Hashtagintro

ಜೀ ಕನ್ನಡದಲ್ಲಿ ಮೂರು ದಿನ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ಹಬ್ಬ; ಸೆಲೆಬ್ರಿಟಿಗಳ ದಂಡು ಭಾಗಿ

ಜೀ ಕನ್ನಡದಲ್ಲಿ ಮೂರು ದಿನ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ಹಬ್ಬ; ಸೆಲೆಬ್ರಿಟಿಗಳ ದಂಡು ಭಾಗಿ

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಹಬ್ಬ ಎಂದೇ ಗುರುತಿಸಿಕೊಂಡಿರುವ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್-2026’ರ ಸಂಭ್ರಮಕ್ಕೆ ದಿನಗಣನೆ ಮುಗಿದಿದ್ದು, ಇಂದಿನಿಂದ (ಅಕ್ಟೋಬರ್ 30) ನವೆಂಬರ್ 1ರವರೆಗೆ ಒಟ್ಟು ಮೂರು ದಿನಗಳ ಕಾಲ ಪ್ರಸಾರವಾಗಲಿದೆ. ಪ್ರತಿದಿನ ಸಂಜೆ 5:30ಕ್ಕೆ ತಾರೆಯರ ವೈಭವದ ‘ರೆಡ್ ಕಾರ್ಪೆಟ್’ ದೃಶ್ಯ ಪ್ರಸಾರ ಆಗಲಿದ್ದು, ಸಂಜೆ 6:30ರಿಂದ ರಾತ್ರಿ 10:30ರವರೆಗೆ ಅವಾರ್ಡ್ಸ್ ಸಂಭ್ರಮ ಪ್ರೇಕ್ಷಕರ ಮನೆಮನ ತಲುಪಲಿದೆ.

ಕಿರುತೆರೆಯ ನೆಚ್ಚಿನ ನಟ-ನಟಿಯರು ಮತ್ತು ಬೆಳ್ಳಿ ಪರದೆಯ ಪ್ರಮುಖ ತಾರೆಗಳು ಒಂದೇ ವೇದಿಕೆಯಲ್ಲಿ ಸಮ್ಮಿಲನಗೊಳ್ಳುತ್ತಿರುವುದು ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 80ಕ್ಕೂ ಹೆಚ್ಚಿನ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದ್ದು, ನೆಚ್ಚಿನ ನಟ, ನಟಿ, ಜೋಡಿ, ಶೋ ಹಾಗೂ ನಿರೂಪಕರನ್ನು ಗೌರವಿಸಲಾಗುತ್ತದೆ. ಇದರ ಜೊತೆಗೆ ತೆರೆಮರೆಯಲ್ಲಿ ಶ್ರಮಿಸುವ ತಂತ್ರಜ್ಞರು ಹಾಗೂ ಸಮಾಜದ ಸಾಮಾನ್ಯ ಸಾಧಕರನ್ನೂ ಈ ವೇದಿಕೆಯಲ್ಲಿ ಸನ್ಮಾನಿಸಲಾಗುತ್ತಿದೆ.

ತಾರಾ ಮೆರುಗು

ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ರೋರಿಂಗ್ ಸ್ಟಾರ್ ಶ್ರೀಮುರಳಿ, ಶರಣ್, ಲವ್ಲಿ ಸ್ಟಾರ್ ಪ್ರೇಮ್, ಡಾರ್ಲಿಂಗ್ ಕೃಷ್ಣ, ಅಜಯ್ ರಾವ್, ವಿಜಯ್ ರಾಘವೇಂದ್ರ, ಅಮೂಲ್ಯ, ಆಶಿಕಾ ರಂಗನಾಥ್, ಸಂಜಿತ್ ಹೆಗಡೆ, ತಾರಾ ಅನುರಾಧಾ, ಸುಧಾರಾಣಿ, ನಿಶ್ವಿಕಾ ನಾಯ್ಡು, ಅಮೃತ ಅಯ್ಯಂಗಾರ್, ಮೇಘನಾ ರಾಜ್, ಅದಿತಿ ಪ್ರಭುದೇವ, ಸೋನಲ್ ಮೊಂತೆರೊ, ರೀಷ್ಮಾ ನಾಣಯ್ಯ, ಬೃಂದಾ ಆಚಾರ್ಯ, ಚಿಕ್ಕಣ್ಣ, ವಿಜಯ ಪ್ರಕಾಶ್, ಅರ್ಜುನ್ ಜನ್ಯ, ತರುಣ್ ಸುಧೀರ್, ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಮ್, ಪ್ರಕಾಶ್ ಬೆಳವಾಡಿ ಹಾಗೂ ಬಾಲಿವುಡ್ ನಟಿ ಖುಷ್ಬೂ ಸೇರಿದಂತೆ ಹಲವು ದಿಗ್ಗಜರು ಆಗಮಿಸಲಿದ್ದಾರೆ.

31 ಜಿಲ್ಲೆಗಳಲ್ಲಿ ಅಭಿಯಾನ:

ರಾಜ್ಯಾದ್ಯಂತ ಇರುವ ವೀಕ್ಷಕರನ್ನು ಈ ಸಂಭ್ರಮದ ನೇರ ಭಾಗವಾಗಿಸುವ ಉದ್ದೇಶದಿಂದ ಜೀ ಕನ್ನಡ ವಾಹಿನಿಯು ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲೂ ವಿಶೇಷ ‘ಕ್ಯಾಂಟರ್ ಅಭಿಯಾನ’ ನಡೆಸಿತ್ತು. ಈ ಮೂಲಕ ಲಕ್ಷಾಂತರ ವೀಕ್ಷಕರು ತಮ್ಮ ನೆಚ್ಚಿನ ನಟ-ನಟಿಯರಿಗೆ ಮತ ಚಲಾಯಿಸುವ ಅವಕಾಶ ಪಡೆದುಕೊಂಡಿದ್ದು, ವಾಹಿನಿ ಮತ್ತು ವೀಕ್ಷಕರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ.

ಪ್ರಸಿದ್ಧ ನಿರೂಪಕರಾದ ಅಕುಲ್ ಬಾಲಾಜಿ, ಅನುಶ್ರೀ, ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ಅವರು ತಮ್ಮ ವಿಶಿಷ್ಟ ಶೈಲಿಯ ನಿರೂಪಣೆ ಮತ್ತು ತಮಾಷೆಯ ಮೂಲಕ ಮೂರು ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಕಾರ್ಯಕ್ರಮದ ಕುರಿತು ಮಾತನಾಡಿದ ಜೀ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು, ‘ನಮ್ಮ ವಾಹಿನಿಗೆ ವೀಕ್ಷಕರು ನೀಡುತ್ತಿರುವ ನಿರಂತರ ಪ್ರೀತಿಯೇ ನಮ್ಮ ಬೆಳವಣಿಗೆಯ ಶಕ್ತಿ. ಇದು ಕೇವಲ ಪ್ರಶಸ್ತಿ ನೀಡುವ ಕಾರ್ಯಕ್ರಮವಲ್ಲ; ಪ್ರೇಕ್ಷಕರ ಮನೆಗೆದ್ದ ಕಲಾವಿದರು, ತಂತ್ರಜ್ಞರು ಹಾಗೂ ಅವರ ಪರಿಶ್ರಮವನ್ನು ಕೊಂಡಾಡುವ ವೇದಿಕೆ. ಈ ಬಾರಿಯೂ ಬೆಳ್ಳಿಪರದೆ ಹಾಗೂ ಕಿರುತೆರೆಯ ತಾರೆಗಳು ಒಂದಾಗಿ ಅದ್ಧೂರಿ ಮನರಂಜನೆ ನೀಡಲಿದ್ದಾರೆ’ ಎಂದು ತಿಳಿಸಿದರು.

ಇದನ್ನೂ ಓದಿ: ಕೇದಾರನಾಥಕ್ಕೆ ಭೇಟಿ ಕೊಟ್ಟ ನಟಿ ಸಾರಾ ಅಲಿ ಖಾನ್ ವಿರುದ್ಧ ಫತ್ವಾ

ಅಕ್ಟೋಬರ್ 30, 31 ಮತ್ತು ನವೆಂಬರ್ 1ರಂದು ಪ್ರತಿದಿನ ಸಂಜೆ 6:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಈ ಅದ್ಧೂರಿ ಕುಟುಂಬ ಅವಾರ್ಡ್ಸ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language