
ಬಿಗ್ ಬಾಸ್ ಕನ್ನಡದ ಮನೆಯಲ್ಲಿ ಸ್ಪರ್ಧಿಗಳ ನಡುವಿನ ವಾಗ್ವಾದ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇತ್ತೀಚಿನ ಸಂಚಿಕೆಯಲ್ಲಿ ಸೌಂದರ್ಯಾ ಹಾಗೂ ಕುಮಾರಿ ನಡುವೆ ಭಾರಿ ಮಾತಿನ ಚಕಮಕಿ ನಡೆದಿದೆ. ಬಿಗ್ ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ಸೌಂದರ್ಯಾ ಅವರು ಕುಮಾರಿ ಅವರಿಗೆ ‘#ವೇಸ್ಟ್ ಪೀಸ್’ ಎಂಬ ಟ್ಯಾಗ್ ನೀಡಿ, ‘ಕುಮಾರಿ ಅವರ ಕೊಡುಗೆ ಈ ಮನೆಗೆ ಕಮ್ಮಿ ಇದೆ’ ಎಂದು ಕಾರಣ ಕೊಟ್ಟಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಕುಮಾರಿ, ಸೌಂದರ್ಯಾ ವಿರುದ್ಧ ಜೋರಾಗಿ ಧ್ವನಿ ಎತ್ತಿ ಪ್ರತ್ಯುತ್ತರ ನೀಡಿದ್ದಾರೆ. ಮಾತಿನ ಸಮರದಲ್ಲಿ ಸೌಂದರ್ಯಾ ‘ನೀನೇ ವೇಸ್ಟ್ ಪೀಸ್, ನಿನಗೆ ನಾನು ಈ ಮನೆಯಲ್ಲಿ ಚಾನ್ಸ್ ಕೊಟ್ಟಿದ್ದೇನೆ’ ಎಂದು ಹೇಳಿದರು. ಇಬ್ಬರೂ ಪರಸ್ಪರ ಸವಾಲು ಹಾಕಿಕೊಳ್ಳುತ್ತಾ ಮನೆಯಲ್ಲಿದ್ದ ಇತರ ಸ್ಪರ್ಧಿಗಳ ಎದುರಲ್ಲೇ ಜಗಳವಾಡಿರುವುದು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
