Hashtagintro

ಕನ್ನಡದ ಬಗ್ಗೆ ಸಾಯಿ ಪಲ್ಲವಿ ಹೇಳಿದ ಮಾತಿಂದಾಗಿ ಶುರುವಾಗಿದೆ ಚರ್ಚೆ

ಕನ್ನಡದ ಬಗ್ಗೆ ಸಾಯಿ ಪಲ್ಲವಿ ಹೇಳಿದ ಮಾತಿಂದಾಗಿ ಶುರುವಾಗಿದೆ ಚರ್ಚೆ

ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಅವರ ಇತ್ತೀಚಿನ ಸಂದರ್ಶನವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಂದರ್ಶನದಲ್ಲಿ ವಿವಿಧ ಭಾಷೆಗಳ ಕುರಿತು ಮಾತನಾಡಿದ ಸಾಯಿ ಪಲ್ಲವಿ, ತಮಗೆ ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳನ್ನು ನಿರ್ವಹಿಸಲು (ಮಾತನಾಡಲು) ಬರುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಬಡಗ ಸಮುದಾಯದಿಂದ ಬಂದಿರುವ ಅವರಿಗೆ ಕನ್ನಡ ಭಾಷೆಯನ್ನು ಕಲಿಯುವುದು ಅಥವಾ ಮಾತನಾಡುವುದು ಅತ್ಯಂತ ಸುಲಭವಾಗಿದ್ದರೂ ಸಹ, ಕನ್ನಡದ ಕುರಿತು ಬಂದ ಪ್ರಸ್ತಾಪಕ್ಕೆ ಅವರು ನೀಡಿದ ಪ್ರತಿಕ್ರಿಯೆ ಕೆಲವರಿಗೆ ಬೇಸರ ತರಿಸಿದೆ ಹಾಗೂ ಇದು ಅಹಂಕಾರದ ಧ್ವನಿಯಿಂದ ಕೂಡಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಸಾಯಿ ಪಲ್ಲವಿ ಅವರ ಮಾತೃಭಾಷೆ ‘ಬಡಗ’ ಹಿನ್ನೆಲೆ

ಸಾಯಿ ಪಲ್ಲವಿ ಅವರ ಮದರ್ ಟಂಗ್ (ಮಾತೃಭಾಷೆ) ಬಡಗ ಆಗಿದೆ. ಇದು ತಮಿಳುನಾಡಿನ ಸುಂದರ ತಾಣವಾದ ನೀಲಗಿರಿ ಜಿಲ್ಲೆಯ ಮಲೆನಾಡ ಪ್ರದೇಶದಲ್ಲಿ ಬಡಗ ಸಮುದಾಯದವರಿಂದ ಮಾತನಾಡಲ್ಪಡುವ ಒಂದು ವಿಶಿಷ್ಟ ದ್ರಾವಿಡ ಭಾಷೆಯಾಗಿದೆ. ಭಾಷಾಶಾಸ್ತ್ರದ ಪ್ರಕಾರ, ಬಡಗ ಭಾಷೆಯು ಕನ್ನಡ ಮತ್ತು ಹಳೆಗನ್ನಡಕ್ಕೆ ಅತ್ಯಂತ ಹತ್ತಿರದಲ್ಲಿದೆ. ಧ್ವನಿಮಾಗಳು, ಶಬ್ದಕೋಶ ಮತ್ತು ವ್ಯಾಕರಣದ ದೃಷ್ಟಿಯಿಂದ ಬಡಗ ಭಾಷಿಗರಿಗೆ ಕನ್ನಡ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಹಾಗೂ ಕಲಿಯುವುದು ಇತರ ದಕ್ಷಿಣ ಭಾರತೀಯ ಭಾಷೆಗಳಿಗಿಂತಲೂ ಸುಲಭವೆಂದು ಪರಿಗಣಿಸಲಾಗಿದೆ.

ಸಂದರ್ಶನದಲ್ಲಿ ಏನಾಯಿತು?:

ಸಂದರ್ಶಕರು ವಿವಿಧ ಭಾಷೆಗಳ ಬಗ್ಗೆ ಮಾತನಾಡುತ್ತಾ ಕನ್ನಡದ ಪ್ರಸ್ತಾಪ ತಂದಾಗ, ನಟಿ ಸಾಯಿ ಪಲ್ಲವಿ ಕಡೆಗಣಿಸುವ ರೀತಿಯಲ್ಲಿ ಉತ್ತರಿಸಿದ್ದಾರೆ ಎಂಬುದು ಅಭಿಮಾನಿಗಳು ಮತ್ತು ನೆಟ್ಟಿಗರ ವಾದವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತಮಗೆ ಇಷ್ಟವಾದ ಭಾಷೆಯನ್ನು ಆರಿಸಿಕೊಳ್ಳುವ ಮತ್ತು ಮಾತನಾಡುವ ಸ್ವಾತಂತ್ರ್ಯ ಸಂಪೂರ್ಣವಾಗಿ ಇದೆ. ಆದಾಗ್ಯೂ, ಕನ್ನಡದಂತಹ ಸಮೃದ್ಧ ಭಾಷೆಯ ವಿಷಯ ಬಂದಾಗ ಅವರು ತೋರಿದ ಧೋರಣೆ ಮತ್ತು ಪ್ರತಿಕ್ರಿಯೆಯು ಸ್ವಲ್ಪ ಅಹಂಕಾರದಿಂದ ಕೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಮುಂದುವರಿದಿವೆ. ಇನ್ನೂ ಕೆಲವರು ಸಾಯಿ ಪಲ್ಲವಿ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಮಾಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಆ ಭಾಷೆಯ ಟಚ್ ಇದ್ದು, ಕನ್ನಡದಲ್ಲಿ ಸಿನಿಮಾ ಮಾಡಿಲ್ಲ. ಹೀಗಾಗಿ, ಅದರ ಟಚ್ ಇಲ್ಲದಿರಬಹುದು ಎನ್ನುವ ವಾದ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ರಣಬೀರ್ ಕಪೂರ್, ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಸಿನಿಮಾ ಸೆಟ್‌ನಲ್ಲಿ ಬೆಂಕಿ ಅವಘಡ

ರಾಮಾಯಣ

ಸಾಯಿ ಪಲ್ಲವಿ ಅವರು ಈ ಮೊದಲು ತಮ್ಮ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಾಗ ಕನ್ನಡ ಮಾತನಾಡಿದ್ದರು. ಆ ಘಟನೆಯನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಅವರು ರಾಮಾಯಣದಲ್ಲಿ ಸೀತೆ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language