Hashtagintro

ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ ಡಿಕೆ ಶಿವಕುಮಾರ್

ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ನವೆಂಬರ್​​ 18: ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಿ, ಜನರ ದೈನಂದಿನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಬುಧವಾರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜಕ್ಕೂರು ರೈಲ್ವೆ ಮೇಲ್ಸೇತುವೆಯನ್ನು ಸಿಎಂ ಡಿಕೆ ಶಿವಕುಮಾರ್​ ಲೋಕಾರ್ಪಣೆಗೊಳಿಸಿದ್ದಾರೆ. ಆ ಮೂಲಕ ಸುಮಾರು 15 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಯೂ ಕೊನೆಗೂ ಪೂರ್ಣಗೊಂಡಿದೆ. 26.16 ಕೋಟಿ ರೂ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ 443 ಮೀಟರ್ ಉದ್ದದ ನಾಲ್ಕು ಪಥಗಳ ಈ ಮೇಲ್ಸೇತುವೆಯು ಜಕ್ಕೂರು–ಯಲಹಂಕ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. ಇದರಿಂದ ಉತ್ತರ ಬೆಂಗಳೂರಿನ ಸಂಪರ್ಕ ಸುಲಭವಾಗಲಿದ್ದು, ಪ್ರಯಾಣದ ದೂರ ಮತ್ತು ಸಮಯ ಉಳಿತಾಯವಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language