Hashtagintro

ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ? ಈಗ ಬಂಗಾರದ ಮೇಲೆ ಹೂಡಿಕೆ ಮಾಡಬಹುದಾ? ಇಲ್ಲಿದೆ ತಜ್ಞರ ಅಭಿಪ್ರಾಯ

ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ? ಈಗ ಬಂಗಾರದ ಮೇಲೆ ಹೂಡಿಕೆ ಮಾಡಬಹುದಾ? ಇಲ್ಲಿದೆ ತಜ್ಞರ ಅಭಿಪ್ರಾಯ

ಬೆಂಗಳೂರು, ನವೆಂಬರ್ 23: ಈ ವರ್ಷದ ಆರಂಭದಲ್ಲಿ ಸಾರ್ವಕಾಲಿಕ ದಾಖಲೆ ಬರೆದು ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇದೀಗ ಊಹೆಗೂ ಮೀರಿ ಪಾತಾಳಕ್ಕೆ ಕುಸಿದಿವೆ. ನವೆಂಬರ್ ಮಧ್ಯದಿಂದ ಚಿನ್ನದ ಬೆಲೆ ಸತತ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಆಭರಣ ಖರೀದಿಗೆ ಎದುರು ನೋಡುತ್ತಿರುವವರಿಗೆ ಕೊಂಚ ಸಮಾಧಾನ ತಂದಿದೆ. ಅಲ್ಲದೇ ಚಿನ್ನದ ದರ ಇಳಿಕೆಯಾಗುತ್ತಿದ್ದಂತೆಯೇ ಆಭರಣ ಪ್ರಿಯರು ಜ್ಯುವೆಲ್ಲರಿ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವಾಗ ಚಿನ್ನ ಬೆಳ್ಳಿ ದರ ಇಳಿಕೆಯಾಗುತ್ತೋ ನಮ್ಮ ಭಾರತದಲ್ಲೂ ಸಹ ಇಳಿಕೆಯಾಗುತ್ತೆ. ಇನ್ನು ಏಕಾಏಕಿ ಇಷ್ಟೊಂದು ಪ್ರಮಾನದಲ್ಲಿ ಚಿನ್ನದ ದರ ಏಕೆ ಇಳಿಕೆಯಾಗಿದೆ ಅಂದರೆ ಪ್ರಮುಖವಾಗಿ ಬಡ್ಡಿ ದರ ಏರಿಕೆ. ಹೌದು…ಅಮೆರಿಕಾದ ಫೆಡರಲ್ ರಿಸರ್ವ್, ಸತತವಾಗಿ ಬಡ್ಡಿ ದರ ಏರಿಕೆ ಮಾಡುತ್ತಲೇ ಇದೆ. ಹೀಗಾಗಿ ಭಾರೀ ಪ್ರಮಾಣದಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಹಾಗಾದ್ರೆ, ಮುಂದಿನ ದಿನಗಳಲ್ಲೂ ಸಹ ಬಂಗಾರದ ದರ ಕಡಿಮೆಯಾಗುತ್ತಾ? ಇಲ್ವಾ? ಇನ್ನು ಈಗ ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಹೇಗೆ? ಎನ್ನುವ ಬಗ್ಗೆ ಹೂಡಿಕೆ ತಜ್ಞ ಸಿ.ಎ.ರುದ್ರಮೂರ್ತಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language