Hashtagintro

ಜೂ.ಎನ್‌ಟಿಆರ್‌ಗೆ ಅನಿಲ್ ರವಿಪುಡಿ ಆ್ಯಕ್ಷನ್ ಕಟ್: ಹೊಸ ಸಿನಿಮಾ ಘೋಷಣೆ

ಜೂ.ಎನ್‌ಟಿಆರ್‌ಗೆ ಅನಿಲ್ ರವಿಪುಡಿ ಆ್ಯಕ್ಷನ್ ಕಟ್: ಹೊಸ ಸಿನಿಮಾ ಘೋಷಣೆ

ತೆಲುಗು ಚಿತ್ರರಂಗದ ರಾಜಮೌಳಿ ಬಳಿಕ ಸರಣಿ ಹಿಟ್ ಸಿನಿಮಾಗಳನ್ನು ನೀಡಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವುದು ಅನಿಲ್ ರವಿಪುಡಿ. ತಮ್ಮ ಕಾಮಿಡಿ ಮತ್ತು ಮನೊರಂಜನಾತ್ಮಕ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್​​ನಲ್ಲಿ ಗೆಲುವು ಕಾಣುತ್ತಲೇ ಬರುತ್ತಿದ್ದಾರೆ. ಮಸಾಲಾ ಸಿನಿಮಾಗಳ ಸೂತ್ರವನ್ನು ಚೆನ್ನಾಗಿ ಅರಿತಿರುವ ಅನಿಲ್ ರವಿಪುಡಿಗೆ ಟಾಲಿವುಡ್​​ನಲ್ಲಿ ಸಖತ್ ಬೇಡಿಕೆ ಇದೆ. ಕಳೆದ ಕೆಲ ವರ್ಷಗಳಲ್ಲಿ ನಂದಮೂರಿ ಬಾಲಕೃಷ್ಣ, ಮೆಗಾಸ್ಟಾರ್ ಚಿರಂಜೀವಿ ಮತ್ತು ನಂದಮೂರಿ ಬಾಲಕೃಷ್ಣ ಅಂಥಹಾ ಹಿರಿಯ ನಟರಿಗೆ ಸಿನಿಮಾ ನಿರ್ದೇಶನ ಮಾಡಿರುವ ಅನಿಲ್, ಇದೀಗ ಸ್ಟಾರ್ ನಟ ಜೂ ಎನ್​​ಟಿಆರ್ ಜೊತೆಗೆ ಕೈಜೋಡಿಸಿದ್ದಾರೆ.

ಪ್ರಸ್ತುತ ವೆಂಕಟೇಶ್ ಮತ್ತು ನಂದಮೂರಿ ಕಲ್ಯಾಣ್ ರಾಮ್ ನಟಿಸಿರುವ ‘ಜನವರಿ 12 ವಿಡುದಲಾ’ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿರುವ ಅನಿಲ್ ರವಿಪುಡಿ, ಇದೀಗ ಜೂ ಎನ್​​ಟಿಆರ್ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಖುದ್ದು ಜೂ ಎನ್​ಟಿಆರ್ ಅವರು ಅನಿಲ್ ರವಿಪುಡಿ ಅವರೊಟ್ಟಿಗಿನ ಚಿತ್ರವನ್ನು ಹಂಚಿಕೊಂಡಿದ್ದು, ‘ಇದು ಹಾಸ್ಯದ ಹೊಳೆ ಹರಿಸುವ ಸಿನಿಮಾ ಆಗಲಿದೆ…’ ಎಂದು ಬರೆದುಕೊಂಡಿದ್ದಾರೆ.

ವಿಶೇಷವೆಂದರೆ, ಅನಿಲ್ ರವಿಪುಡಿ ಅವರ ಮೊದಲ ನಿರ್ದೇಶನದ ‘ಪಟಾಸ್’ ಚಿತ್ರವನ್ನು ಕಲ್ಯಾಣ್ ರಾಮ್ ತಮ್ಮ ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ಈಗ ಅನಿಲ್, ಕಲ್ಯಾಣ್ ರಾಮ್ ಅವರ ಸಹೋದರ ಜೂನಿಯರ್ ಎನ್‌ಟಿಆರ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರವನ್ನೂ ಎನ್‌ಟಿಆರ್ ಆರ್ಟ್ಸ್ ನಿರ್ಮಿಸುತ್ತಿದೆ. ‘ನಮ್ಮ ಮುಂದಿನ ಚಿತ್ರವನ್ನು ಘೋಷಿಸಲು ಹೆಮ್ಮೆಯಾಗುತ್ತಿದೆ. ಮ್ಯಾನ್ ಆಫ್ ಮಾಸಸ್ ಜೂ ಎನ್​ಟಿಆರ್ ಅವರು ನಮ್ಮ ಬ್ಲಾಕ್‌ಬಸ್ಟರ್ ನಿರ್ದೇಶಕ ಅನಿಲ್ ರವಿಪುಡಿ ಜೊತೆ ಪೂರ್ಣ ಪ್ರಮಾಣದ ಮನರಂಜನೆಯ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಹಿಂದೆಂದೂ ಕಂಡಿರದ ನಗೆಹಬ್ಬಕ್ಕೆ ಸಿದ್ಧರಾಗಿ’ ಎಂದು ನಿರ್ಮಾಣ ಸಂಸ್ಥೆ ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಹೇಳಿದೆ.

ಇದನ್ನೂ ಓದಿ:ತೆಲುಗು ಚಿತ್ರರಂಗದ ಬಗ್ಗೆ ವ್ಯಂಗ್ಯ ಮಾಡಿದ ಬಾಲಿವುಡ್ ನಿರ್ದೇಶಕ

ಅನಿಲ್ ರವಿಪುಡಿ ಈಗಾಗಲೇ ಮಹೇಶ್ ಬಾಬು, ವೆಂಕಟೇಶ್, ಚಿರಂಜೀವಿ, ರವಿತೇಜ ಮತ್ತು ಬಾಲಕೃಷ್ಣ ಸೇರಿದಂತೆ ಹಲವು ಅಗ್ರ ನಟರೊಂದಿಗೆ ಕೆಲಸ ಮಾಡಿದ್ದಾರೆ. ಈಗ ಮತ್ತೊಬ್ಬ ದೊಡ್ಡ ಸ್ಟಾರ್ ಜೊತೆ ಕೈಜೋಡಿಸಿದ್ದಾರೆ. ಇನ್ನು ಜೂ ಎನ್​​ಟಿಆರ್ ಪ್ರಸ್ತುತ ‘ಡ್ರ್ಯಾಗನ್’ ಸಿನಿಮಾನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಅನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಅದಾದ ಬಳಿಕ ಅವರು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಅಥವಾ ಅದಕ್ಕೆ ಮುಂಚೆ ಅವರು ಅನಿಲ್ ರವಿಪುಡಿಯ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language