Hashtagintro

‘ಜೀ ಕನ್ನಡ ಕುಟುಂಬ’ ಅವಾರ್ಡ್ಸ್​ ವೇದಿಕೆ ಮೇಲೆ ಛಾಯಾ ಸಿಂಗ್​​ಗೆ ಬಿಗ್ ಸರ್​​ಪ್ರೈಸ್

‘ಜೀ ಕನ್ನಡ ಕುಟುಂಬ’ ಅವಾರ್ಡ್ಸ್​ ವೇದಿಕೆ ಮೇಲೆ ಛಾಯಾ ಸಿಂಗ್​​ಗೆ ಬಿಗ್ ಸರ್​​ಪ್ರೈಸ್

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತಧಾರೆ‘ಯಲ್ಲಿ ಭೂಮಿಕಾ ಪಾತ್ರದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ಛಾಯಾ ಸಿಂಗ್ ಅವರಿಗೆ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್-2026’ ವೇದಿಕೆಯಲ್ಲಿ ಅಚ್ಚರಿಯೊಂದು ಎದುರಾಗಿದೆ. ಶೂಟಿಂಗ್ ನಿಮಿತ್ತ ಚೆನ್ನೈ ಹಾಗೂ ಬೆಂಗಳೂರು ನಡುವೆ ಸದಾ ಓಡಾಡುತ್ತಾ, ಕುಟುಂಬದಿಂದ ದೂರವಿದ್ದು ಶ್ರಮಿಸುತ್ತಿರುವ ನಟಿಗೆ ಅವರ ನಿಜ ಜೀವನದ ಪತಿ ವೇದಿಕೆಗೆ ಅಚ್ಚರಿಯಾಗಿ ಆಗಮಿಸಿ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ.

ಧಾರಾವಾಹಿಯ ಚಿತ್ರೀಕರಣದ ಜಂಜಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಛಾಯಾ ಸಿಂಗ್ ಅವರಿಗೆ ಪತಿಯ ಈ ಹಠಾತ್ ಆಗಮನ ಸಂಪೂರ್ಣ ಅಚ್ಚರಿ ತಂದಿದೆ. ಪತಿಯನ್ನು ವೇದಿಕೆಯ ಮೇಲೆ ಕಂಡ ತಕ್ಷಣವೇ ನಟಿ ಛಾಯಾ ಸಿಂಗ್ ಅತ್ಯಂತ ಭಾವುಕರಾಗಿದ್ದಾರೆ. ಪತಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ ಅವರು, ತಮ್ಮ ಖುಷಿ ಹಾಗೂ ಭಾವುಕ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಈ ವಿಶೇಷ ಹಾಗೂ ಸುಂದರ ಸನ್ನಿವೇಶಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಉಪಸ್ಥಿತಿ ಇನ್ನಷ್ಟು ಮೆರುಗು ನೀಡಿದೆ. ನಟ ರವಿಚಂದ್ರನ್ ಅವರು ದಂಪತಿಯ ಈ ಪ್ರೀತಿಗೆ ಮೆಚ್ಚುಗೆ ಸೂಚಿಸಿ, ಅವರಿಗೆ ಜೀ ಕನ್ನಡ ವೇದಿಕೆಯ ಕಡೆಯಿಂದ ಸುಂದರವಾದ ಉಡುಗೊರೆಯಾಗಿ ಮುದ್ದಾದ ನಾಯಿಯ ಮರಿಯೊಂದನ್ನು ನೀಡಿ ಆಶೀರ್ವದಿಸಿದ್ದಾರೆ. ಈ ಉಡುಗೊರೆಯನ್ನು ಕಂಡ ಛಾಯಾ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Zee Kannada (@zeekannada)

ಅಮೃತಧಾರೆ ಧಾರಾವಾಹಿಯಲ್ಲಿ ತಮ್ಮ ನೈಜ ಅಭಿನಯದ ಮೂಲಕ ಪ್ರತಿಯೊಬ್ಬ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿರುವ ಛಾಯಾ ಸಿಂಗ್ ಅವರ ಈ ನಿಜ ಜೀವನದ ಅನುಬಂಧ ವೀಕ್ಷಕರ ಮನ ತಟ್ಟಿದೆ. ಕುಟುಂಬದಿಂದ ದೂರವಿದ್ದು ಕೆಲಸ ಮಾಡುವ ಪ್ರತಿಯೊಬ್ಬ ಕಲಾವಿದನ ಶ್ರಮ ಹಾಗೂ ಅವರ ಕುಟುಂಬದ ಬೆಂಬಲ ಎಷ್ಟಿರುತ್ತದೆ ಎಂಬುದಕ್ಕೆ ಈ ಭಾವನಾತ್ಮಕ ಸನ್ನಿವೇಶ ಸಾಕ್ಷಿಯಾಗಿದೆ.

ಇದನ್ನೂ ಓದಿ: ಅಮೃತಧಾರೆ: ಕ್ಯಾನ್ಸರ್ ಹೋರಾಟಕ್ಕೆ ಸಜ್ಜಾದ ಭೂಮಿಕಾ, ಹೊಸ ಗೆಟಪ್ ಕಂಡು ಭಾವುಕರಾದ ಫ್ಯಾನ್ಸ್

ಈ ಕೌತುಕ, ಪ್ರೀತಿ ಹಾಗೂ ಭಾವನಾತ್ಮಕ ಕ್ಷಣಗಳಿಂದ ಕಳೆಗಟ್ಟಿರುವ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್-2026’ ಕಾರ್ಯಕ್ರಮದ ಸಂಪೂರ್ಣ ಮನರಂಜನೆಯನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದಾರೆ. ಈ ವಿಶೇಷ ಸಂಚಿಕೆಯು ಶನಿವಾರ ಮತ್ತು ಭಾನುವಾರ ಸಂಜೆ 6:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language