Hashtagintro

ಗೃಹಲಕ್ಷ್ಮಿಯರೇ ಎಚ್ಚರ….: ಒಟಿಪಿ, ಬ್ಯಾಂಕ್‌ ವಿವರ ಕೇಳಿದ್ರೆ ನೀಡಬೇಡಿ; ಇಲ್ಲಿದೆ ಸರ್ಕಾರ ಮಹತ್ವದ ಸೂಚನೆ

ಗೃಹಲಕ್ಷ್ಮಿಯರೇ ಎಚ್ಚರ….: ಒಟಿಪಿ, ಬ್ಯಾಂಕ್‌ ವಿವರ ಕೇಳಿದ್ರೆ ನೀಡಬೇಡಿ; ಇಲ್ಲಿದೆ ಸರ್ಕಾರ ಮಹತ್ವದ ಸೂಚನೆ

ಮಂಗಳೂರು, ನ.2: ಈಗಾಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಗೃಹಜ್ಯೋತಿ ಸರ್ವೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ಬೆಂಗಳೂರಿನ ಸಮೀಕ್ಷೆ ಪೂರ್ಣಗೊಂಡಿದೆ. ಆದರೆ ಗೃಹಲಕ್ಷ್ಮೀ ಯೋಜನೆಯ ಸಮೀಕ್ಷೆ ಶುರು ಮಾಡಿಲ್ಲ. ಆದರೆ  ಕಾಂಗ್ರೆಸ್​​​ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯ ಮರು-ಪರಿಶೀಲನೆ (Re-verification) ಹಾಗೂ ಸರ್ವೇ ಹೆಸರು ಹೇಳಿಕೊಂಡು ಫಲಾನುಭವಿಗಳಿಂದ ಒಟಿಪಿ (OTP) ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪಡೆಯುತ್ತಿರುವ ನಕಲಿ ಜಾಲದ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತೀವ್ರ ಎಚ್ಚರಿಕೆ ನೀಡಿದೆ. ಕೆಲವು ಪ್ರದೇಶಗಳಲ್ಲಿ ಅನಧಿಕೃತ ವ್ಯಕ್ತಿಗಳು ಗೃಹಲಕ್ಷ್ಮಿ ಯೋಜನೆಯ ಸರ್ವೇ ನೆಪದಲ್ಲಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕ ರಹಸ್ಯ ಮಾಹಿತಿ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಲಾಖೆಯ ಉಪನಿರ್ದೇಶಕರು ಸಾರ್ವಜನಿಕರಿಗೆ ಜಾಗೃತರಾಗಿರಲು ಸೂಚಿಸಿದ್ದಾರೆ.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಕೃತ ಸ್ಪಷ್ಟನೆಯನ್ನು ನೀಡಿದೆ. ಇಲಾಖೆಯು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಮರು-ಪರಿಶೀಲನೆ ಅಥವಾ ಸರ್ವೇ ಕಾರ್ಯವನ್ನು ಸದ್ಯಕ್ಕೆ ಇನ್ನೂ ಪ್ರಾರಂಭಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ಕಾರದ ಆದೇಶದಂತೆ ಅಧಿಕೃತ ಮರು-ಪರಿಶೀಲನೆ ಆರಂಭವಾದಾಗ ಫಲಾನುಭವಿಯ ಗುರುತನ್ನು ದೃಢೀಕರಿಸಲು ಅವರ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಮೂಲಕ ಅಥೆಂಟಿಕೇಶನ್ ಮಾಡುವುದು ಅಗತ್ಯವಾಗಿರುತ್ತದೆ.

ಇದನ್ನೂ ಓದಿ: ಕೊನೆಗೂ ಮುಕ್ತಾಯಗೊಂಡ ಗೃಹ ಜ್ಯೋತಿ ಮರುಪರಿಶೀಲನೆ: 1.42 ಲಕ್ಷ ಫಲಾನುಭವಿಗಳಿಗೆ ಶಾಕ್

ಪ್ರಸ್ತುತ ಇಲಾಖೆಯಿಂದ ಯಾವುದೇ ಸರ್ವೇ ಆರಂಭವಾಗದಿರುವುದರಿಂದ, ಯೋಜನೆ ಹೆಸರಿನಲ್ಲಿ ಬರುವ ಅನಧಿಕೃತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಒಟಿಪಿ (OTP), ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಇತರ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ ಎಂದು ಸೂಚಿಸಲಾಗಿದೆ. ಅಧಿಕೃತ ಮರು-ಪರಿಶೀಲನೆ ಪ್ರಕ್ರಿಯೆಯ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದ ನಂತರವಷ್ಟೇ ಇಲಾಖೆಯು ಮಾಹಿತಿ ನೀಡಲಿದ್ದು, ಅಲ್ಲಿಯವರೆಗೆ ಸಾರ್ವಜನಿಕರು ಇಂತಹ ವಂಚಕರ ಕರೆ ಹಾಗೂ ಭೇಟಿಗಳಿಗೆ ಸ್ಪಂದಿಸದಂತೆ ಮನವಿ ಮಾಡಿದೆ. ಈಗಾಲೇ ಇಂತಹ ಹಲವು ಘಟನೆಗಳು ನಡೆದಿದೆ. ಯಾವುದೇ ಕಾರಣಕ್ಕೂ ಇಂತಹ ಜಾಲದಲ್ಲಿ ಮಹಿಳೆಯರು ಬೀಳಬಾರದು. ಎಚ್ಚರಿಕೆಯಿಂದ ಇರುವಂತೆ ಇಲಾಖೆ ಮನವಿಯನ್ನು ಮಾಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language