Hashtagintro

ಕೇಂದ್ರದ ಆಹಾರ ಸುರಕ್ಷತಾ ಸಂಸ್ಥೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ; ತಪಾಸಣೆ, ಪರವಾನಗಿ ಅಧಿಕಾರ ಮರಳಿಸುವಂತೆ ಒತ್ತಾಯ

ಕೇಂದ್ರದ ಆಹಾರ ಸುರಕ್ಷತಾ ಸಂಸ್ಥೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ; ತಪಾಸಣೆ, ಪರವಾನಗಿ ಅಧಿಕಾರ ಮರಳಿಸುವಂತೆ ಒತ್ತಾಯ

ನವದೆಹಲಿ, ಅಕ್ಟೋಬರ್ 25: ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ನಿಯಮಗಳ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು ಹೈಕೋರ್ಟ್‌ ಮೆಟ್ಟಿಲೇರಿದೆ. ರಾಜ್ಯಗಳ ಅಧಿಕಾರವನ್ನು ಕೇಂದ್ರ ಸಂಸ್ಥೆಯು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿರುವ ಮಹಾರಾಷ್ಟ್ರ ಸರ್ಕಾರ, ಆಹಾರ ಘಟಕಗಳ ತಪಾಸಣೆ ಮತ್ತು ಪರವಾನಗಿ ನೀಡುವ ಅಧಿಕಾರವನ್ನು ತನಗೆ ಮರಳಿ ನೀಡುವಂತೆ ಮನವಿ ಮಾಡಿದೆ.

ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಕಮಿಷನರ್ ತುಕಾರಾಮ್ ಮುಂಧೆ ಅವರ ನೇತೃತ್ವದ ಇಲಾಖೆಯು ಈ ಅರ್ಜಿಯನ್ನು ಸಲ್ಲಿಸಿದೆ.

2023ರ ಎಫ್‌ಎಸ್‌ಎಸ್‌ಎಐ ಆದೇಶದ ಬಗ್ಗೆ ಅಸಮಾಧಾನ

2023ರ ಮೇ ತಿಂಗಳಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದ ಆದೇಶವೊಂದರ ಪ್ರಕಾರ, ಕೇಂದ್ರ ಮಟ್ಟದ ಪರವಾನಗಿ ಹೊಂದಿರುವ ಬೃಹತ್ ಆಹಾರ ಉದ್ಯಮಗಳು ಹಾಗೂ ಬ್ರ್ಯಾಂಡ್‌ಗಳ ತಪಾಸಣೆ ನಡೆಸದಂತೆ ರಾಜ್ಯ ಆಹಾರ ಭದ್ರತಾ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಇದರೊಂದಿಗೆ ‘FoSCoS’ (Food Safety Compliance System) ವೆಬ್‌ಸೈಟ್ ಮೂಲಕವೇ ಎಲ್ಲವನ್ನೂ ಕೇಂದ್ರೀಕರಿಸಲಾಗಿತ್ತು. ಇದನ್ನು ಮಹಾರಾಷ್ಟ್ರ ಸರ್ಕಾರ ತೀವ್ರವಾಗಿ ಆಕ್ಷೇಪಿಸಿದೆ.

ಇದನ್ನೂ ಓದಿ: ವಾರಣಾಸಿಯಲ್ಲಿ ವಾಯುಪಡೆಯಿಂದ ರೋಚಕ ಏರೋಶೋ; ಪ್ರಧಾನಿ ಮೋದಿ ವೀಕ್ಷಣೆ; ಪ್ರಧಾನಿಗೆ ಸ್ವಕ್ಷೇತ್ರದಲ್ಲಿ ಭವ್ಯ ಸ್ವಾಗತ

ಅಕ್ರಮವಾದ ಪರ್ಯಾಯ ವ್ಯವಸ್ಥೆ: ಮಹಾರಾಷ್ಟ್ರ ಆಕ್ರೋಶ

ಎಫ್‌ಎಸ್‌ಎಸ್‌ಎಐ ತನ್ನದೇ ಆದ ‘ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿಗಳನ್ನು’ (Central Food Safety Officers) ನೇಮಕ ಮಾಡುವ ಮೂಲಕ ಅಕ್ರಮ ಸಮಾಂತರ ವ್ಯವಸ್ಥೆಯನ್ನು (Illegal parallel system) ಹುಟ್ಟುಹಾಕಿದೆ ಹಾಗೂ 2006ರ ಕಾಯ್ದೆಯಡಿ ರಾಜ್ಯ ಕಮಿಷನರ್‌ಗಳಿಗಿದ್ದ ತಪಾಸಣೆ ಮತ್ತು ಜಾರಿಗೊಳಿಸುವ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಮಹಾರಾಷ್ಟ್ರ ಸರ್ಕಾರ ಅರ್ಜಿಯಲ್ಲಿ ವಾದಿಸಿದೆ.

ಮಹಾರಾಷ್ಟ್ರ ಸರ್ಕಾರದ ಪ್ರಮುಖ ಬೇಡಿಕೆಗಳು

  • ಕೇಂದ್ರ ಸರ್ಕಾರಿ ಪರವಾನಗಿ ಪಡೆದ ಕಂಪನಿಗಳ ಮೇಲಿನ ತಪಾಸಣಾ ನಿಷೇಧವನ್ನು ತಕ್ಷಣವೇ ರದ್ದುಗೊಳಿಸಬೇಕು.
  • ಆಹಾರ ಉದ್ಯಮಗಳ ಪರವಾನಗಿ ದತ್ತಾಂಶವನ್ನು (Licensing Database) ಮರಳಿ ರಾಜ್ಯದ ಆಡಳಿತಾತ್ಮಕ ನಿಯಂತ್ರಣಕ್ಕೆ ನೀಡಬೇಕು.
  • ಸಾರ್ವಜನಿಕ ಸಮಾಲೋಚನೆ ಇಲ್ಲದೆ ಈ ವರ್ಷದ ಮಾರ್ಚ್‌ನಲ್ಲಿ ವಹಿವಾಟು ಮಿತಿಯನ್ನು (Turnover limits) ಹೆಚ್ಚಿಸಿ ಹೊರಡಿಸಲಾದ ಅಧಿಸೂಚನೆಯನ್ನು ವಜಾಗೊಳಿಸಬೇಕು.

ಇದನ್ನೂ ಓದಿ: ಆಂಧ್ರ, ಒಡಿಶಾದಲ್ಲಿ ಅ. 28ಕ್ಕೆ ಚಂಡಮಾರುತ ಅಬ್ಬರ; ಕರ್ನಾಟಕದಲ್ಲೂ ಬಿರುಗಾಳಿ ಸಹಿತ ಮಳೆಯ ಅಲರ್ಟ್

ಮುಖ್ಯ ನ್ಯಾಯಾಧೀಶ ಮಹೇಶ್ ಸಿ. ತ್ರಿಪಾಠಿ ಮತ್ತು ನ್ಯಾ| ಅದ್ವೈತ್ ಸೇತ್ನಾ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲಿದೆ. ರಾಜ್ಯಗಳು ಮತ್ತು ಕೇಂದ್ರದ ನಡುವಿನ ಅಧಿಕಾರ ಹಂಚಿಕೆ ಹಾಗೂ ಸಾರ್ವಜನಿಕ ಆಹಾರ ಭದ್ರತೆಯ ಹಿತದೃಷ್ಟಿಯಿಂದ ಈ ಪ್ರಕರಣವು ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language