Hashtagintro

ಎಣ್ಣೆ ಪಾರ್ಟಿ ಮೆಲುಕು ಹಾಕಿ ಇಡೀ ಕಾರ್ಯಕ್ರಮವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ

ಎಣ್ಣೆ ಪಾರ್ಟಿ ಮೆಲುಕು ಹಾಕಿ ಇಡೀ ಕಾರ್ಯಕ್ರಮವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ

ಕೋಲಾರ, (ಅಕ್ಟೋಬರ್ 19): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರದ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಆರ್‌ಎಲ್ ಜಾಲಪ್ಪ ಅವರ ಜನ್ಮದಿನ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಈ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ತಮ್ಮನ್ನು ‘ಡಾ. ಸಿದ್ದರಾಮಯ್ಯ’ ಎಂದು ಕರೆಯುವ ಬದಲು ಸಿದ್ದರಾಮಯ್ಯ ಎಂದೇ ಕರೆಯುವಂತೆ ಹಾಸ್ಯ ಚಟಾಕಿ ಹಾರಿಸಿದರು. ಇನ್ನು ಇದೇ ವೇಳೆ ಎಣ್ಣೆ ಹಾಕುವ ವಿಚಾರವನ್ನು ಪ್ರಸ್ತಾಪಿಸಿದ್ದು, ಸ್ವರ್ಗಕ್ಕೆ ಹೋಗಬೇಕಂದ್ರೆ ಕುಡಿಯೋದು ಕಲಿತಿರಬೇಕು ಎಂದು ಜಾಲಪ್ಪನವರು ಹೇಳಿದ್ರು ಎಂದು ಸಿದ್ದರಾಮಯ್ಯ ಹೇಳಿದ್ರು. ಈ ಮಾತಿಗೆ ಕಾರ್ಯಕ್ರಮವೇ ನಗೆಗಡಲಲ್ಲಿ ತೇಲಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language