Hashtagintro

ಕಿತ್ತಳೆ ಸಿಪ್ಪೆಯ ಸಾಬೂನು; ಈ ಕೆಮಿಕಲ್‌ ಫ್ರೀ ಸೋಪ್ ತಯಾರಿಸೋದು ಬಲು ಸುಲಭ

ಕಿತ್ತಳೆ ಸಿಪ್ಪೆಯ ಸಾಬೂನು; ಈ ಕೆಮಿಕಲ್‌ ಫ್ರೀ ಸೋಪ್ ತಯಾರಿಸೋದು ಬಲು ಸುಲಭ

ಈಗಂತೂ ಮಾರುಕಟ್ಟೆಗಳಲ್ಲಿ ಕಿತ್ತಳೆ (orange) ಹೇರಳವಾಗಿ ಲಭ್ಯವಿದೆ. ವಿಟಮಿನ್‌ ಸಿಯಿಂದ ಸಮೃದ್ಧವಾಗಿರುವ ಈ ಹಣ್ಣು ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಸಖತ್‌  ಪ್ರಯೋಜನಕಾರಿ. ಅಷ್ಟೇ ಅಲ್ಲದೆ ಅದರ ಸಿಪ್ಪೆಯೂ ಅನೇಕ ಪ್ರಯೋಜನಗಳನ್ನು ಹೊಂದಿವೆ. ಹೌದು ಕಿತ್ತಳೆ ಸಿಪ್ಪೆಯು ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ, ಫ್ಲೇವನಾಯ್ಡ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ಚರ್ಮದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಆದರೆ ಅನೇಕರು ಇದರಿಂದ ಯಾವುದೇ ಉಪಯೋಗವಿಲ್ಲವೆಂದು ಕಿತ್ತಳೆ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಹೀಗೆ ಕಿತ್ತಳೆ ಸಿಪ್ಪೆಯನ್ನು ಎಸೆಯುವ ಬದಲು ಅದರಿಂದ ಹೋಮ್‌ಮೇಡ್‌ ಸೋಪ್‌ ತಯಾರಿಸಬಹುದು. ಕೇವಲ ಮೂರೇ ಮೂರು ವಸ್ತುಗಳಿಂದ ಇದನ್ನು ಬಲು ಸುಲಭವಾಗಿ ತಯಾರಿಸಬಹುದು. ಅದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ.

ಕಿತ್ತಳೆ ಸಿಪ್ಪೆಯಿಂದ ತಯಾರಿಸಿ ಹೋಮ್‌ಮೇಡ್‌ ಸೋಪ್:‌

ತ್ವಚೆಯ ಕಾಂತಿಯನ್ನು ರಾಸಾಯನಿಕಯುಕ್ತ ಸೋಪ್‌ಗಳನ್ನು ಬಳಕೆ ಮಾಡುವ ಬದಲು ಕಿತ್ತಳೆ ಸಿಪ್ಪೆಯ ಹೋಮ್‌ಮೇಡ್‌ ಸೋಪ್‌ ತಯಾರಿಸಿ. ಇದನ್ನು ತಯಾರಿಸೋದು ಬಲು ಸುಲಭ, ಅಷ್ಟೇ ಅಲ್ಲದೆ ಇದಕ್ಕೆ ಹೆಚ್ಚೇನು ಖರ್ಚಿಲ್ಲ. ಕೇವಲ ಮೂರೇ ಮೂರು ಪದಾರ್ಥಗಳನ್ನು ಬಳಸಿ ಈ ಹೋಮ್‌ಮೇಡ್‌ ಸೋಪ್‌ ಅನ್ನು ತಯಾರಿಸಬಹುದು. ಈ ಕುರಿತ ವಿಡಿಯೋವನ್ನು lets_benatural ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:‌

 

View this post on Instagram

 

A post shared by Ashu Creativity (@lets_benatural)

ಸೋಪ್‌ ತಯಾರಿಸಲು ಬೇಕಾಗಿರುವ ಸಾಮಾಗ್ರಿ:

  • ಕಿತ್ತಳೆ ಸಿಪ್ಪೆ
  • ಸೋಪ್‌ ಬೇಸ್‌
  • ಸಿಲಿಕಾನ್‌ ಮೋಲ್ಡ್

ಇದನ್ನೂ ಓದಿ:  ಈ ಬಾರಿಯ ದೀಪಾವಳಿಗೆ ತಯಾರಿಸಿ ಮೈಸೂರ್‌ ಪಾಕ್‌ ರುಚಿ ನೀಡೋ ಸ್ಪೆಷಲ್‌ ಕ್ಯಾರೆಟ್‌ ಪಾಯಸ

ಕಿತ್ತಳೆ ಸಿಪ್ಪೆಯ ಸೋಪ್ ತಯಾರಿಸುವುದು ಹೇಗೆ?

  • ಮೊದಲು ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಅದರ ಮೇಲಿರುವ ಕೊಳೆಯನ್ನು ತೆಗೆದುಹಾಕಿ. ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
  • ಈಗ ಈ ಸಿಪ್ಪೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ ಸ್ವಲ್ಪ ನೀರು ಅಥವಾ ರೋಸ್‌ ವಾಟರ್ ಸೇರಿಸಿ ನುಣ್ಣಗೆ ಪೇಸ್ಟ್‌ ಮಾಡಿ.
  • ಪೇಸ್ಟ್‌ ಮಾಡಿದ ಈ ಮಿಶ್ರಣವನ್ನು ಉತ್ತಮವಾದ ಜರಡಿ ಅಥವಾ ಸ್ವಚ್ಛವಾದ ಹತ್ತಿ ಬಟ್ಟೆಯ ಮೂಲಕ ಸೋಸಿ ಇಟ್ಟುಕೊಳ್ಳಿ.
  • ಇದಾದ ಬಳಿಕ ಸೋಪ್ ಬೇಸ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಅದನ್ನು ಡಬಲ್‌ ಬಾಯ್ಲರ್‌ ವಿಧಾನದಲ್ಲಿ ಮಧ್ಯಮ ಉರಿಯಲ್ಲಿ ಕರಗಿಸಿ.
  • ಸೋಪ್‌ ಬೇಸ್ ಸಂಪೂರ್ಣವಾಗಿ ಕರಗಿದ ನಂತರ, ಅದಕ್ಕೆ ತಯಾರಿಸಿದ ಕಿತ್ತಳೆ ಸಿಪ್ಪೆಯ ಪೇಸ್ಟ್‌ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬೇಕಾದ್ರೆ ಇದಕ್ಕೆ ನೀವು ವಿಟಮಿನ್‌ ಇ ಕ್ಯಾಪ್ಸುಲ್‌ ಕೂಡಾ ಸೇರಿಸಬಹುದು.
  • ತಯಾರಾದ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಸುಮಾರು 12 ರಿಂದ 13 ನಿಮಿಷಗಳ ಕಾಲ ನಿರಂತರವಾಗಿ ಬೆರೆಸಿ ಯಾವುದೇ ಗಂಟು ಕಟ್ಟಿಕೊಳ್ಳದ ರೀತಿಯಲ್ಲಿ ಬೇಯಿಸಿಕೊಳ್ಳಿ.
  • ಈಗ ತಯಾರಾದ ಮಿಶ್ರಣವನ್ನು ಸಿಲಿಕನ್‌ ಮೋಲ್ಡ್‌ಗೆ ಹಾಕಿ ಕೋಣೆಯ ಉಷ್ಣಾಂಶದಲ್ಲಿ ಸುಮಾರು 30 ನಿಮಿಷಗಳ ಕಾಲ ಹೊಂದಿಸಲು ಬಿಡಿ. ನೀವು ಇದನ್ನು ಫ್ರೀಜರ್‌ನಲ್ಲೂ ಇಡಬಹುದು.
  • ಅದು ಗಟ್ಟಿಯಾದ ನಂತರ, ಮೋಲ್ಡ್‌ನಿಂದ ತೆಗೆದರೆ ಹೋಮ್‌ಮೇಡ್‌ ಸೋಪ್‌ ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Lifestyle

Read full article on TV9 Kannada Lifestyle

Leave a Comment

Your email address will not be published. Required fields are marked *

समाचार की भाषा चुनें / Choose News Language