Hashtagintro

ಕನ್ನಡ ರಾಜ್ಯೋತ್ಸವದ ಶುಭಾಶಯಗಳು: ಹಾಲು-ಮೊಸರಿನ ಹೊಸ ದರ ಇಂದಿನಿಂದ ಜಾರಿಗೆ, ಯಾವ ಪ್ಯಾಕೆಟ್​​​ಗೆ ಎಷ್ಟು?

ಕನ್ನಡ ರಾಜ್ಯೋತ್ಸವದ ಶುಭಾಶಯಗಳು: ಹಾಲು-ಮೊಸರಿನ ಹೊಸ ದರ ಇಂದಿನಿಂದ ಜಾರಿಗೆ, ಯಾವ ಪ್ಯಾಕೆಟ್​​​ಗೆ ಎಷ್ಟು?

ಬೆಂಗಳೂರು, (ನವೆಂಬರ್ 1): ದುಬಾರಿ ದುನಿಯಾದಲ್ಲಿ ಬಡವರು-ಮಧ್ಯಮ ವರ್ಗದವರು ಬದುಕೋದೇ ಕಷ್ಟ ಕಷ್ಟ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಅಕ್ಕಿ, ಜೋಳ ಸೇರಿದಂತೆ ಇತರೆ ಇತರೆ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಇದರ ಮಧ್ಯೆ ಇಂದಿನಿಂದಲೇ (ನವೆಂಬರ್ 1) ನಂದಿನಿ ಹಾಲು ಮತ್ತಷ್ಟು ದುಬಾರಿಯಾಗಲಿದೆ. ಯಾಕಂದ್ರೆ ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವನ್ನೂ ಕೆಜಿಗೆ ಭರ್ತಿ 14 ರೂಪಾಯಿ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ.

ಅರ್ಧ ಕೆಜಿ ಮೊಸರು ಪಾಕೆಟ್ ಬೆಲೆ ಈ ಹಿಂದೆ 28 ರೂಪಾಯಿ ಇತ್ತು. ಆದ್ರೆ ಇಂದಿನಿಂದ 34 ರೂಪಾಯಿ ಆಗಲಿದೆ. ಅಂದ್ರೆ ಅರ್ಧ ಕೆಜಿಗೆ 6 ರೂಪಾಯಿ ಏರಿಕೆ ಆಗಲಿದೆ. ಇನ್ನು 1 ಕೆಜಿ ಮೊಸರು ಪ್ಯಾಕೆಟ್ ಬೆಲೆ ಸದ್ಯ 54 ರೂಪಾಯಿ ಇದೆ. ಆದ್ರೆ ಇಂದಿನಿಂದ ಬರೋಬ್ಬರಿ 68 ರೂಪಾಯಿ ಆಗಲಿದೆ. ಅಂದ್ರೆ 14 ರೂಪಾಯಿ ಏರಿಕೆ ಆಗಲಿದೆ.

ಇದನ್ನೂ ಓದಿ: ‘ರಾಜ್ಯದ ಇತಿಹಾಸದಲ್ಲೇ ಕಾಣದ ಭಾರಿ ಬೆಲೆ ಏರಿಕೆ’: ಮೊಸರಿನ ದರ ಹೆಚ್ಚಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕಿಡಿ

ಇಂದಿನಿಂದಲೇ ನಂದಿನಿ ಹಾಲಿನ ದರ ಹೆಚ್ಚಳ..!

ರಾಜ್ಯ ಸರ್ಕಾರ ಪ್ರತೀ ಲೀಟರ್ ಹಾಲಿಗೆ 8 ರೂಪಾಯಿ ಏರಿಕೆ ಮಾಡಿದ್ದೀವಿ ಎಂದು ಹೇಳಿತ್ತು. ಆದ್ರೆ, ಇಲ್ಲಿ ಕೆಎಂಎಫ್ ಹಾಲಿನ ಜಿಡ್ಡಿನ ಆಧಾರದ ಮೇಲೆ ದರ ಪರಿಷ್ಕರಣೆ ಮಾಡಿದೆ. ಹೀಗಾಗಿ ನೀಲಿ ಪ್ಯಾಕೆಟ್​ನಲ್ಲಿ ಬರೋ ಟೋನ್ಡ್ ಹಾಲಿಗೆ ಮಾತ್ರ 8 ರೂಪಾಯಿ ಏರಿಕೆ ಆಗಲಿದ್ದು. ಫ್ಯಾಟ್ ಅಂಶ ಹೆಚ್ಚಿರುವ ಉಳಿದ ಹಾಲಿನ ಪ್ಯಾಕೆಟ್‌ಗಳ ಮೇಲೆ ಬರೋಬ್ಬರಿ 12 ರೂಪಾಯಿವರೆಗೂ ದರ ಹೆಚ್ಚಳವಾಗಲಿದೆ.

ಯಾವ ಪ್ಯಾಕೇಟ್ ಹಾಲು ಎಷ್ಟು?

ಟೋಲ್ಡ್‌ ಹಾಲು ಒಂದು ಲೀಟರ್‌ಗೆ ಸದ್ಯ 46 ರೂಪಾಯಿ ದರ ಇದೆ. ಆದ್ರೆ ಇಂದಿನಿಂದ 54 ರೂಪಾಯಿ ಆಗಲಿದೆ. ಅಂದ್ರೆ 8 ರೂಪಾಯಿ ಏರಿಕೆಯಾಗಿದೆ. ಇನ್ನು ಹೋಮೋಜಿನೈಜ್ಡ್‌ ಟೋನ್ಡ್‌ ಹಾಲು 47 ರೂಪಾಯಿ ಇದ್ದಿದ್ದು 56 ಆಗಲಿದೆ. ಇಲ್ಲಿ 9 ಏರಿಕೆ. ಹೋಮೋಜಿನೈಜ್ಡ್‌ ಹಸುವಿನ ಹಾಲು ಸದ್ಯ50 ರೂಪಾಯಿ ಇದ್ದು ಇಂದಿನಿಂದ 58 ರೂಪಾಯಿ ಆಗಿದೆ. ಅಂದ್ರೆ 8 ರೂಪಾಯಿ ಏರಿಕೆ. ಆದ್ರೆ ಸ್ಪೆಷಲ್ ಟೋನ್ಡ್‌ ಹಾಲು ಸದ್ಯ52 ರೂಪಾಯಿ ದರ ಇದ್ದು, ಇಂದಿನಿಂದ 64 ರೂಪಾಯಿಗೆ ಏರಿಕೆಯಾಗಿದೆ. ಅಂದ್ರೆ ಲೀಟರ್‌ಗೆ ಬರೋಬ್ಬರಿ 12 ರೂಪಾಯಿ ಹೆಚ್ಚಳವಾಗಿದೆ. ಇನ್ನು ಶುಭಂ ಹಾಲು ಕೂಡಾ 52 ಇದ್ದಿದ್ದು 64 ರೂ. ಆಗಿದ್ದು, ಇಲ್ಲೂ 12 ರೂಪಾಯಿ ಏರಿಕೆ ಕಂಡಿದೆ. ಅದ್ರಂತೆ ಹೋಮೋಜಿನೈಜ್ಡ್‌ ಶುಭಂ ಹಾಲು 53 ಇದ್ದಿದ್ದು 65 ಆಗಲಿದ್ದು, ಅದು ಕೂಡಾ 12 ಹೆಚ್ಚಳವಾಗಿದೆ.

ಇದೇ ದರ ಏರಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಸರ್ಕಾರ ಏನೇ ಸಮರ್ಥನೆ ಕೊಟ್ಟರೂ ಬರಗಾಲ ಹಾಗೂ ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದಿರೋ ಜನಸಾಮಾನ್ಯನಿಗೆ ಮಾತ್ರ ಈ ಹಾಲು-ಮೊಸರಿನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language