Hashtagintro

ಕ್ರೆಡಿಟ್ ಕಾರ್ಡ್ ಸಾಲ ಬೇಗನೇ ಕ್ಲಿಯರ್ ಮಾಡ್ಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್

ಕ್ರೆಡಿಟ್ ಕಾರ್ಡ್ ಸಾಲ ಬೇಗನೇ ಕ್ಲಿಯರ್ ಮಾಡ್ಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್

ಇತ್ತೀಚೆಗಿನ ದಿನಗಳಲ್ಲಿ ಉದ್ಯಮಿಗಳು ಮಾತ್ರವಲ್ಲ ಜನ ಸಾಮಾನ್ಯರು ಕ್ರೆಡಿಟ್ ಕಾರ್ಡ್ ಗಳನ್ನು (credit cards) ಬಳಸುತ್ತಿದ್ದಾರೆ. ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ತ್ವರಿತ ಸಾಲವನ್ನು ನೀಡುತ್ತದೆ. ಆದರೆ ಈ ಸಾಲದ ಮೊತ್ತವನ್ನು ನಿಮ್ಮ ಅನುಕೂಲಕ್ಕೆ ತಕ್ಕ ಅವಧಿಯಲ್ಲಿ ಮಾಸಿಕ ಕಂತುಗಳ ಮೂಲಕ ಪಾವತಿಸಬಹುದು. ಒಂದು ವೇಳೆ ಬಿಲ್‌ ಪಾವತಿಸದೇ ಹೋದಲ್ಲಿ ಸಾಲವು ಬೆಳೆದು ನಿಮ್ಮ ಕುತ್ತಿಗೆಗೆ ಉರುಳಾಗಬಹುದು. ಒಂದು ವೇಳೆ ನೀವು ಕೂಡ ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು ಒದ್ದಾಡುತ್ತಿದ್ರೆ ಈ ಸಲಹೆ ಪಾಲಿಸಿ ಬಹುಬೇಗನೆ ಸಾಲ ಕ್ಲಿಯರ್ ಮಾಡಿ.

ಕ್ರೆಡಿಟ್ ಕಾರ್ಡ್ ಸಾಲದಿಂದ ಹೊರಬರುವುದು ಹೇಗೆ?

ಕಾರ್ಡ್ ಬಳಕೆಯನ್ನು ನಿಲ್ಲಿಸಿ: ಕ್ರೆಡಿಟ್ ಕಾರ್ಡ್ ಸಾಲ ಸಂಪೂರ್ಣವಾಗಿ ತೀರುವವರೆಗೆ ದೈನಂದಿನ ಖರ್ಚುಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವುದನ್ನು ನಿಲ್ಲಿಸಿ. ನಗದು ಅಥವಾ ಯುಪಿಐ ಬಳಸಿ.

ಕನಿಷ್ಠ ಮೊತ್ತ ಮಾತ್ರ ಪಾವತಿಸಬೇಡಿ: ಹೆಚ್ಚಿನವರು ಕನಿಷ್ಠ ಮೊತ್ತ ಮಾತ್ರ ಪಾವತಿಸುತ್ತಾರೆ. ಈ ಹಣವು ಕೇವಲ ಬಡ್ಡಿಗೆ ಮಾತ್ರ ಸರಿಯಾಗುತ್ತದೆ. ನೀವು ಪ್ರತಿ ತಿಂಗಳು ಕನಿಷ್ಠ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಿ. ಇದರಿಂದ ಬೇಗನೇ ಸಾಲವನ್ನು ತೀರಿಸಬಹುದು.

ಹೆಚ್ಚು ಬಡ್ಡಿದರ ಇರುವುದನ್ನು ಮೊದಲು ಪಾವತಿಸಿ: ನಿಮ್ಮ ಬಳಿಯಿರುವ ಕಾರ್ಡ್‌ಗಳಲ್ಲಿ ಯಾವ ಕಾರ್ಡ್‌ಗೆ ಅತಿ ಹೆಚ್ಚು ಬಡ್ಡಿದರ ಇದೆಯೋ ಅದನ್ನು ಮೊದಲು ತೀರಿಸಿ.
ಉಳಿದ ಕಾರ್ಡ್‌ಗಳಿಗೆ ಕನಿಷ್ಠ ಮೊತ್ತವನ್ನು ಪಾವತಿಸಿ.

ಸ್ವಯಂಚಾಲಿತ ವಿಧಾನ ಆಯ್ಕೆ ಮಾಡಿ: ಸ್ವಯಂಚಾಲಿತ ವಿಧಾನವನ್ನು ಹೊಂದಿಸಿಕೊಳ್ಳಿ. ಹೀಗೆ ಮಾಡಿದ್ರೆ ನಿಗದಿತ ದಿನಾಂಕದಂದು ಕನಿಷ್ಠ ಮೊತ್ತವಾದರೂ ಕಡಿತಗೊಳ್ಳುತ್ತದೆ. ಬ್ಯಾಂಕ್ ಇದರಿಂದ ವಿಳಂಬ ಶುಲ್ಕ ವಿಧಿಸುವುದನ್ನು ತಪ್ಪಿಸಬಹುದು.

ಇದನ್ನೂ ಓದಿ: ಶ್ರೀಮಂತ ದೇಶಗಳ ವಿಪರೀತ ಸಾಲ, ಬಡ ರಾಷ್ಟ್ರಗಳ ಕುತ್ತಿಗೆ ಬಿಗಿ; ಬಡ್ಡಿ ಕಟ್ಟಲೇ ಹೆಚ್ಚಿನ ಹಣ ವ್ಯಯಿಸುತ್ತಿರುವ ಅಭಿವೃದ್ಧಿಶೀಲ ದೇಶಗಳು

ಸಾಲಗಳ ಪಟ್ಟಿ ಮಾಡಿ: ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳನ್ನು ಬಳಸುತ್ತಿದ್ದರೆ, ಈ ಕಾರ್ಡ್‌ನ ಬಾಕಿ ಮೊತ್ತ, ಬಡ್ಡಿ ದರ ಮತ್ತು ಪಾವತಿ ದಿನಾಂಕವನ್ನು ಬರೆದಿಟ್ಟುಕೊಳ್ಳಿ. ಇದು ಕ್ರೆಡಿಟ್ ಕಾರ್ಡ್ ಸಾಲ ಎಷ್ಟಿವೆ ಎನ್ನುವ ಸ್ಪಷ್ಟ ಚಿತ್ರಣ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language