾ ತಂಡ ಪತ್ತೆಹಚ್ಚಿದ್ದು, ಜೋಶಿಮಠದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತರ ಗುರುತು ಪತ್ತೆಗೆ ಕುಟುಂಬಸ್ಥರಿಂದ DNA ಮಾದರಿ ಸಂಗ್ರಹ ನಡೆಸಲಾಗ್ತಿದ್ದು, ಕರ್ನಾಟಕದ ಐವರು ಪ್ರಯಾಣಿಕರ ಮೃತದೇಹ ಶಿಫ್ಟ್​ಗೆ ಸಿಎಂ ಸೂಚನೆ ಹಿನ್ನೆಲೆ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ನಡೆಯಲಿದೆ.

ಇದನ್ನೂ ಓದಿ: ಬೆಂಗಳೂರಿನ ಐವರ ದುರಂತ ಅಂತ್ಯ; ಉತ್ತರಾಖಂಡದ ಹೆಲಿಕಾಪ್ಟರ್ ಪತನದ ವೇಳೆ ಏನೇನಾಯ್ತು?

ಹೆಲಿಕಾಪ್ಟರ್‌ನಲ್ಲಿದ್ದ ದುರಂತಕ್ಕೀಡಾದ ಪ್ರಯಾಣಿಕರು

  • ಹಿಮಾಂಶು ಸಬರ್ವಾಲ್ (48)- ವಾಯುವ್ಯ ದೆಹಲಿ
  • ಪ್ರತಾಪ ಬಾಚಿಹಳ್ಳಿ ನಿಂಗರಾಜು (41)- ಬೆಂಗಳೂರು ಉತ್ತರ
  • ಅರುಣ್ ಸಾಳುಂಕೆ (44)- ಬೆಂಗಳೂರು
  • ಸುಧೀರ್ ಕೆ. (49)- ಬೆಂಗಳೂರು
  • ನಟರಾಜ್ (51)-ತುಮಕೂರು
  • ಶಂಕರ್ ಗೌಡ ವಿ.ಬಿ. (39)

ಜೋಶಿಮಠ ಸಮೀಪ ನಿನ್ನೆ ಟ್ರಾನ್ಸ್‌ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿತ್ತು. ಹೆಲಿಕಾಪ್ಟರ್ ಬದರಿನಾಥ ಧಾಮದಿಂದ ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಚಾಯ್ ಮತ್ತು ಥಾಯಾಂಗ್ ಗ್ರಾಮಗಳ ಸಮೀಪ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಕೆಟ್ಟ ಹವಾಮಾನ ಮತ್ತು ಕಡಿಮೆ ಗೋಚರತೆ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆಯಾದರೂ ಅಪಘಾತಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language