
ಮನೆಯಲ್ಲಿ ಯಾರಾದ್ರೂ ಮೃತ ಪಟ್ಟರೆ ಆ ದುಃಖದಲ್ಲೇ ನಾವೆಲ್ಲಾ ಮುಳುಗಿ ಹೋಗುತ್ತೇವೆ. ಆದರೆ ಭಾವನಾತ್ಮಕ ಸನ್ನಿವೇಶದಲ್ಲಿ ಕೆಲವು ಕಾನೂನು ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಬಹಳ ಮುಖ್ಯ. ಇಲ್ಲದಿದ್ರೆ ಇದುವೇ ನಿಮಗೆ ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ಹೌದು, ಮೃತ ವ್ಯಕ್ತಿಯ ಪ್ರಮುಖ ದಾಖಲೆಗಳನ್ನು (documents) ನಿಷ್ಕ್ರಿಯಗೊಳಿಸುವುದು ಹಾಗೂ ಹಣಕಾಸಿನ ವ್ಯವಹಾರಗಳನ್ನು ಪೂರ್ಣಗೊಳಿಸಬೇಕು. ಹಾಗಾದ್ರೆ ಏನೆಲ್ಲಾ ಆರ್ಥಿಕ ಹಾಗೂ ಕಾನೂನು ವ್ಯವಹಾರಗಳನ್ನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.
ಮೃತ ಪಟ್ಟ ವ್ಯಕ್ತಿಯ ಕುಟುಂಬಸ್ಥರು ಈ ಆರ್ಥಿಕ ಕೆಲ್ಸಗಳನ್ನು ಮೊದ್ಲು ಮಾಡಿ
- ಮೃತರ ಹೆಸರಿನಲ್ಲಿ ಸಾಲ ಪ್ರಮಾಣ ಪತ್ರ ಪಡೆಯಬೇಕು. ಮೃತರ ಹೆಸರಿನಲ್ಲಿ ಹೂಡಿಕೆಗಳು, ಆಸ್ತಿಗಳು ಮತ್ತು ವಿಮಾ ಹಣವನ್ನು ಪಡೆಯಲು ಈ ಪ್ರಮಾಣಪತ್ರ ಅಗತ್ಯವಾಗಿ ಬೇಕು.
- ಮರಣ ಹೊಂದಿದ ವ್ಯಕ್ತಿಯ ವಿಮಾ ಪಾಲಿಸಿಗಳು ಇದ್ದರೆ ಅವುಗಳನ್ನು ಮರೆಯದೇ ಪಡೆದುಕೊಳ್ಳಿ.
- ಮೃತ ಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆಗಳು ಮತ್ತು ಪಿಪಿಫ್ ನಂತಹ ಯೋಜನೆಗಳಿಗೆ ಸೂಕ್ತ ದಾಖಲೆ ಸಲ್ಲಿಸಿ ಹಣ ಪಡೆದುಕೊಳ್ಳಿ.
- ಕುಟುಂಬಸ್ಥರು ಮೃತರು ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವುದನ್ನು ಮರೆಯದಿರಿ.
- ಮರಣ ಹೊಂದಿದ ಆಧಾರ್ ಕಾರ್ಡ್ ಅನ್ನು ತಕ್ಷಣವೇ ನಿಷ್ಕ್ರಿಯಗೊಳಿಸಿ.
- ಮೃತ ವ್ಯಕ್ತಿಯ ಹೆಸರಿನಲ್ಲಿರುವ ಇಮೇಲ್ ಹಾಗೂ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನು ಡಿಲೀಟ್ ಮಾಡಿ.
- ಮೃತ ಪಟ್ಟ ವ್ಯಕ್ತಿ ತನ್ನ ಆಸ್ತಿಗಳ ಕುರಿತು ಯಾವುದೇ ವಿಲ್ ಮಾಡಿದ್ದರೆ, ಅದಕ್ಕೆ ಅನುಗುಣವಾಗಿ ಮಕ್ಕಳು ಹಂಚಿಕೆ ಮಾಡಿಕೊಳ್ಳಿ.
- ಮೃತ ವ್ಯಕ್ತಿಯ ಹೆಸರಿನಲ್ಲಿ ಬ್ಯಾಂಕ್ ಸಾಲಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಇಎಂಐಗಳು ಹಾಗೂ ಅಡಮಾನ ಸಾಲಗಳು ಇದ್ದರೆ ಪಾವತಿಸಿ.
- ದುರುಪಯೋಗ ಪಡಿಸುವುದನ್ನು ತಡೆಯಲು ಮೃತರ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿ ರದ್ದುಗೊಳಿಸಿ.
ಇದನ್ನೂ ಓದಿ: ಗೂಗಲ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿ, ಫೋನ್ ನಂಬರ್ ತೆಗೆದುಹಾಕುವುದು ಹೇಗೆ?
- ಮರಣ ಹೊಂದಿದ ವ್ಯಕ್ತಿಯ ಮತದಾರರ ಗುರುತಿನ ಚೀಟಿ ಹಾಗೂ ಪಾಸ್‌ಪೋರ್ಟ್‌ನಂತಹ ದಾಖಲೆಗಳ ರದ್ದುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿ ನಿಷ್ಕ್ರಿಯಗೊಳಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Business
